Girl in a jacket

ಯಾವುದೇ ಅಪ್ಲಿಕೇಷನ್ ಡೌನ್ ಲೌಡ್ ಮಾಡುವ ಮುನ್ನ ಎಚ್ಚರವಿರಲಿ

ಸುದ್ದಿಲೈವ್/ಶಿವಮೊಗ್ಗ

ಯಾವುದೇ ಬ್ಯಾಂಕಿಂಗ್ ಅಪ್ಲಿಕೇಷನ್ ಗಳನ್ನು ಡೌನ್ ಲೋಡ್ ಮಾಡುವ ಮುನ್ನ ಬಳಕೆದಾರರು ಎಚ್ಚರವಹಿಸುವಂತೆ ಪೊಲೀಸ್ ಇಲಾಖೆ ಪ್ರಕಟಣೆ ಹೊರಡಿಸಿದೆ.

ಕಳೆದ ಕೆಲವು ದಿನಗಳಿಂದ ಸೈಬರ್ ವಂಚಕರು ಕೆನರಾ ಬ್ಯಾಂಕ್ ಹಾಗೂ ಇತರೆ ಬ್ಯಾಂಕ್ ಗಳ ನೈಜವಾಗಿ ಕಾಣುವಂತಹ ಚಿಹ್ನೆ (Logo) ಗಳನ್ನು ಬಳಸಿಕೊಂಡು, ವಾಟ್ಸ್ ಅಪ್, ಟೆಲಿಗ್ರಾಮ್ ಮತ್ತು ಇತರ ಸಾಮಾಜಿಕ ಜಾಲತಾಣಗಳ ಮೂಲಕ CSP (Customer Service Point) ww Fake Apk (Mobile Application) , ನಲ್ಲಿ Install ಮಾಡಿಕೊಂಡು ನಿಮ್ಮ ಆಧಾರ್ KYC, PAN ಕಾರ್ಡ್ ವಿವರ & SIM Card Number Update ಮಾಡಿ ಅಂತಾ ತಿಳಿಸುತ್ತಿದ್ದಾರೆ.

ಒಂದು ವೇಳೆ ಯಾರಾದರೂ ಈ ರೀತಿಯ ಅಪ್ಲಿಕೇಶನ್ ಗಳನ್ನು ಡೌನ್ ಲೋಡ್ ಮಾಡಿ Install ಮಾಡಿದ ನಂತರ, ಸೈಬರ್ ವಂಚಕರು ಸದರಿ ವ್ಯಕ್ತಿಯ ಬ್ಯಾಂಕಿನ ಮಾಹಿತಿಯನ್ನು ಪಡೆದುಕೊಂಡು ಹಣವನ್ನು ನೇರವಾಗಿ ತಮ್ಮ ಖಾತೆಗಳಿಗೆ ವರ್ಗಾವಣೆ ಮಾಡಿಕೊಳ್ಳುತ್ತಿರುವುದಾಗಿ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ಒಂದು ವೇಳೆ ಸಾರ್ವಜನಿಕರು ಈ ರಿತಿಯ ಅಪ್ಲಿಕೇಷನ್ ಗಳನ್ನು ಡೌನ್ ಲೋಡ್ ಮಾಡಿ Install ಮಾಡಿಕೊಂಡಿದ್ದಲ್ಲಿ, ಮೊದಲು ನಿಮ್ಮ ಮೊಬೈಲ್ ನ ಇಂಟರ್ ನೆಟ್ ಆಫ್ ಮಾಡಿ, ನಂತರ Settings ನಲ್ಲಿ app management / APPS ಮತ್ತು ಡೌನ್‌ಡ್ ಅನ್ನು ಪರಿಶೀಲಿಸಿ ಒಂದುವೇಳೆ ಯಾವುದೇ unknown file ಇದ್ದರೆ ಅದನ್ನು ಡಿಲಿಟ್ ಮಾಡುವಂತೆ

ಮತ್ತು. *#67# ನಂಬರನ್ನು ಡಯಲ್ ಮಾಡಿ ಇದರಲ್ಲಿ ನಿಮ್ಮ ಮೊಬೈಲ್ ನಂಬರ್ ಬೇರೆ ಯಾವ ಯಾವ ಸರ್ವಿಸ್ ಗಳಿಗೆ ಫಾರ್ವಡೆಡ್ ಆಗಿದೆ ಅಂತ ತಿಳಿಯಲಿದೆ. ಇದರಲ್ಲಿ ಫಾರ್ವಡೆಡ್ ಆಗಿದ್ದರೆ ನಿಮ್ಮ OTP ಗಳು ಸೈಬರ್ ವಂಚಕರ ಹತ್ತಿರ ಹೋಗುತ್ತವೆ. ಆದ್ದರಿಂದ ಫಾರ್ವಡೆಡ್ ಇದ್ದವರು ಕೂಡಲೇ #002# ನಂಬರ್ ಅನ್ನು ಡಯಲ್ ಮಾಡಿದ್ದಲ್ಲಿ ಎಲ್ಲಾ ಸರ್ವಿಸ್ ಗಳು ಡಿಸೇಬಲ್ ಆಗುತ್ತವೆ.

ಯಾವುದೇ ಬ್ಯಾಂಕ್ ನವರು ಫೋನ್ / ಅಪ್ಲಿಕೇಶನ್ ಗಳ ಮುಖಾಂತರ ತಮ್ಮ ವೈಯಕ್ತಿಕ ಮಾಹಿತಿ ಮತ್ತು ಅಕೌಂಟ್ ವಿವರಗಳನ್ನು ಕೇಳುವುದಿಲ್ಲ, ಆದ್ದರಿಂದ ಸಾರ್ವಜನಿಕರು ಯಾವುದೇ ಅನಾಮಧೇಯ ಅಪ್ಲಿಕೇಶನ್ ಗಳನ್ನು ಡೌನ್ ಲೋಡ್ ಮಾಡುವ ಮುನ್ನ ಅದರ ಸತ್ಯತೆಯ ಬಗ್ಗೆ ಪರಿಶೀಲಿಸಿದ ನಂತರವೇ ಬಳಸಬೇಕೆಂದು ಇಲಾಖೆ ಕೋರಿದೆ.

ಇದನ್ನೂ ಓದಿ-https://suddilive.in/archives/15473

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
close