ನಿದ್ದೆಯಿಂದ ಎದ್ದ ಗಣಿ ಮತ್ತು ಭೂ ವಿಜ್ಞಾನ ಅಧಿಕಾರಿಗಳು, ಜಮೀನ್ದಾರರ ವಿರುದ್ಧ ದೂರು ದಾಖಲು

ಸುದ್ದಿಲೈವ್/ಭದ್ರಾವತಿ

ಕೊನೆಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನಿದ್ದೆಯಿಂದ ಎಚ್ಚೆತ್ತುಕೊಂಡಿದೆ. ಅಕ್ರಮ ಮರಳುಗಾರಿಕೆ ವಿರುದ್ಧ ದೂರು ದಾಖಲಿಸಿದೆ. ಅಕ್ರಮ ಮರಳುಗಾರಿಕೆ ವಿರುದ್ಧ ದೂರುಗಳು ಬಂದರೂ ತಲೆಕೆಡೆಸಿಕೊಳ್ಳದ ಅಧಿಕಾರಿಗಳು ಈಗ ನಿದ್ದೆಯಿಂದ ಎದ್ದು ದೂರು ದಾಖಲಿಸಿದ್ದಾರೆ.  ಅದೂ ಸ್ಥಳಕ್ಕೆ ಧಾವಿಸಿ ಮರಳುಗಾರಿಕೆಗೆ ಖಾಸಗಿ ತೋಟದ ಜಮೀನ್ದಾರರ ವಿರುದ್ಧ ಅಕ್ರಮ‌ ಮರಳು ಮತ್ತು ಸಾಗಾಣಿಕೆ ವಿರುದ್ಧ ದೂರು ದಾಖಲಾಗಿದೆ.

ಭದ್ರಾವತಿ ತಾಲ್ಲೂಕು ಸಿದ್ಧಿಪುರ ಗ್ರಾಮದ ವ್ಯಾಪ್ತಿಯ ತುಂಗಾ-ಭದ್ರಾನದಿಯಲ್ಲಿ ನಡೆಯುತ್ತಿರುವ ಅನಧಿಕೃತ ಮರಳು ಗಣಿಗಾರಿಕೆಗೆ/ಸಾಗಾಣಿಕೆ ಸಂಬಂಧ ಅನೇಕ ಬಾರಿ ದೂರವಾಣಿ ಮುಖಾಂತರ ಗಣಿ ಭೂವಿಜ್ಞಾನ ಇಲಾಖೆ ಗೆ ದೂರು ಬಂದ ಸಂಬಂಧ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ದಾವಿಸಿದ್ದಾರೆ.

ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು, ಕಂದಾಯ ಇಲಾಖೆಯ ಅಧಿಕಾರಿಗಳು ಮತ್ತು ಪೋಲೀಸ್ ಇಲಾಖೆಯ ಅಧಿಕಾರಿಗಳು ಜಂಟಿಯಾಗಿ ಭದ್ರಾವತಿ ತಾಲ್ಲೂಕು ಸಿದ್ಧಿಪುರ ಗ್ರಾಮದ ವ್ಯಾಪ್ತಿಯ ತುಂಗಾ-ಭದ್ರಾನದಿಯ ಪ್ರದೇಶಕ್ಕೆ ಬೇಟಿ ನೀಡಿದ್ದಾರೆ. ಸ್ಥಳ ಪರಿಶೀಲನೆ ನಡೆಸಿದ್ದಾರೆ‌. ಪರಿಶೀಲನ ಸಮಯದಲ್ಲಿ ಅನಧಿಕೃತ ಮರಳು ಗಣಿಗಾರಿಕೆಯಲ್ಲಿ ತೊಡಗಿದ್ದ ಕೂಲಿಕಾರ್ಮಿಕರು ಇಲಾಖಾ ವಾಹ ನೋಡಿದ ತಕ್ಷಣ ಪರಾರಿಯಾಗಿದ್ದಾರೆ.

ಸ್ಥಳದಲ್ಲಿ ಮರಳು ಪಿಲ್ಟರ್ ಮಾಡಲು ಗುಂಡಿ ನಿರ್ಮಾಣ ಮಾಡಿ ಕೊಂಡಿರುವ ರಚನೆಯನ್ನು ಗಮನಿಸಿ ಹಾಗೂ ಸ್ಥಳದಲ್ಲಿ ಮರಳು ಗಣಿಗಾರಿಕೆ ಮಾಡಿ ಸಾಗಾಣಿಕೆ ಮಾಡಿರುವ ಕುರುಹುಗಳು ಮತ್ತು ವಾಹನಗಳು ಓಡಾಡಿದ ಗುರುತುಗಳನ್ನು ಗಮನಿಸಲಾಗಿದ್ದು ಹಾಗೂ ಅಲ್ಲಲ್ಲಿ ಮರಳು ಹರಡಿರುವುದು ಕಂಡುಬಂದಿದೆ.

