ಸುದ್ದಿಲೈವ್/ಶಿವಮೊಗ್ಗ
ನೈರುತ್ಯ ಪದವೀಧರ ಕ್ಷೇತ್ರಕ್ಕೆ ಮತದಾನ ನಡೆಯಲು ಬೆರಳೆಕೆಯಷ್ಟು ದಿನಗಳು ಬಾಕಿ ಇರುವ ಬೆನ್ನಲ್ಲೆ ಬಿಜೆಪಿ ಅಭ್ಯರ್ಥಿ ಪರ ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ ವಿಜೇಂದ್ರ ಸೇರಿದಂತೆ ಹಲವಾರು ಜನ ಅಖಾಡಕ್ಕಿಳಿದಿದ್ದಾರೆ.
ಚನ್ನಗಿರಿ, ಹೊನ್ನಾಳಿ ಭಾಗದಲ್ಲಿ ಮಾಜಿ ಶಾಸಕ ರೇಣುಕಾಚಾರ್ಯ, ಚನ್ನಗಿರಿಯಲ್ಲಿ ಮಾಜಿ ಶಾಸಕ ಮಾಡಾಳ್ ಮಲ್ಲಿಕಾರ್ಜುನ, ರಿಪ್ಪನ್ ಪೇಟೆಯಲ್ಲಿ ಮಾಜಿ ಸಚಿವ ಹರತಾಳ ಹಾಲಪ್ಪ, ಕಾಪು ವಿಧಾನ ಸಭಾ ಕ್ಷೇತ್ರದಲ್ಲಿ ಗುರ್ಮೆ ಸುರೇಶ್ ಮತಯಾಚಿಸಿದ್ದಾರೆ.
ಆನಂದಪುರದಲ್ಲಿ ಕಾರಗಯಕರ್ತರ ಸಭೆಯಲ್ಲಿ ಮೈತ್ರಿಅಭ್ಯರ್ಥಿಗಳನ್ನ ಪರಿಷತ್ ಚುನಾವಣೆಯಲ್ಲಿ ಗೆಲ್ಲಿಸುವಂತೆ ಬಿಜೆಪಿಯ ಮುಖಂಡರು ಮನವಿ ಮಾಡಿದ್ದಾರೆ. ದಕ್ಷಿಣ ಕನ್ನಡ ಜಿಲೆಯ ಪುತ್ತೂರಿನಲ್ಲಿ ಬಿಜೆಪಿಯ ಚುನಾವಣ ಪೂರ್ವ ತಯಾರಿ ಸಭೆ ನಡೆದಿದ್ದು ಮಾಜಿ ಸಂಸದ ಪ್ರತಾಪ್ ಸಹ, ಶಾಸಕ ಹರೀಶ್ ಪೂಂಜಾ, ಅರುಣ್ ಕುಮಾರ್ ಪುತ್ತಿಲ ಮೊದಲಾದ ನಾಯಕರು ಭಾಗಿಯಾಗಿದ್ದರು.
ಶಿಕಾರಿಪುರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ.ವಿಜೇಂದ್ರ ಮೈತ್ರಿ ಪಕ್ಷದ ಅಭ್ಯರ್ಥಿಗಳಾದ ಡಾ.ಸರ್ಜಿ ಮತ್ತು ಬೋಜೇಗೌಡರ ಪರ ಬಿರುಸಿನ ಮತ ಪ್ರಚಾರ ನಡೆಸಿದ್ದಾರೆ. ಶಿಕಾರಿಪುರದಲ್ಲಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಪದವಿಪೂರ್ವ ಕಾಲೇಜು, ಬಾಲಕಿಯರ ಪದವಿ ಪೂರ್ವ ಕಾಲೇಜು,
ಸ್ವತಂತ್ರ್ಯ ಪದವಿಪೂರ್ವಕಾಲೇಜು, ಲಯನ್ಸ್ ಪ್ರೌಢಶಾಲೆ, ಕೊಟ್ಟೂರೇಶ್ವರ ಪ್ರೌಢಶಾಲೆ, ಸಿದ್ದಲಿಂಗೇಶ್ವರ ಶಾಲೆ, ಬಿಇಒ ಕಚೇರಿ, ವಿವಿಧೆಡೆ ಭರ್ಜರಿ ಮತಯಾನೆ ನಡೆಸಿದರು. ಸಾಗರದ ಸಂಜಯ್ ಮೆಮೋರಿಯಲ್ ಕಾಕೇಜಿಗೆ ರಾಜ್ಯಧ್ಯಕ್ಷರು ಭೇಟಿ ನೀಡಿ ಮೈತ್ರಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಮತಯಾಚನೆ ನಡೆಸಿದರು. ಅಜ್ಜಂಪುರದಲ್ಲಿ ಬಿಜೆಪಿ ಅಭ್ಯರ್ಥಿಗಳ ಗೆಲುವಿಗಾಗಿ ಸರ್ಕಾರಿ ಶಾಲೆ, ಆಸ್ಪತ್ರೆ, ಪ್ರೌಢಶಾಲೆ, ಕನ್ನಡ ನೂತನ ಶಾಲೆಗಳಲ್ಲಿ ಮತಯಾಚನೆ ನಡೆಸಲಾಯಿತು.
