ಕರಡಿ ಆಪರೇಷನ್ ಯಶಸ್ವಿ

ಸುದ್ದಿಲೈವ್/ಶಿವಮೊಗ್ಗ

ಸುಮಾರು 8 ಗಂಟೆಯ ಕಾರ್ಯಾಚರಣೆ, ಎರಡು ಮೂರು ವರ್ಷದ ಕರಡಿಯೊಂದನ್ನ ಹತ್ತಿರದ ಕಾಡಿಗೆ ಕಳುಹಿಸಲಾಗಿದೆ, ಗೊಬ್ಬರಗೊಂಡ, ಬಾಸುಮಟ್ಟಿ ಕಾಡಿನಿಂದ ಈ ಕರಡಿ ನಾಡಿಗೆ ಬಂದು ಪೇಚಾಡುವಂತಾಗಿದೆ.

ತಾಲ್ಲೂಕಿನ ಈಸೂರು ಗ್ರಾಮದಲ್ಲಿ ಗುರುವಾರ  ಕರಡಿಯೊಂದು ಪತ್ಯಕ್ಷವಾಗಿತ್ತು. ಇದೀಗ ಆ ಕರಡಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿ, ಕಾಡಿಗೆ  ಅಟ್ಟಿದ್ದಾರೆ.

ಈಸೂರಿನ ವೀರಭದ್ರೇಶ್ವರ ದೇವಸ್ಥಾನ ಹಿಂಭಾಗದ ಕೆರೆಯಲ್ಲಿ ಕರಡಿ ಕಾಣಿಸಿಕೊಂಡಿತ್ತು. ಕರಡಿಯನ್ನು ಕಂಡ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದರು. ಆದರೆ ಕರಡಿ ದಿನವಿಡಿ ಅರಣ್ಯ ಇಲಾಖೆ ಸಿಬ್ಬಂದಿಯನ್ನು ಪರದಾಡುವಂತೆ ಮಾಡಿತ್ತು.

ಸುಮಾರು 8 ಗಙಟೆಯ ಕಾರ್ಯಾಚರಣೆಯಲ್ಲಿ ಪೊದೆಯೊಳಗೆ ಕುಳಿತುಕೊಂಡ ಕರಡಿ ನಂತರ ಒಮ್ಮೆ ಹೊರಗೆ ಬಂದು ಮತ್ತು ಪೊದೆ ಸೇರಿಕೊಂಡಿತ್ತು. ನಂತರ ಸುತ್ತಲು ಬಲೆ ಕಟ್ಟಿಕೊಂಡ ಇಲಾಖೆ, ಪೊಲೀಸರೊಂದಿಗೆ ಕಾರ್ಯಾಚರಣೆಗೆ ಇಳಿದಿದ್ದಾರೆ. ನಂತರ ಯಶಸ್ವಿಯಾಗಿ ಕಾಡಿಗೆ ಕಳುಹಿಸಲಾಗಿದೆ.

ಆ ಬಳಿಕ ನಿನ್ನೆ ಶುಕ್ರವಾರ ಸಂಜೆ ನಡೆದ ಕಾರ್ಯಾಚರಣೆ ವೇಳೆ ಅರಣ್ಯ ಇಲಾಖೆ ಸಿಬ್ಬಂದಿ ಕೆರೆಯ ಸುತ್ತ  ಬಲೆ ಕಟ್ಟಿ ಕರಡಿಯನ್ನು ಕಾಡಿಗೆ ಅಟ್ಟಿಸುವಲ್ಲಿ ಯಶಸ್ವಿಯಾದರು. ಸದ್ಯ ಕರಡಿ ಗೊಬ್ಬರದ ಹೊಂಡ ಅರಣ್ಯ ಪ್ರದೇಶಕ್ಕೆ ತೆರಳಿದೆ.

ಇದನ್ನೂ ಓದಿ-https://suddilive.in/archives/15479

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close