ಸುದ್ದಿಲೈವ್/ಶಿವಮೊಗ್ಗ
ಶಿವಮೊಗ್ಗದಲ್ಲಿ ರಾಘವೇಂದ್ರ ಹೇಳಿಕೊಳ್ಳುವ ಕೆಲಸ ಮಾಡಿಲ್ಲ. ಹಾಗಾಗಿ ಕಾಂಗ್ರೆಸ್ ಅಭ್ಯರ್ಥಿ ಗೀತ ಶಿವರಾಜ್ ಕುಮಾರ್ ಲೋಕಸಭಾ ಚುನಾವಣೆಯಲ್ಲಿ ಗೆಲ್ಲಲಿದ್ದಾರೆ ಎಂದು ಶಾಸಕ ರವಿಗಾಣಿಗ ಅಭಿಪ್ರಾಯಪಟ್ಟರು.
ಮಾಧ್ಯಮಗಳ ಜೊತೆ ಮಾತನಾಡಿ ಬಿಜೆಪಿಯು ಹಿಂದೂತ್ವ ಮತ್ತು ರಾಮನನ್ನ ಬಂಡವಾಳ ಮಾಡಿಕೊಂಡಿದ್ದಾರೆ. ಅದನ್ನ ವ್ಯವಹಾರ ಮಾಡಿಕೊಂಡಿದ್ದಾರೆ. ಆದರೆ ನಾವು ರಾಮನನ್ನ ಮನೆಯಲ್ಲಿ ಮತ್ತು ಮನದಲ್ಲಿಟ್ಟು ಪೂಜಿಸುತ್ತೇವೆ. ಬಂಡವಾಳ ಮಾಡಿಕೊಂಡ ರಾಮ ವಾಪಾಸ್ ಬಿಜೆಪಿಗೆ ಬಾಣ ಬಿಡಲಿದ್ದಾನೆ ಎಂದರು.
ಹೆಚ್ ಡಿ ರೇವಣ್ಣ ಬಂಧನದ ಹಿಂದೆ ಬಿಜೆಪಿಯ ಷಡ್ಯಂತ್ರ ವಿದೆ. ಅಂದು ಜನಾರ್ಧನ ರೆಡ್ಡಿಯ ನಿಯಂತ್ರಣ ಮಾಡಿ ಕುಮಾರ ಸ್ವಾಮಿಗೆ ಬಿಜೆಪಿ ಬೆಂಬಲಿಸಿತು. ಬಿಹಾರ, ಒಡಿಸಾದಲ್ಲಿ ಸಣ್ಣಪುಟ್ಟ ಪಕ್ಷಮುಗಿಸಲು ಬಿಜೆಪಿ ಹೊರಟಿದೆ. ಈಗ ಬಿಜೆಪಿ ಸದಸ್ಯ ದೇವರಾಜೇ ಗೌಡ ಮಾತನಾಡಿದಾಗ ಸುಮ್ಮನಿದ್ದರು ಎಂದರು.
ಹಳೇ ಮೈಸೂರಿನಲ್ಲಿ ಬಿಜೆಪಿ ಕ್ಯಾಡೆರ್ ಇಲ್ಲ. ಹಾಗಾಗಿ ಜೆಡಿಎಸ್ ಮೂಲಕ ಬಿಜೆಪಿ ಅಸ್ಥಿತ್ವ ಕಂಡುಕೊಳ್ಳುವ ಪ್ರಯತ್ನ ಮಾಡುತ್ತಿದೆ. ಹಾಗಾಗಿ ಮೈತ್ರಿ ಮಾಡಿಕೊಂಡಿದೆ. ಮೈತ್ರಿ ಮೂಲಕ ಬಿಜೆಪಿ ಕಾಂಗ್ರೆಸ್ ನ್ನ ಟಾರ್ಗೆಟ್ ಮಾಡಿಕೊಂಡಿದೆ. ಅಂದು ಜನಾರ್ಧನ್ ರೆಡ್ಡಿ ಕುಮಾರ ಸ್ವಾಮಿಯ ಮೇಲೆ ಬೈಯ್ತಾ ಇದ್ದರು. ಈಗ ದೇವರಾಜೇ ಗೌಡ ಅವರ ಸ್ಥಾನ ಆಕ್ರಮಿಸಿಕೊಂಡಿದ್ದಾರೆ ಎಂದರು.
ಇದನ್ನೂ ಓದಿ-https://suddilive.in/archives/14243