ಶಾಲಾ ಪ್ರಾರಂಭೋತ್ಸವ-ಮಕ್ಕಳನ್ನ ಸಿಹಿ ಹಂಚಿ ಬರಮಾಡಿಕೊಂಡ ಶಿಕ್ಷಕರು

ಸುದ್ದಿಲೈವ್/ಶಿವಮೊಗ್ಗ

ಇಂದಿನಿಂದ ಶಾಲೆಗಳು ಆರಂಭವಾಗಿದೆ. ಶಾಲೆಗಳ ಪ್ರಾರಂಭತ್ಸವದಲ್ಲಿ ಮಕ್ಕಳು ಮಿಂದೆದ್ದಿದ್ದಾರೆ. ಶಾಲಾ ಪ್ರಾರಂಭೋತ್ಸವವನ್ನ  ಶಿಕ್ಷಣ ಸಚಿವ‌ ಮಧು ಬಂಗಾರಪ್ಪರ ತವರು ಕ್ಷೇತ್ರದಲ್ಲಿ ಸಡಗರ ಮತ್ತು ಸಂಭ್ರಮದಿಂದ ಆಚರಿಸಲಾಗಿದೆ.

ಇಂದಿನಿಂದ ಶಾಲೆಗಳಲ್ಲಿ ಶೈಕ್ಷಣಿಕ ಚಟುವಟಿಕೆ ಆರಂಭವಾಗಲು ಚಾಲನೆ ದೊರೆತಿದೆ. ದುರ್ಗಿಗುಡಿ ಶಾಲೆಯಲ್ಲಿ ಮಕ್ಕಳಿಗೆ ಸಹಿ ಹಂಚಿ  ಶಾಲೆಗೆ ಬರಮಾಡಿಕೊಳ್ಳಲಾಗಿದೆ. ಕೆಲ ಶಾಲೆಗಳಲ್ಲಿ ಹಸಿರು ತೋರಣ ಕಟ್ಟಿ ಮಕ್ಕಳನ್ನ ಬರ ಮಾಡಿಕೊಳ್ಳಲಾಗಿದೆ.

ಸರ್ಕಾರಿ ಅನುದಾನಿತ ಶಾಲೆಗಳಾದ ಡಿವಿಎಸ್ ಶಾಲೆಯಲ್ಲಿ ಮದುವೆ ಮನೆಯಲ್ಲಿ ಕಟ್ಟಿದ ಹಸಿರು ತೋರಣ ಕಟ್ಟಿ ಸಂಭ್ರಮಿಸಲಾಗಿದೆ. ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಸಮವಸ್ತವನ್ನೂ ಹಂಚಲಾಗಿದೆ.‌ ಮಕ್ಕಳಿಗೆ ಇಂದು ಹಬ್ಬದ ವಾತಾವರಣ ನಿರ್ಮಿಸಿ ಬರ ಮಾಡಿಕೊಳ್ಳಲಾಗಿದೆ.

ಶಿವಮೊಗ್ಗ ಜಿಲ್ಲೆಯಲ್ಲಿ ಒಟ್ಟು 2840 ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಾಲೆಗಳಿದ್ದು 1 ರಿಂದ 10 ರ ವರೆಗೆ ಒಂದು ಲಕ್ಷಕ್ಕೂ ಅಧಿಕ ಮಕ್ಕಳು ಶಾಲೆಗೆ ಆಗಮಿಸಿರುವುದಾಗಿ ತಿಳಿದು ಬಂದಿದೆ.‌

ಇದನ್ನೂ ಓದಿ-https://suddilive.in/archives/15893

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket