ಈಶ್ವರಪ್ಪನವರ ಕಾರ್ಯಕ್ರಮಕ್ಕೆ ಎಂಸಿಸಿ ಅಡ್ಡಿಪಡಿಸಿದ್ದೇಕೆ?

ಸುದ್ದಿಲೈವ್/ಶಿರಾಳಕೊಪ್ಪ

ಶಿರಾಳಕೊಪ್ಪದಲ್ಲಿ  ಚುನಾವಣೆ ಭಾಷಣಕ್ಕೆ ಅನುಮತಿ ಪಡೆದಿದ್ದರೂ ಈಶ್ವರಪ್ಪನವರ ಸಾರ್ವಜನಿಕಬಹಿರಂಗ ಸಭೆಯ ಭಾಷಣಕ್ಕೆ ಅಡ್ಡಿಪಡಿಸಿರುವ ಆರೋಪ ಕೇಳಿ ಬಂದಿದೆ. ಈ ಕುರಿತು ಚುನಾವಣೆ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.

ಇಂದು ಶಿರಾಳಕೊಪ್ಪ ಮತ್ತು ಸೊರಬ ರಸ್ತೆಯ ಮೈಲಾರ ಲಿಂಗೇಶ್ವರ ದೇವಾಲಯದ ಬಳಿ ಮಾಜಿ ಡಿಸಿಎಂ ಈಶ್ವರಪ್ಪನವರ ಚುನಾವಣ ಬಹಿರಂಗ ಸಭೆಗೆ ಎಂಸಿಸಿ ಅಡ್ಡಪಡಿಸಿದೆ ಎಂಬ ಆರೋಪ ಕೇಳಿ ಬಂದಿದ್ದು. ಏಕಾಏಕಿ ವೇದಿಕೆ ಮತ್ತು ಮೈಕ್ ಗಳನ್ನ ತೆರವುಗೊಳಿಸಲಾಗಿದೆ.

ಶಿರಾಳಕೊಪ್ಪದಲ್ಲಿ ಸೊರಬ ರಸ್ತೆಯಲ್ಲಿರುವ ಸ್ಟೇಡಿಯಂ ಒಳಗಡೆ ಸಾರ್ವಜನಿಕ ಭಾಷಣಕ್ಕೆ ಅವಕಾಶ ನೀಡಲಾಗಿತ್ತು. ಆದರೆ ಈಶ್ವರಪ್ಪನವರು ಶಿರಾಳಕೊಪ್ಪ ಮತ್ತು ಸೊರಬದಲ್ಲಿರುವ ಮೈಲಾರಲಿಂಗೇಶ್ವರ ದೇವಸ್ಥಾನದ ಬಳಿ ಆಯೋಜಿಸಿದ್ದಕ್ಕೆ ದೇವಸ್ಥಾನದವರು ಆಕ್ಷೇಪಿಸಿದ್ದಾರೆ. ನಂತರ ಸ್ಥಳಕ್ಕೆ ಬಂದ ಚುನಾಣೆ ಅಧಿಕಾರಿಗಳು ಕಾರ್ಯಕ್ರಮವನ್ನ ಅಡ್ಡಪಡಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಸ್ಥಳಕ್ಕೆ ಬಂದ ಈಶ್ವರಪ್ಪನವರು ಎಂಸಿಸಿ ಅವರನ್ನ ಪ್ರಶ್ನಿಸಿದ್ದಾರೆ. ಆದರೂ ಒತ್ತಾಯ ಪೂರಕವಾಗಿ ವೇದಿಕೆ ತೆರವುಗೊಳಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ನಂತರ ಕೆಂಡಮಂಡಲರಾದ ಈಶ್ವರಪ್ಪ ಕಾಂಗ್ರೆಸ್ ಮತ್ತು ಯಡಿಯೂರಪ್ಪನವರ ವಿರುದ್ಧ ತೆರದ ವಾಹನದ ಮೇಲೆ ನಿಂತು ಭಾಷಣ ಮಾಡಿದ್ದಾರೆ.

ನಡುರಸ್ತೆಯಲ್ಲೇ ಭಾಷಣ

ತೆರದ ವಾಹನದಲ್ಲಿದ್ದ ಮೈಕ್ ಹಿಡುದ ಮಾಜಿ ಡಿಸಿಎಂ ಈಶ್ವರಪ್ಪ ನಡುರಸ್ತೆಯಲ್ಲಿ ನಿಂತು ಭಾಷಣ ಆರಂಭಿಸಿದ್ದಾರೆ. ಸಾರ್ವಜನಿಕರು ಚೇರುಗಳನ್ನ ಎಳೆದುತಂದು ರಸ್ತೆಯ ಪಕ್ಕದಲ್ಲಿಯೇ ಭಾಷಣ ಕೇಳಲು ಆರಂಭಿಸಿದ್ದಾರೆ.

ಕಾಂಗ್ರೆಸ್ ಮತ್ತು ಯಡಿಯೂರಪ್ಪನವರು ಹೊಂದಾಣಿಕೆ ಮಾಡಿಕೊಂಡು‌ ವೇದಿಕೆ ತೆರವುಗೊಳಿರಬಹುದು ಎಂದು ಈಶ್ವರಪ್ಪ ಭಾಷಣದಲ್ಲಿಯೇ ಅನುಮಾನ ಹೊರಹಾಕಿದ್ದಾರೆ. ಚುನಾವಣೆ ಗೆದ್ದು ಬಂದು ನಿಮ್ಮಿಂದ ಸನ್ಮಾನ‌ ಪಡೆಯುತ್ತೇನೆ. ಇನ್ನೊಮ್ಮೆ ನನ್ನ ಕಾರ್ಯಕ್ರಮಗಳಿಗೆ ಅಡ್ಡಿಪಡಿಸಿದರೆ ಸುಮ್ಮನೆ ಕೂರಲ್ಲ ಎಂದು ಎಚ್ಚರಿಸಿದ್ದಾರೆ.

ಇದನ್ನೂ ಓದಿ-https://suddilive.in/archives/13995

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close