ಮರಳು ಗಣಿಗಾರಿಕೆಗಾಗಿ ವಾಹನಗಳು ತೋಟದ ಒಳಗಿಂದ ನದಿಗೆ ಪ್ರವೇಶಿಸಿ ಮರಳು ಸಾಗಾಣಿಕೆ ಮಾಡಿರುವುದು ಕಂಡುಬಂದಿದೆ. ತೋಟದ ಮಾಲಿಕರು ಮರಳು ಗಣಿಗಾರಿಕೆಗೆ ತಮ್ಮ ತೋಟದ ಒಳಗಿಂದ ದಾರಿ ಮಾಡಿಕೊಂಡು ಮರಳು ಗಣಿಗಾರಿಕೆ ನಿರ್ವಹಿಸುತ್ತಿರುವುದು ಕಂಡುಬಂದಿರುತ್ತದೆ.

ವಾಹನಗಳು ತೋಟದ ಒಳಗಿಂದ ಮರಳು ಸಾಗಾಣಿಕೆ ಮಾಡಿರುವುದು ಕಂಡುಬಂದ ಹಿನ್ನಲೆಯಲ್ಲಿ ಜಮೀನು ಮಾಲಿಕರಾದ ಬಿ.ಆರ್ ವೇಣುಗೋಪಾಲ್ ಬಿನ್ ಲೇಟ್ ಬಿ.ಆರ್ ರಾಮಸ್ವಾಮಿ ಹಾಗೂ ಬಿ. ಆರ್ ಕೃಷ್ಣಮೂರ್ತಿ ಬಿನ್ ಲೇಟ್ ಬಿ.ಆರ್ ರಾಮಸ್ವಾಮಿ ಸರ್ವೆ ನಂ. 86/3, 87/2,87/3 ಇವರಿಗೆ ನೋಟೀಸ್ ಜಾರಿ ಮಾಡಲಾಗಿತ್ತು.

ಆದಾಗ್ಯೂ ಜಮೀನು ಮಾಲಿಕರು ತಮ್ಮ ತೋಟದ ಒಳಗಿಂದ ದಾರಿ ಮಾಡಿಕೊಂಡು ಮರಳು ಗಣಿಗಾರಿಕೆ ಹಾಗೂ ಸಾಗಾಣಿಕೆ ಮಾಡಿರುವುದು ಸ್ಥಳ ಪರಿಶೀಲನೆಯಿಂದ ಕಂಡುಬಂದಿದೆ. ವಾಹನಗಳು ಮರಳು ಗಣಿಗಾರಿಕೆಗಾಗಿ ನದಿಯನ್ನು ಪ್ರವೇಶಿಸದಂತೆ ಅಡ್ಡಲಾಗಿ ಟ್ರಂಚ್ ನಿರ್ಮಾಣ ಮಾಡಲಾಗಿತ್ತು, ಜಮೀನು ಮಾಲಿಕರಿಗೆ ನೋಟೀಸ್ ಜಾರಿ ಮಾಡದಾಗ್ಯೂ ಸಹ ಸ್ಥಳದಲ್ಲಿ ಅನಧಿಕೃತ ಮರಳು ಗಣಿಗಾರಿಕೆಗೆ/ಸಾಗಾಣಿಕೆ ಅವಕಾಶ ನೀಡಲಾಗಿದೆ.

ಜಮೀನು ಮಾಲಿಕರು ತಮ್ಮ ತೋಟದ ಒಳಗಿಂದ ರಸ್ತೆ ಮಾಡಿಕೊಂಡು ಅನದಿಕೃತ ಮರಳು ಗಣಿಗಾರಿಕೆ ಹಾಗೂ ಸಾಗಾಣಿಕೆ ಮಾಡಿ ಇಲಾಖೆಯ ಅನುಮತಿಯಿಲ್ಲದೆ ಸರ್ಕಾರಕ್ಕೆ ರಾಜಧನ ನಷ್ಟ ವನ್ನುಂಟುಮಾಡಿ ಕಳ್ಳತನದಿಂದ ಮರಳು ಸಾಗಾಣಿಕೆ ಮಾಡಿರುವುದು ಸ್ಥಳ ಪರಿಶೀಲನೆಯಿಂದ ಕಂಡುಬಂದಿದೆ. ನಿಯಮಾನುಸಾರ ಜಮೀನು ಮಾಲಿಕರ ವಿರುದ್ಧ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ-https://suddilive.in/archives/15674

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close