ಸುದ್ದಿಲೈವ್/ಶಿವಮೊಗ್ಗ
ಉಷ ನರ್ಸಿಂಗ್ ಹೋಂ ಬಳಿಯ ಸಿಗ್ನಲ್ ನಲ್ಲಿ ಮಧ್ಯಾಹ್ನದಿಂದ ಟ್ರಾಫಿಕ್ ಜ್ಯಾಮ್ ಆಗಿದೆ. ಉಷ ನರ್ಸಿಂಗ್ ಹೋಮ್ ನ ಟ್ರಾಫಿಕ್ ಸಿಗ್ನಲ್ ನಿಂದ ಸವಳಂಗ ರಸ್ತೆಯ ನಮ್ಮ ಟಿವಿ ಕಚೇರಿಯಿರುವ ಕಟ್ಟಡದ ವರೆಗೆ ವಾಹನಗಳು ಮೆರವಣಿಗೆಗೆ ನಿಂತಹಾಗೆ ನಿಂತಿವೆ.
ಸೋಮವಾರದ ಟ್ರಾಫಿಕ್ ನಿಂದಾಗಿ ವಾಹನ ಸವಾರರು ಪರದಾಡಿದ್ದಾರೆ. ಈ ವೇಳೆ ಇಲ್ಲಿ ಸಿಗ್ನಲ್ ಗಳು ಅಳವಡಿಸಲಾದರೂ ಸಿಗ್ನಲ್ ಬೀಳುವುದರಿಂದ ಟ್ರಾಫಿಕ್ ಜ್ಯಾಮ್ ನಲ್ಲಿ ಸಿಲುಕುವಂತಾಗಿದೆ.
ರೈಲ್ವೆ ನಿಲ್ದಾಣ, ವಿನೋಬ ನಗರ, ಶಿಕಾರಿಪುರಕ್ಕೆ ಹೋಗುವ ಮಾರ್ಗ ಹಾಗೂ ಶಿಕಾರಿಪುರದಿಂದ ಮತ್ತು ನವುಲೆ, ಅಬ್ಬಲಗೆರೆ, ಕೃಷಿನಗರ, ಬಸವೇಶ್ವರ ನಗರ, ಕೀರ್ತಿ ನಗರ, ಅಶ್ವಥ್ ನಗರ ಮೊದಲಾದ ನಿವಾಸಿಗಳು ಇದೇ ರಸ್ತೆಯ ಮೂಲಕ ಸಙಚರಿಸುವುದರಿಂದ ಈ ಮಾರ್ಗ ಇಂದು ದಟ್ಟವಾಗಿದೆ.
ಸುಮಾರು ಒಂದು ಗಂಟೆಗೂ ಹೆಚ್ಚು ಕಾರು ಮತ್ತು ದ್ವಿಚಕ್ರ ವಾಹನ ಸವಾರರು ಟ್ರಾಫಿಕ್ ಜ್ಯಾಮ್ ನಲ್ಲಿ ಸಿಲುಕಿಕೊಂಡಿದ್ದಾರೆ. ಈ ಮೊದಲು ರೈಲ್ವೆ ಮೇಲ್ಸೇತುವೆ ಕಾಮಗಾರಿಯಿಂದ ಹೈರಾಣ್ ಆಗಿರುವ ವಾಹನ ಸವಾರರು, ಈಗ ಮೇಲ್ಸೇತುವೆ ನಿರ್ಮಾಣವಾದರೂ ಒದ್ದಾಡುವಂತಾಗಿದೆ.
ಇದನ್ನೂ ಓದಿ-https://suddilive.in/archives/15094