ನನ್ನ ಗೆಲುವಿನಿಂದ ಪಕ್ಷದ ಶುದ್ಧೀಕರಣವಾಗಲಿದೆ-ರಘುಪತಿ ಭಟ್

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗದಲ್ಲಿ ನಿಂತಮೇಲೆ ಗೆಲ್ಲುವ ವಿಶ್ವಾಸ ಬೆಳೆದಿದೆ. ಅದರ ಜೊತೆ ಮುಜುಗರನೂ ಉಂಟಾಗಿದೆ ಎಂದು ಮಾಜಿ ಶಾಸಕ ಕೆ.ರಘುಪತಿ ಭಟ್ ತಿಳಿಸಿದರು.

ಅವರು ಈಶ್ವರಪ್ಪನವರ ಸ್ವಗೃಹದಲ್ಲಿ ನಡೆದ ಸಭೆಯಲ್ಲಿ ಮಾತನಾಡಿ ಮುಜುಗರ ಏಕೆ ಎಂದರೆ ಅವರ ವಿರುದ್ಧ ಲೋಕಸಭಾ ಚುನಾವಣೆ ಎದುರಿಸಿದೆವು. ಪಕ್ಷ ಕೊಟ್ಟ ಜವಬ್ದಾರಿ ಅಡಿ ಎದುರಿಸುವ ಅನಿವಾರ್ಯವಾಗಿತ್ತು ಎಂದರು.

ಈಶ್ವರಪ್ಪನವರ ಬಲ ನಮಗೆ ಈ ಚುನಾವಣೆಯಲ್ಲಿ ದಡಕ್ಕೆ ಸೇರಿಸಲಿದೆ. ಪಕ್ಷೇತರ ಅಭ್ಯರ್ಥಿಯಾಗಿ ಮುಂದುವರೆಯಲಿ ಎಂದು ಹಣೆ ಬರಹವಿದ್ದರೆ ಅದನ್ನೂ ಒಪ್ಪಿಕೊಳ್ಳುತ್ತೇನೆ. ನಾನು ಯಾರನ್ನೋ ಸೋಲಿಸಲು ಸ್ಪರ್ಶಿಸುತ್ತಿಲ್ಲ ಆದರೆ  ಪಕ್ಷೇತರ ಅಭ್ಯರ್ಥಿಯಾಗಿ ಗೆಲ್ಲುವ ಮೂಲಕ ಬಿಜೆಪಿ ಹೈಕಮಾಂಡ್ ಗೆ ಪಕ್ಷದ ಸ್ಥಿತಿಗತಿ ತಿಳಿಯಲಿದೆ ಎಂದರು.

ಕೆಲ ವ್ಯವಸ್ಥೆ ಸರಿಪಡಿಸಲು ದುಖಕರವಾದ ನಿರ್ಧಾರ ತೆಗೆದುಕೊಳ್ಖಬೇಕಿದೆ. ನಾನು ಕಾರ್ಯಕರ್ತರ ಬೆಂಬಲಿತ ಅಭ್ಯರ್ಥಿಯಾಗಿರುವೆ. ಡಾ.ಸರ್ಜಿ ನಾಯಕ ಬೆಂಬಲಿತ ಅಭ್ಯರ್ಥಿಯಾಗಿದ್ದಾರೆ. ಮತದಾರರು ನಿರ್ಧರಿಸಲಿ.‌ಆಯನೂರು ಮಂಜುನಾಥ್ ನಮ್ಮ ಪಕ್ಷದಿಂದ ಗೆದ್ದು ಈಗ ಕಾಂಗ್ರೆಸ್ ಪಕ್ಷದವರು.

ಅವರು ನಮ್ಮ ಕ್ಷೇತ್ರದಿಂದ ದೂರ ಉಳಿದಿದ್ದಾರೆ. ಕಾಂಗ್ರೆಸ್ ನಿಂದ ಇದು ವರೆಗೂ ಸ್ಪರ್ಧಿಸಿರುವ ದಿನೇಶ್ ಪ್ರತ್ಯೇಕವಾಗ ಸ್ಪರ್ಧಿಸುತ್ತಿದ್ದಾರೆ. ಅಲ್ಲಿನ ಪರಿಸ್ಥಿತಿ ಅದೇ ಇದೆ. ಉಡುಪಿಯ ಶ್ರೀಕ್ಷಷ್ಣ ನನಗೆ ಕಷ್ಟದ ಕೈಯಲ್ಲಿ ಕೈಹಿಡಿದಿದ್ದಾನೆ. ಅದೇ ರೀತಿ ಈಬಾರಿ ಶ್ರೀಕೃಷ್ಣ ಮತ್ತುಅಯೋಧ್ಯ ರಾಮ ಕೈಹಿಡಿಯುತ್ತಾನೆ ಎಂಬ ವಿಶ್ವಾಸ ಹೊರಹಾಕಿದರು.

ನಾನು ರಾಷ್ಡ್ರೀಯ ಮಟ್ಟದ ನಾಯಕರಿಗೆ ಗೊತ್ತಾಗಲಿ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದೆ. ಆದರೆ ಒಬ್ಬ ನಾಯಕರೂ ಮಾತನಾಡಲಿಲ್ಲ. ಈ ಬಾರಿ ಗೆಲುವಿನ ಶಕ್ತಿ ಈಶ್ವರಪ್ಪನವರಿಂದ ಹೆಚ್ಚಾಹಲಿದೆ. ಉಡುಪಿ ಮಂಗಳೂರಿನಲ್ಲಿ ಮತದಾರ ಕೈಬಿಡಲ್ಲ. ಚುನಾವಣೆ ಗೆದ್ದು ಎದುರಾಳಿಗೆ ಉತ್ತರಿಸಬೇಕಿದೆ ಎಂದರು.

ಶಿವಮೊಗ್ಗದಲ್ಲಿ ಈಶ್ವರಪ್ಪನವರ ಬೆಂಬಲಿತದಿಂದ ನನ್ನ ಗೆಲವಿಗೆ ನಿರ್ಣಯವಾಗಲಿದೆ. ಶಿವಮೊಗ್ಗ 27. ಸಾವಿರ ಮತವಿರುವ ಕ್ಷೇತ್ರವಾಗಿದೆ. ರಾಜಕೀಯದ ಪ್ರಾಮುಖ್ಯವಾದ ಘಟ್ಟವಾಗಿದೆ. ನಾನು ಈ ಚುನಾವಣೆಯಲ್ಲಿ ಗೆಲ್ಲಲೇ‌ಬೇಕು. ಇಲ್ಲವಾದಲ್ಲಿ ನನಗೆ ಹಿನ್ನಡೆಯಾಗಲಿದೆ ಎಂದು ಹೇಳಿದರು.‌

ಇದನ್ನೀ ಓದಿ-

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close