ಸುದ್ದಿಲೈವ್/ಶಿವಮೊಗ್ಗ
ಬಿಜೆಪಿಯ ಅಭ್ಯರ್ಥಿ ಸರ್ಜಿ ಅವರು ಪಕ್ಷವನ್ನ ಗುಂಡು ಪಕ್ಷವನ್ನಾಗಿ ಮಾಡಿದ್ದಾರೆ. ನಾವು ಪಕ್ಷದಲ್ಲಿ ಇರುವ ತನಕ ಯಾವತ್ತೂ ವಿದ್ಯಾವಂತರನ್ನ ಗುಂಡು ಪಾರ್ಟಿಗೆ ತಳ್ಳಿರಲಿಲ್ಲ ಎಂದು ಈಶ್ವರಪ್ಪ ಬೇಸರ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು. ಕೆಲ ವಿದ್ಯಾವಂತರು ಪಾರ್ಟಿಗೆ ಹೋಗಿ ನಶೆ ಇಳಿದ ಮೇಲೆ ಇಲ್ಲ ಸರ್ಜಿ ಬೇಜಾರು ಆಗಬಾರದು ಎಂದು ಪಾರ್ಟಿಗೆ ಹೋಗಿದ್ವಿ. ನಾವೆಂದಿಗೂ ಭಟ್ಟರ ಪರವಾಗಿ ಇದ್ದೇವೆ ಎನ್ನುತ್ತಾರೆ.
ಒಬ್ಬ ವೈದ್ಯರಾಗಿ ವಿದ್ಯಾವಂತ ಮತದಾರರನ್ನ ಗುಂಡು ಪಾರ್ಟಿಗೆ ಕರೆದು ಹೀಗೆಮಾಡೋದು ಎಷ್ಟು ಸರಿ ಎಂದು ಪ್ರಶ್ನಿಸಿದ ಅವರು ಹರ್ಷನ ಕಗ್ಗೊಲೆಯಾದಾಗ ಕೆಲ ಪ್ರಗತಿಪರರ ಜೊತೆ ಡಾ.ಸರ್ಜಿ ಶಾಂತಿಗಾಗಿ ನಡಿಗೆ ನಡೆಸಿದರು.ಚುನಾವಣೆ ಸ್ಪರ್ಧಿಸಲು ಹಿಂದೂ ಆಗಿ ಆಕ್ರೋಶ ವ್ಯಕ್ತಪಡಿಸದೆ ಅಥವಾ ಸುಮ್ಮನೆ ಇರದೆ ಈಗ ಬಿಜೆಪಿಗೆ ಸೇರಿ ಚುನಾವಣೆ ಎದುರಿಸುತ್ತಿದ್ದಾರೆ. ಇದೊಂದು ಅವಕಾಶ ವಾದಿಯ ರೀತಿ ಬಿಂಬಿತವಾಗಿದ್ದಾರೆ ಎಂದು ದೂರಿದರು.
ಪದವೀಧರರು ಎಂದೂ ನಮ್ಮನ್ನ ಕೈಬಿಟ್ಟಿಲ್ಲ. ಅವರಿಗೆ ಎಂದೂ ಗುಂಡು ಪಾರ್ಟಿ ಕೊಟ್ಟಿಲ್ಲ. ಸುಶಿಕ್ಷಿತರ ಕ್ಷೇತ್ರವನ್ನ ಹಾಳು ಮಾಡಿದ್ದಾರೆ. 6 ಜಿಲ್ಲೆಯ ಪದವೀಧರರನ್ನ ದುಶ್ಚಟಕ್ಕೆ ತಳ್ಳಲು ಅವಕಾಶ ಮಾಡಿಕೊಡಬಾರದು ಎಂದು ಗುಡುಗಿದರು.
ನಾನು ಭಟ್ಟರನ್ನ ಮೇ.20ರವರೆಗೆ ಕಾದೆ. ನಂತರ ನಮ್ಮಕಾರ್ಯಕರ್ತರು ಬೆಂಬಲಿಸುತ್ತಿದ್ದಾರೆ. ಕೆಜೆಪಿಗೆ ಹೋದವರು ನಮ್ಮನ್ನ ಬಿಟ್ಟು ಹೋಗಿದ್ದಾರೆ. ಉಡುಪಿ ಮತ್ತು ಮಂಗಳೂರಿನ ಕಾರ್ಯಕರ್ತರು ಸುಶಿಕ್ಷಿತರು, ನರೇಂದ್ರ ಮೋದಿ ಮತ್ತು ಅಮಿತ್ ಶಾರಿಗೆ ಬೆಂಬಲಿಸಲಿದ್ದಾರೆ. ಇವರ ಜೊತೆ ರಘುಪತಿ ಭಟ್ಟರು ಇದ್ದಾರೆ. ಇವರನ್ನೇ ಕರಾವಳಿ ಭಾಗದ ಮತದಾರರು ಗೆಲ್ಲಿಸಲಿದ್ದಾರೆ ಎಂದರು.
