ಸುದ್ದಿಲೈವ್/ಶಿವಮೊಗ್ಗ
ನಗರದ ಬಿಹೆಚ್ ರಸ್ತೆಯಲ್ಲಿರುವ ಪ್ರಖ್ಯಾತ ಚಿನ್ನಾಭರಣಗಳ ಮಾರಾಟದ ಶೋರೂಂನಲ್ಲಿ ಚಿನ್ನ ಖರೀದಿ ಮಾಡುವ ನೆಪದಲ್ಲಿ ಬಂದು 27,600 ರೂ ಮೌಲ್ಯದ 3 ಲಾಕೆಟ್ ಗಳನ್ನ ಕಳುವು ಮಾಡಿಕೊಂಡು ಹೋದ ಘಟನೆ ನಡೆದಿದೆ.
ಮೇ.10 ರಂದು ಅಕ್ಷಯ ತೃತೀಯದಿನದಂದು ನಡೆದ ಕಳುವಿನ ಪ್ರಕರಣ ಎರಡು ದಿನಗಳ ಹಿಂದೆ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಯಾವಾಗ ಶೋರೂಂನಲ್ಲಿದ್ದ ಸ್ಟಾಕ್ ತಪಾಸಣೆ ಮಾಡಲು ಮುಂದಾದ ಮ್ಯಾನೇಜರ್ ಗೆ 3 ಚಿನ್ನದ ಲಾಕೆಟ್ ಗಳು ನಾಪತ್ತೆಯಾಗಿರುವುದು ತಿಳಿದು ಬಂದಿದೆ.
ನಂತರ ಸಿಸಿ ಟಿವಿಯನ್ನ ತಪಾಸಣೆ ನಡೆಸಿದಾಗ ಅಕ್ಷಯ ತೃತೀಯ ದಿನದಂದು ಶೋರೂನಲ್ಲಿ ಚಿನ್ನದ ಖರೀದಿಗೆ ರಶ್ ಆಗಿತ್ತು. ಈ ಸಮಯದಲ್ಲಿ ಮಧ್ಯಾಹ್ನ ಬಂದ ಇಬ್ಬರು ಮಹಿಳೆಯರು ಮತ್ತು ಓರ್ವ ಯುವತಿ ಕೈಚಳಕ ತೋರಿರುವುದು ಪತ್ತೆಯಾಗಿದೆ.
ಲಾಕೆಟ್ ತೋರಿಸುವಂತೆ ಇಬ್ಬರು 45-48 ವಯಸ್ಸಿನ ಮಹಿಳೆಯರು ಶೋರೂಂನ ಸೇಲ್ಸ್ ಮ್ಯಾನ್ ಗೆ ಹೇಳಿದ್ದು, ಸೇಲ್ಸ್ ಮ್ಯಾನ್ ಲಾಕೆಟ್ ನೀಡಿದ್ದಾನೆ, ನಂತರ 25 ವರ್ಷದ ಯುವತಿ ಕೈಗೆ ಮಹಿಳೆಯರು ಕೊಟ್ಟು ಪಾಸ್ ಮಾಡಿರುವ ದೃಶ್ಯ ಸಹ ಲಭ್ಯವಾಗಿದೆ, ಹಾಗೆ ಚಿನ್ನ ಖರೀದಿ ಮಾಡದೆ ಮಹಿಳೆಯರು ಹೋರಿಗರುವ ದೃಶ್ಯ ಪತ್ತೆಯಾಗಿದೆ.
ಕೈಚಳಕೆ ತೋರಿದ ಮಹಿಳೆಯರನ್ನ ಪತ್ತೆಹಚ್ಚಿ ಕಳುವಾಗಿರುವ ಆಭರಣಗಳನ್ನ ಹಿಂದಿರುಗಿಸಿ ಕೊಡಬೇಕೆಂದು ಕೋರಿ ಭೀಮಾ ಗೋಲ್ಡ್ ನ ಮ್ಯಾನೇಜರ್ ದೂರಿನಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ-https://suddilive.in/archives/15762