ಸಹಕಾರಿ ಸಂಘಗಳು ಹೆಚ್ಚು ಶಾಖೆಗಳನ್ನ ತೆರೆಯುವುದು ಪೈಪೋಟಿಗಾಗಿ ಅಲ್ಲ-ಅಮರೇಶ್ವರ ಸ್ವಾಮೀಜಿ

ಸುದ್ದಿಲೈವ್/ಶಿವಮೊಗ್ಗ

ಸಹಕಾರಿ ಸಂಘಗಳ ಶಾಖೆಗಳು ಹೆಚ್ಚು ಹೆಚ್ಚು ಶಾಖೆಗಳನ್ನು ತೆರೆಯುವುದು ಪೈಪೋಟಿಗಲ್ಲ , ಬದಲಿಗೆ ಜನರಿಗೆ ಉತ್ತಮ ಆರ್ಥಿಕ ಸಹಾಯ ನೀಡುವ ಉದ್ದೇಶದಿಂದ ಸಹಕಾರ ಸಂಘಗಳು ಆರಂಭಗೊಳ್ಳುವುದು ಅಭಿನಂದನೀಯ ಎಂದು ಜಡೆ ಹಿರೇಮಠದ ಶ್ರೀ ಷ. ಬ್ರ. ಘನಬಸವ ಅಮರೇಶ್ವರ ಸ್ವಾಮಿಜಿ ನುಡಿದರು.

ಶುಕ್ರವಾರ ಸೊರಬ ಪಟ್ಟಣದಲ್ಲಿ ಸೇಫ್ ಸ್ಟಾರ್ ಸೌಹಾರ್ಧ ಸಹಕಾರಿ ಸಂಘ ನಿಯಮಿತ ಇದರ ೧೭ ನೇ ಶಾಖೆಗೆ ಚಾಲನೆ ನೀಡಿ ಮಾತನಾಡಿದ ಅವರು,
ಅನೇಕರಿಗೆ ಉದ್ಯೋಗ ನೀಡುವ ಕಾರ್ಯ ಸಹಕಾರಿ ಸಂಸ್ಥೆಗಳಿಂದ ಆಗುತ್ತಿದೆ ಸೇಫ್ ಸ್ಟಾರ್ ಸೌಹಾರ್ಧ ಸಹಕಾರಿ ಸಂಘ ೨.೫೭ ಕೋಟಿ ವ್ಯವಹಾರ ನಡೆಸಿರುವುದು ದೊಡ್ಡ ಸಾಧನೆ ರಾಷ್ಟ್ರೀಯ ಬ್ಯಾಂಕ್‌ಗಳಲ್ಲಿ ವ್ಯವಹಾರ ನಡೆಸಲು ಜನ ಸಮಾನ್ಯರು ಕಷ್ಟಪಡುತ್ತಿರುವಾಗ ಅದಕ್ಕೆ ಪೂರಕವಾಗಿ ಸಹಕಾರಿ ಸಂಘಗಳು ಆರ್ಥಿಕ ಸೇವೆಯನ್ನು ನೀಡುತ್ತಿದೆ ಎಂದರು.

ಪ್ರೀತಿ ವಿಶ್ವಾಸಗಳಿದ್ದಾಗ ಎಲ್ಲಾ ಕ್ಷೇತ್ರಗಳ್ಲೂ ಅಭಿವೃದ್ದಿ ಕಾಣಲು ಸಾಧ್ಯವಿದೆ. ಅಂತಹ ಪ್ರೀತಿ ವಿಶ್ವಾಸದ ಸೇವೆ ಸೇಫ್ ಸ್ಟಾರ್ ಸೌಹಾರ್ಧ ಸಹಕಾರಿ ಸಂಘದಲ್ಲೂ ಎದ್ದುಕಾಣುತ್ತಿದೆ ಎಂದರು

ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಸಂಘದ ಅಧ್ಯಕ್ಷ ಜಿ ಜಿ ಶಂಕರ್ ಪ್ರಾಸ್ತವಿಕವಾಗಿ ಮಾತನಾಡಿ ಅನೇಕರಿಗೆ ಉದ್ಯೋಗವಕಾಶದೊಂದಿಗೆ ಆರ್ಥಿಕ ಸೇವೆ ನೀಡುವ ಉದ್ದೇಶದೊಂದಿಗೆ ಸಂಘವನ್ನು ಸ್ಥಾಪಿಸಲಾಗಿದೆ. ಯಶಸ್ವಿ ೧೩ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದೆ. ಈಗಾಗಲೇ ಸೊರಬ ತಾಲ್ಲೂಕು ಸೇರಿದಂತೆ ೧೭ ಶಾಖೆಗಳನ್ನು ತೆರೆದು ರಾಜ್ಯಮಟ್ಟದಲ್ಲೂ ಶಾಖೆಗಳನ್ನು ವಿಸ್ತಾರಗೊಳಿಸಲು ತೀರ್ಮಾನಿಸಲಾಗಿದೆ. ಪ್ರಸ್ತುತ ಸಂಘ ೨.೫೭ ಕೋಟಿ ನಿವ್ವಳ ಲಾಭಗಳಿಸಿದ್ದು ೧೫೦ ಕೋಟಿ ಲಾಭ ಗಳಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ಉಪಾಧ್ಯಕ್ಷ ನಾಗರಾಜ ಇಂದ್ರ ಎಜಿಎಂ ಮಹೇಶ್, ಹೆಚ್. ಎಸ್. ಮಂಜಪ್ಪ, ಗಂಗಾಧರ, ಟಿ. ಅಣ್ಣಾಜಿ ಗೌಡ, ಮತ್ತಿತರು ಹಾಜರಿದ್ದರು.
ಫೋಟೋ: ಸೊರಬ ಪಟ್ಟಣದಲ್ಲಿ ಸೇಫ್ ಸ್ಟಾರ್ ಸಹಕಾರಿ ಸಂಘ ನಿಯಮಿತ ಇದರ ೧೭ನೇ ನೂತನ ಶಾಖೆಯನ್ನು ಎಂದು ಜಡೆ ಹಿರೇಮಠದ ಶ್ರೀ ಷ. ಬ್ರ. ಘನಬಸವ ಅಮರೇಶ್ವರ ಸ್ವಾಮಿಜಿ ಉದ್ಘಾಟಿಸಿದರು.

ಇದನ್ನೂ ಓದಿ-https://suddilive.in/archives/14587

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close