Girl in a jacket

ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಸರ್ಕಾರ ಜವಬ್ದಾರಿಯುತವಾಗಿ ನಡೆದುಕೊಂಡಿದೆ-ಚೆಲುವರಾಯ ಸ್ವಾಮಿ

ಸುದ್ದಿಲೈವ್/ಶಿವಮೊಗ್ಗ

ಪ್ರಜ್ವಲ್ ರೇವಣ್ಣ ವಿಷಯದಲ್ಲಿ ಎಸ್ ಐಟಿ ರಚನೆ ಆಗಿದೆ. ಸರ್ಕಾರ ಜವಬ್ದಾರಿಯಿಂದ ನಡೆದುಕೊಂಡಿದೆ. ನ್ಯಾಯಾಲಯದಲ್ಲಿ ಮಾಜಿ ಸಚಿವ ರೇವಣ್ಣರಿಗೆ ಬೇಲ್ ರಿಜೆಕ್ಟ್ ಆದ ಕಾರಣ  ಬಂಧನವಾಗಿದೆ ಎಂದು ಕೃಷಿ ಸಚಿವ ಚೆಲುವರಾಯ ಸ್ವಾಮಿ ಹೇಳಿದರು.

ಮಾಧ್ಯಮಗಳಿಗೆ ಮಾತನಾಡಿ, ಮಹಿಳೆಯವರ ದೌರ್ಜನ್ಯ ಪ್ರಕರಣವನ್ನ  ಡಿಕೆಶಿ ಅವರು ಗಂಭೀರವಾಗಿ ತೆಗೆದುಕೊಂಡಿದ್ದಾರೆ. ಅಮಿತ್ ಶಾ ಅವರು ಮಹಿಳೆ ಅವರಿಗೆ ಆಗಿರುವ ಅನ್ಯಾಯವನ್ನ ಬೇರೆ ಪಕ್ಷದಲ್ಲಿ ನಡೆದಿದ್ದರೆ ಎಷ್ಟು ಮಾತನಾಡುತ್ತಿದ್ದರು. ಅವರು ಇಂದು ಕುಮಾರ ಸ್ವಾಮಿಯವರನ್ನ ಯಾವಕಾರಣಕ್ಜೆ ಭೇಟಿ ಮಾಡುದ್ರು ಎಂಬುದು ಗೊತ್ತಾಗಬೇಕಿದೆ ಎಂದರು.

ತನಿಖೆ ವಿಚಾರದಲ್ಲಿ ರಾಜಕೀಯ ನಡೆಸೊಲ್ಲ. ಆದರೆ ಸಂತ್ರಸ್ತೆ ನ್ಯಾಯ ಒದಗಿಸಬೇಕು. ಸಹಜವಾಗಿ ದೇವೇಗೌಡರು ಸುಧೀರ್ಘ ರಾಜಕಾರಣ ಮಾಡಿಕೊಂಡು ಬಂದಿದ್ದಾರೆ. ಯಾರೂ ಖುಷಿ ಪಡುವ ವಿಚಾರವಲ್ಲ. ಅವರು ನಮಗೂ ನಾಯಕರು ಅಲ್ಲ. ಆತಂಕ ಸಹಜ ಏನೂ ಮಾಡಲು ಆಗಲ್ಲ.

ಚುನಾವಣೆ ರಾಷ್ಟ್ರದ ಮಟ್ಟದಲ್ಲಿ ಮೋದಿ ರಾಜ್ಯವನ್ನ ಕಡೆಗಣಿಸಿದ್ದಾರೆ. ಆರ್ಥಿಕ ಸಹಾಯ, ಬರ ವಿಚಾರ ಸೇರಿ ಎಲ್ಲ ವಿಚಾರವೂ ಕಡೆಗಣಿಸಿದೆ. ಭೀರತೆ ಕೇಂದ್ರಕ್ಕೆ ಬರಬೇಕು ಎಂದರೆ ಅವರನ್ನ ಅಧಿಜಾರದಿಂದ ಕೆಳಗಿಳಸಬೇಕು. ಈ ಬಾರಿ ಕಾಂಗ್ರಸ್ ಗೆಲ್ಲಲಿದೆ. ಶಿವಮೊಗ್ಗದಲ್ಲಿ ಗೀತ ಶಿವರಾಜ್ ಕುಮಾರ್ ಗೆಲ್ಲಲಿದ್ದಾರೆ ಎಂದರು.

ಇದನ್ನೂ ಓದಿ-https://suddilive.in/archives/14246

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Suddi Live