ಸುದ್ದಿಲೈವ್/ಶಿವಮೊಗ್ಗ
ಸೂಡಾ ಕಚೇರಿ ಎದುರು ಶಿವಮೊಗ್ಗ ನಾಗರೀಕ ಹಿತರಕ್ಷಣ ವೇದಿಕೆಗಳ ಒಕ್ಕೂಟ ಪ್ರತಿಭಟನೆ ನಡೆಸಿದೆ. ಒಕ್ಕೂಟಗಳ ಅಧ್ಯಕ್ಷ ವಸಂತ್ ಕುಮಾರ್ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ರಸ್ತೆಯನ್ನ ಬ್ಲಾಕ್ ಮಾಡಿಕೊಂಡಿರುವ ಅಧಿಕಾರಿಗಳಿಗೆ ದಿಕ್ಕಾರವನ್ನ ಕೂಗಿ ಪ್ರತಿಭಟನೆ ನಡೆಸಲಾಗಿದೆ.
ಶಿವಮೊಗ್ಗ ನಗರ ಮಹಾನಗರ ಯೋಜನೆ 2023 ರ ನಕ್ಷೆಯ ಪ್ರಕಾರ ಈ ಜಾಗ ಸಾರ್ವಜನಿಕರಿಗೆ ಓಡಾಡುವ ಜಾಗ ಆಗಿದೆ. ಆದರೆ ಸೂಡ ಅಧಿಕಾರಿಗಳು ರಸ್ತೆಯನ್ನ ಕಬಳಿಸಿ ವಾಹನ ನಿಲುಗಡೆಯ ಶೆಡ್ ನ್ನ ನಿರ್ಮಿಸಿಕೊಂಡಿದ್ದಾರೆ ಎಂದು ದೂರಾಗಿದೆ.
.
2030 ರ ಮಹಾನಗರ ಯೋಜನೆ/ಸಿಡಿಪಿ ಪ್ರಕಾರ ರಸ್ತೆ ಬಿಟ್ಟ ಮೇಲೆ ಮತ್ತೆ ಶೆಡ್ ನಿರ್ಮಿಸುಬುದು ಕಾನೂನು ಬಾಹಿರ ಮತ್ತು ಅಪರಾಧಗಳು ಎಂದು ಒಕ್ಕೂಟ ಆರೋಪಿಸಿದೆ. ಒಂದು ವಾರದೊಳಗೆ ಶೆಡ್ ತೆರವುಗೊಳಿಸದಿದ್ದರೆ ಇನ್ಬಷ್ಟು ಕಾನೂನು ಹೋರಾಟಗಳು ಅನಿವಾರ್ಯ ಎಂದು ಒಕ್ಜೂಟ ಎಚ್ಚರಿಸಿದೆ.
ಇದನ್ಬೂ ಓದಿ-https://suddilive.in/archives/15554