ಶಿವಮೊಗ್ಗದಲ್ಲಿ ಭರ್ಜರಿ ಮಳೆ

ಸುದ್ದಿಲೈವ್/ಶಿವಮೊಗ್ಗ

ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದಲ್ಲಿ ಮಧ್ಯಾಹ್ನ ಬಿಡದೇ ವರ್ಷಧಾರೆಯಾಗಿದೆ. ಕಳೆದ ಒಂದು ಗಂಟೆಯಿಂದ ಮಳೆ ಸುರಿದಿದೆ.

ಗುಡುಗು ಮಿಂಚಿನ ಜೊತೆ ಭಾರೀ ಮಳೆ ಸುರಿದಿದೆ. ಶಿವಮೊಗ್ಗ ಜಿಲ್ಲೆಯಾದ್ಯಂತ ಸುರಿಯುತ್ತಿರುವ ಮಳೆ. ಮಧ್ಯಾಹ್ನ 12ಕ್ಕೆ ಸಂಜೆಯಂತ ವಾತವರಣ ನಿರ್ಮಾಣವಾಗಿತ್ತು.

ಶಿವಮೊಗ್ಗ ಸಾಗರ , ಹೊಸನಗರ, ತೀರ್ಥಹಳ್ಳಿ ಸೇರಿದಂತೆ ವಿವಿಧೆಡೆ  ಮಳೆ‌ ಸುರಿದಿದೆ. ಮಳೆಯ ಅಬ್ಬರಕ್ಕೆ  ಮಲೆನಾಡಿಗರು ಅಕ್ಷರಶಃ ಗಾಬರಿಯಾಗುವಂತ ಸ್ಥಿತಿ ನಿರ್ಮಾಣವಾಗಿದೆ.

ಶಿವಮೊಗ್ಗ ನಗರದಲ್ಲಿ ತಗ್ಗು ಪ್ರದೇಶದಲ್ಲಿ ನೀರು ನುಗ್ಗುವ ಭಯದಲ್ಲಿ ಜನರು ಇದ್ದಾರೆ. ಶಿವಮೊಗ್ಗ ಸ್ಮಾರ್ಟ್ ಸಿಟಿಯ ಚರಂಡಿಗಳು ಹಳ್ಳಗಳಂತಾಗಿದೆ. ರಸ್ತೆಯ ಮೇಲೆ  ಮಳೆ ನೀರು ಹರಿಯುತ್ತಿದೆ.

ಇಷ್ಟೆಲ್ಲಾ ಮಳೆ ಸುರಿದರೂ ಇಳೆಗೆ ತಂಪೆರಗಿದರೂ ಸೆಖೆಯ ಝಳ ಮಾತ್ರ ಕಡಿಮೆಯಾಗಿಲ್ಲ. ನಿನ್ನೆ ರಾತ್ರಿಯೂ ಹೀಗೆ ಸುರಿದೆ. ಇಂದು ಮಧ್ಯಾಹ್ನವೂ ಉತ್ತಮ ಮಳೆಯಾಗಿದೆ. ಝಳ ಮಾತ್ರ ಕಡಿಮೆಯಾಗಿಲ್ಲ.

ಕಳೆದ ಮೂರು ನಾಲ್ಕು ದಿನಗಳಿಂದ ಮಳೆ ಸುರಿಯುತ್ತಿದೆ. ಪಾಲಿಕೆಯ ಸಿಬ್ಬಂದಿಗಳು ಕೆಲ ಪ್ರಮುಖ ಚರಂಡಿಗಳನ್ನ ಸ್ವಚ್ಛಗೊಳಿಸಿದ್ದಾರೆ. ಆದರೂ ಸಹ ಇದನ್ನ ಹೊರತು ಪಡಿಸಿ ಇಂತಹ ವಾತಾವರಣ ನಿರ್ಮಾಣವಾಗಿದೆ. ಮಳೆಯ ರಭಸ ಹಾಗಿತ್ತು.

ಇದನ್ನೂ ಓದಿ-https://suddilive.in/archives/15022

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close