ಶಿವಮೊಗ್ಗದಲ್ಲಿ ಉಧೋ ಎಂದು ಸುರಿದ ಮಳೆ

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗ ನಗರದಲ್ಲಿ ಕಳೆದ ನಾಲ್ಕೈದು ದಿನಗಳಿಂದ ಸುರಿತುತ್ತಿರುವ ಮಳೆ ಕೊಂಚ ತಂಪೆರೆದರೂ ಬಿಸಿಲ ಝಳದಿಂದ ಮುಕ್ತಿ ನೀಡಿಲ್ಲ. ಇಂದು ಸಂಜೆ 5-50 ರಿಂದ ಗುಡುಗು ಮಿಂಚಿನೊಂದಿಗೆ ಮಳೆ ಉಧೋ… ಎಂದು ಧರೆಗಿಳಿಯುತ್ತಿದೆ‌

ಶಿವಮೊಗ್ಗ ನಗರದಲ್ಲಿ ಮಳೆ ನಾಲ್ಕೈದು ದಿನಗಳಿಂದ ಸುರಿಯುತ್ತಿದೆ. ಮುಂಗಾರು ಆರಂಭಕ್ಕೂ ಮುನ್ನ ಸುರಿತುತ್ತಿರುವ ಮಳೆ ಬಿಸಿಲ‌ಬೇಗೆಗೆ ತಂಪೆರೆದರೂ ಝಳಕ್ಕೆ ಮುಕ್ತಿ ನೀಡುತ್ತಿಲ್ಲ.‌ ಬೆಳಿಗ್ಗೆಯೆಲ್ಲ ಬಿಸಿಲಿದ್ದರೂ ಸಂಜೆಯ ನಂತರ ಕಾರ್ಮೋಡ ಕೊಂಚ ತಂಪೆರಗಿಸಿದೆ.

ನಿನ್ನೆ ಸುರಿದ ಮಖೆಯಿಂದಾಗಿ ಕಾಶಿಪುರದ ಕುವೆಂಪು ಬಡಾವಣೆಯಲ್ಲಿ ಚರಂಡಿಯಲ್ಲಿ ಮಳೆಯ ನೀರು ಸಾಗದೆ ಚಿಕ್ಕನಾಯ್ಕ ಎಂಬುವರ ಮನೆ ಜಲಾವೃತಗೊಂಡಿದೆ. ಪಾಲಿಕೆ ಸಿಟಿಯಲ್ಲಿನ ಚರಂಡಿಗಳನ್ನ ಸರಿಪಡಿಸಿದರೂ ಸ್ಮಾರ್ಟ್ ಸಿಟಿ ಕಾಮಗಾರಿಯಿಂದಾಗಿ ದುಸ್ಥಿತಿಯುಂಟಾಗಿತ್ತು.

ಇಂದು ಸುರಿದ ಅರ್ಧಗಂಟೆಯ ಮಳೆ ಏನೇನು ಅವಾಂತರ ಸೃಷ್ಠಿಸಲಿದೆ ಕಾದು ನೋಡಬೇಕಿದೆ. ಶಿವಮೊಗ್ಗ, ತೀರ್ಥಹಳ್ಳಿ, ಸಾಗರದಲ್ಲೂ ಮಳೆ ಸುರಿದಿದೆ. ಯೆಲ್ಲೋ ಅಲರ್ಟ್ ಹಿನ್ನಲೆಯಲ್ಲಿ ಇನ್ನೂ ಮೂರು ದಿನ ಮಳೆ ಸುರಿಯುವ ನಿರೀಕ್ಷೆ ಇದೆ. ಕೃಷಿ ಚಟುವಟಿಕೆಗೆ ಈ ಮಳೆ ಉತ್ತಮವೆನಿಸಿದೆ.

ಇದನ್ನೂ ಓದಿ-https://suddilive.in/archives/15132

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close