ಅಭ್ಯರ್ಥಿಪರ ಕೆಲಸ ಮಾಡುವವರ ಬಗ್ಗೆ ನಂಬಿಕೆ ಇರಬೇಕು. ಇಲ್ಲಿ ಸರ್ಜಿಯ ಗುಂಡು ಪಾರ್ಟಿ, ಕರಾವಳಿಯಲ್ಲಿ ರಾಷ್ಟ್ರೀಯವಾದದ ರಘುಪತಿ ಭಟ್ಟರು ಒಂದುಜಡೆ ಇದ್ದಾರೆ. ಬಿಜೆಪಿಯನ್ನ ಸರ್ಜಿ ಹಾಳು ಮಾಡುತ್ತಿದ್ದಾರೆ. ನಾನು 40 ವರ್ಷ ಪಾರ್ಟಿ ಕಟ್ಟಿದವನು. ಗುಂಡು ಕೊಡಿಸಿ ಪಕ್ಷ ಬೆಳಸಲಿಲ್ಲ. ಸರ್ಜಿ ನಮಗೆ ಸ್ಪರ್ಧಿ ಹೌದೋ ಅಲ್ಲವೋ ಗೊತ್ತಿಲ್ಲ. ಆದರೆ ಮತದಾರರು ಸುಸಂಸ್ಕೃತ ವ್ಯಕ್ತಿಯನ್ನ ಆಯ್ಕೆ ಮಾಡಲಿ ಎಂದರು.
ರಘುಪತಿಭಟ್ ಮಾತು
ಶಾಸಕನಾದ ಮೇಲೆ ಮಲೆನಾಡಿನ ಸಮಸ್ಯೆಗೂ ಸ್ಪಂಧಿಸುವ ಕೆಲಸ ಮಾಡುವೆ. ಚನ್ನಗಿರಿ ಪ್ರವಾಸದ ವೇಳೆ, ಪೊಲೀಸರ ಮೇಲಿನ ದೌರ್ಜನ್ಯ ನೋಡಿ ಬಂದಿದ್ದೇನೆ. ಠಾಣೆಯ ಗ್ಲಾಜುಗಳು ಉಳಿದಿಲ್ಲ. ರಾಷ್ಟೃಧ್ವಜವನ್ನ ಕಿತ್ತು ಬಿಸಾಕಿದ್ದಾರೆ.
ಲಾಕಪ್ ಡೆತ್ ಆರೋಪದ ಹಿನ್ನಲೆಯಲ್ಲಿ ಮನವಿ ಪ್ರತಿಭಟನೆ ಸ್ವಾಭಾವಿಕ, ಠಾಣೆಯ ಮೇಲಿನ ದಾಳಿಯ ಬಗ್ಗೆ ಆರೋಪಿ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು. ಏನೇ ಮಾಡಿದ್ರೂ ಬ್ರದರ್ ರಕ್ಷಣೆ ಇದೆ ಎಂಬ ಮನೋಬಾವ ಇದೆ. ಇದು ಬದಲಾಗಬೇಕು ಎಂದರು.
ಡೆತ್ ನೋಟ್ ಬರೆದರೂ ಸರ್ಕಾರ ಕಣ್ಮುಚ್ಚಿ ಕುಳಿತಿದೆ
ಚಂದ್ರಶೇಖರ್ ಅವರ ಆತ್ಮಹತ್ಯೆಯ ಬಗ್ಗೆಯೂ ಸಮಗ್ರ ತನಿಖೆಯಾಗಬೇಕು. ಈಶ್ವರಪ್ಪನವರ ವಿರುದ್ಧ ಆರೋಪ ಬಂದಾಗ ಮೇಲ್ಪಂಕ್ತಿ ಹಾಕುವ ಕೆಲಸ ಮಾಡಿದ್ದಾರೆ. ಈಗಲೂ ಅದೇ ಕೆಲಸ ಮಾಡಬೇಕು. ರಾಜ್ಯ ಸರ್ಕಾರ ಗಂಭೀರವಾಗಿ ತೆಗೆದುಕೊಳ್ಳಬೇಕು. ಡೆತ್ ನೋಟ್ ಬರೆದ ನಂತರವೂ ಸರ್ಕಾರ ಕಣ್ಮುಚ್ಚಿ ಕುಳಿತಿದೆ. ಪದವೀಧರ ಕ್ಷೇತ್ರದ ಶಾಸಕನಾದರೆ ಈ ಎಲ್ಲ ಸಮಸ್ಯೆಗಳಿಗೆಧ್ವನಿಯಾಗಲಿದ್ದೇನೆ ಎಂದರು.
ಗೆದ್ದರೆ ಹಿಂದುತ್ವದ ಗೆಲವು
ಬಿಜೆಪಿ ಕಾರ್ಯಕರ್ತರ ರಕ್ಷಣೆ ಆಗಬೇಕು. ಹಿಂದೂ ಪರ ಕಾರ್ಯಕರ್ತರ ಧ್ವನಿಯಾದವರು ನಾನುಮತ್ತು ಈಶ್ವರಪ್ಪನವರಾಗಿದ್ದೇವೆ. ನಾನು ಗೆದ್ದ ಮೇಲೆ ಬಿಜೆಪಿಗೆ ಬರುತ್ತೇನೆ. ಬಿಜೆಪಿ ಕರೆಯಲಿ ಬಿಡಲಿ ಬಿಜೆಪಿ ಜೊತೆ ಕೆಲಸ ಮಾಡುತ್ತೇನೆ. ಸೋತರೆ ನನ್ನ ವೈಯುಕ್ತಿಕ ಸೋಲು. ಗೆದ್ದರೆ ಹಿಂದುತ್ವದ ಗೆಲವು ಎಂದರು.
ಇದನ್ನೂ ಓದಿ-https://suddilive.in/archives/15694