ಸಾಗರದ ಬಿಜೆಪಿ ಮಂಡಲದ ವತಿಯಿಂದ ವಾಸವಿ ಕಲ್ಯಾಣ ಮಂಟಪದಲ್ಲಿ ಮತದಾರರ ಮತ್ತು ಕಾರ್ಯಕರ್ತರಸಭೆ ನಡೆಸಲಾಯಿತು. ಇಲ್ಲಿ ಡಾ.ಸರ್ಜಿ ಮತ್ತು ಮೈತ್ರಿ ಅಭ್ಯರ್ಥಿ ಭೋಜೇಗೌಡರ ಗೆಲುವಿಗೆ ಶ್ರಮಿಸುವಂತೆ ಕೋರಲಾಯಿತು. ಕಾರ್ಯಕರ್ತರು ತಮ್ಮ ಮತದಾಋನ್ನ ವಾರ್ಡ್ ನಲ್ಲಿ ಭೇಟಿ ಮಾಡಿ ಮತಪ್ರಚಾರ ಮಾಡುವಂತೆ ಸೂಚಿಸಲಾಯಿತು.
ಈ ವೇಳೆ ಸಾಗರದಲ್ಲಿ ಶ್ರೀ ನಾಗೇಶ್ವರ ದೇವಸ್ಥಾನದಲ್ಲಿ ಡಾ.ಸರ್ಜಿ ಮತ್ತು ಬೋಜೇಗೌಡರನ್ನ ಪರಿಷತ್ ಚುನಾವಣೆಯಲ್ಲಿ ಭಾರಿ ಅಂತರದಿಂದ ಗೆಲ್ಲಿಸುವಂತೆ ದೇವರಿಗೆ ವಿಶೇಷ ಪೂಜೆ ಸಹ ನಡೆಸಲಾಯಿತು. ನಂತರ ಸಾಗರದ ಉಳ್ಳೂರಿನ ಸಿಗಂದೂರು ಎಜುಕೇಷನ್ ಟ್ರಸ್ಟ್ ನಲ್ಲಿ ಪ್ರಾಙಶುಪಾಲರು, ಉಪನ್ಯಾಸಕರು ಮತ್ತು ಸಿಬ್ಬಂದಿಗಳನ್ನ ಭೇಟಿ ಮಾಡಿ ಮತಯಾಚಿಸಲಾಯಿತು.
ಶಿವಮೊಗ್ಗ ತಾಲೂಕಿನ ಹೊಳಲೂರಿನ ಮಾರುತಿಪ್ರೌಢ ಶಾಲೆ, ಆಕ್ಸಫರ್ಡ್ ಶಾಲೆಗೆ ಭೇಟಿ ನೀಡಿದ ಎಂಎಲ್ ಸಿ ಭಾರತಿ ಶೆಟ್ಟಿ ಮೈತ್ರಿ ಪಕ್ಷದ ಅಭ್ಯರ್ಥಿಗಳನ್ನ ಗೆಲ್ಲಿಸುವಂತೆ ಕೋರಿದರು.
ಇದನ್ನೂ ಓದಿ-https://suddilive.in/archives/15757