ಈಶ್ವರಪ್ಪನವರಿಗೆ ಮತ‌ನೀಡಿ-ಎನ್ ಜೀರಪ್ಪ

ಸುದ್ದಿಲೈವ್/ಶಿವಮೊಗ್ಗ

ಅಹಿಂದ ನಾಯಕ ಈಶ್ವರಪ್ಪರಾಗಿದ್ದಾರೆ, ಸಿದ್ದರಾಮಯ್ಯ ಅನ್ನಪೂರ್ಣಮ್ಮನವರ ವರದಿಯನ್ನ‌ ಜಾರಿ ಮಾಡುವುದಾಗಿ ಭರವಸೆ ನೀಡಿ ಮಡಿವಾಳ ಸಮಾಜಕ್ಕೆ ಮೋಸ ಮಾಡಿದ್ದಾರೆ. ಎಲ್ಲರಿಗೂ ಭಾಗ್ಯ ಕಲ್ಪಿಸುವ  ಸಿದ್ದರಾಮಯ್ಯ ಮಡಿವಾಳರಿಗೆ ದೌರ್ಭಾಗ್ಯ ನೀಡಿದ್ದಾರೆ ಎಂದು ಮಡಿವಾಳಮಾಜದ ರಾಷ್ಟ್ರೀಯ ಅಧ್ಯಕ್ಷ ಎನ್ ಜೀರಪ್ಪಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆಯಲ್ಲಿ ಈಶ್ವರಪ್ಪ ಗೆದ್ದು ಮೋದಿ ಕೈಹಿಡಿಯಲಿದ್ದಾರೆ. ಹಾಗಾಗಿ ಮೋದಿಯಿಂದ ಮತ್ತು ಈಶ್ವರಪ್ಪನವರಿಂದ ಮಡಿವಾಳ ಸಮಾಜಕ್ಕೆ ನ್ಯಾಯಸಿಗಲಿದೆ. ಹಾಗಾಗಿ ಜಿಲ್ಲೆಯಲ್ಲಿರುವ ಮಡಿವಾಳ ಸಮಾಜ 1.70 ಲಕ್ಷ ಮತಗಳು ಈಶ್ವರಪ್ಪನವರಿಗೆ ಮತಹಾಕುವಂತೆ ಕೋರಿದರು

ದಲಿತ, ಹಿಂದುಳಿದ , ಲಿಂಗಾಯಿತ ಮತ್ತು ಬ್ರಾಹ್ಮಣರ ಮಠಕ್ಕೆ ಅತಿ ಹೆಚ್ಚು ಅನುದಾನ ನೀಡಿದವರು ಈಶ್ವರಪ್ಪನವರು. ಹಾಗಾಗಿ ಅವರಿಗೆ ಮತಹಾಕಬೇಕು. ಕ್ರಮ ಸಂಖ್ಯೆ 8 ಕ್ಕೆ ಮತ ಒತ್ತಬೇಕು. ಚಿತ್ರದುರ್ಗದ ಮಡಿವಾಳಮಠಕ್ಕೆ ಸಮುದಾಯ ಭವನಕ್ಕೆ ರಸ್ತೆ ಮಾಡಿಸಿಕೊಟ್ಟವರು ಈಶ್ವರಪ್ಪನವರು ಎಂದರು.

ಈಶ್ವರಪ್ಪ ಮಾತನಾಡಿ, 97 ಕೋಟಿ ಮಠಕ್ಕೆ ಸದಾನಂದ ಗೌಡರು ಸಿಎಂ‌ಆದಾಗ ಕೊಡಿಸಿದ್ದೆ. ಪ್ರೆಸ್ ಮೀಟ್ ಮಾಡುವುದಾಗಿ ಹೇಳಿದ್ದ ಎನ್ ಜೀರಪ್ಪ ಇಷ್ಟೊಂದು ಜನರನ್ನ‌ಕರೆದುಕೊಂಡು ಬಂದಿದ್ದಾರೆ ಎಂದರು.

10 ವರ್ಷದ ಅನ್ನಪೂರ್ಣಮ್ಮ ವರದಿ ಕಾರಣಾಂತರದಿಂದ ಜಾರಿಯಾಗಿಲ್ಲ. ಅಡೆತಡೆಗಳಿವೆ ನಿವಾರಿಸಿಕೊಳ್ಳಬೇಕಿದೆ ಎಂದರು.

ಬೈಂದೂರಿನಲ್ಲಿ ಹಿಂದೂ ಕಾರ್ಯಕರ್ತ ನನ್ನ ಜೊತೆ ಕೆಲಸ ಮಾಡಿದವನನ್ನ ಬಿಎಸ್ ವೈ ಅವರನ್ನ ತಮ್ಮಡೆ ಸೆಳೆದುಕೊಂಡರು ಮೋದಿ ಸೋಲಿಸಲು ಈಶ್ವರಪ್ಪ ಹೊರಟಿದ್ದಾರೆ ಎಂದು ಅಪಪ್ರಚಾರ ಮಾಡಗುತ್ತಿದೆ. ನಿನ್ನೆ ವಿಜಯ ಸಂಕಲ್ಪ ಯಾತ್ರೆನಡೆದಿದೆ. 70 ಸಾವಿರ ಜನ ಸೇರಿದ್ದಾರೆ. ಅವರ ಬೆಂಬಲಸಿಕ್ಕಿದೆ. ಕೇಸ್ ಹಾಕಲಾಗಿದೆ. ಈ ಸರ್ಕಾರ ಚುನಾವಣೆ ನಂತರ ಬಿದ್ದುಹೋಗಲಿದೆ. ಹಿಂದೂ ಕಾರಗಯಕರ್ತರಿಗೆ ತೊಂದರೆ ಕೊಟ್ಟರೆ ಕಾಂಗ್ರೆಸ್ ಧೂಳಿಪಟವಾಗಲಿದೆ ಎಂದರು.

ರಾಹುಲ್ ಗಾಂಧಿ ಸಂತೋಷದಿಂದ ಶಿವಮೊಗ್ಗಕ್ಕೆ ಬರಲಿ ಅವರು ಹೋದ ಕಡೆಯಲ್ಲ ಸೀತಿದ್ದಾರೆ. ಇಲ್ಲಿ ಬರುವುದರಿಂದ ಡಿಪಾಸಿಟ್ ಸಹ ಕಾಂಗ್ರೆಸ್ ಅಭ್ಯರ್ಥಿಗೆ ಸಿಗಲ್ಲ ಎಂದು ದೂರಿದರು.

ಇದನ್ನೂ ಓದಿ-https://suddilive.in/archives/14021

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close