Girl in a jacket

ಅನುಮಾನಸ್ಪದವಾಗಿ ಚಾನೆಲ್ ನಲ್ಲಿ ದೊರೆತ ಶವ

ಸುದ್ದಿಲೈವ್/ಭದ್ರಾವತಿ

ಭದ್ರಾವತಿ ತಾಲ್ಲೂಕು ಭದ್ರಾ ಕಾಲೊನಿ ಲಕ್ಷ್ಮೀಪುರದ 7 ನೇ ಬ್ರಾಂಚ್ ಸಣ್ಣಚಾನಲ್‌ನಲ್ಲಿ  ಮೃತದೇಹವೊಂದು ಪತ್ತೆಯಾಗಿದೆ. ಪತ್ತೆಯಾದ ಮೃತದೇಹವನ್ನ‌ ಪ್ಲಾಸ್ಟಿಕ್ ನಲ್ಲಿ ಬಿಗಿದು ಚಾನೆಲ್ ಗೆ ಎಸದಿರುವುದಾಗಿ ತಿಳಿದು ಬಂದಿದೆ

ಚಾನೆನ್ ದಂಡೆಯ ಮೇಲೆ ಬೈಕ್ ನಿಲ್ಲಿಸಲಾಗಿದೆ. ಈ ಬೈಕ್ ಸಹ ಚಾನೆಲ್ ನಲ್ಲಿ ಪತ್ತೆಯಾದ ಮೃತದೇಹನಿಗೆ ಸೇರಿದ್ದು ಎನ್ನಲಾಗಿದೆ.  ಕೇಶವಪುರ ಬಡಾವಣೆಯ ವಾಸಿ, ಯುಪಿಎಸ್‌ ದುರಸ್ತಿಗಾರ ಲೋಕೇಶ (37) ಅವರದ್ದು ಎಂದು ಗುರುತಿಸಕಾಗಿದೆ.

ನಿನ್ನೆ ಬೆಳಗ್ಗೆ ಗ್ರಾಮಸ್ಥರು ವಾಯುವಿಹಾರಕ್ಕೆ ಹೋಗುವಾಗ ಚಾನಲ್ ಬಳಿ ಬಿದ್ದಿರುವ ದ್ವಿಚಕ್ರ ವಾಹನ ಮತ್ತು ಚಾನಲ್‌ನಲ್ಲಿ ಶವ ಬಿದ್ದಿರುವುದು ಕಂಡು ಬಂದಿದೆ.

ತಕ್ಷಣವೇ ಪೊಲೀಸರಿಗೆ ಸ್ಥಳೀಯರು ವಿಷಯ ತಿಳಿಸಿದ್ದಾರೆ. ಭದ್ರಾವತಿ  ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಆಗಮಿಸಿ ಶವವನ್ನು ಸಾಗಿಸಿದ್ದಾರೆ. ಸಾವಿಗೆ ಕಾರಣ ತಿಳಿದು ಬಂದಿಲ್ಲ. ಆದರೆ ಈ ಸಾವು ಹಲವು ಅನುಮಾನದಿಂದ ಕೂಡಿರುವುದಾಗಿ ಸ್ಥಳೀಯರು ಶಂಕಿಸಿದ್ದಾರೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ-https://suddilive.in/archives/15010

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
close