ಸುದ್ದಿಲೈವ್/ಶಿವಮೊಗ್ಗ
ನಿನ್ನೆ ಸಂಜೆ ಮೂವರ ಕೊಲೆಯಾಗಿದೆ. ಇಬ್ಬರು ನಿನ್ನೆ ಸ್ಥಳದಲ್ಲಿ ಸಾವಾಗಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಓರ್ವನನ್ನ ಆಸ್ಪತ್ರೆಗೆ ದಾಖಲಿಸಿದರೂ ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ ಎಂದು ಶಾಸಕ ಚೆನ್ನಬಸಪ್ಪ ಗುಟುರ್ ಹಾಕಿದರು.
ಸುದ್ದಿಗೋಷ್ಠಿ ನಡೆಸಿದ ಅವರು, ಶೋಯೇಬ್ ಯಾನೆ ಸೇಬು, ಗೌಸ್ ಮತ್ತು ಯಾಸಿನ್ ಕುರೇಶಿ ಸಾವಾಗಿದೆ. ಕಾನೂನು ಸಮರ್ಪಕವಾಗಿದೆ ಎಂದು ಹೇಳಿದರೂ ಮೂರು ಕೊಲೆಯಾಗಿದೆ. ಅವರು ಯಾವ ರೀತಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಪೊಲೀಸ್ ಇಲಾಖೆಗೆ ಗೊತ್ತಿದೆ. ಆದರೂ ನಿರ್ಲಕ್ಷಿಸುತ್ತಿದ್ದಾರೆ ಎಂದು ದೂರಿದರು.
ಚುನಾವಣೆ ನಡೆದ ದಿನ ಲಷ್ಕರ್ ಮೊಹಲ್ಕಾದಲ್ಲಿ ತಲವಾರ್ ಹಿಡಿದುಕೊಂಡಿದ್ದಾರೆ ಎಂಬ ಮಾಹಿತಿ ಇತ್ತು. ಪೊಲೀಸರು ಬಂದಿದ್ದಕ್ಕೆ ಚದುರಿದರು. ಇಲಾಖೆಗೆ ನಮ್ಮವರೆ ಸುದ್ದಿಕೊಟ್ಟಿದ್ದಾರೆ. ಅವರೆಲ್ಲಾ ಹೊರಟು ಹೋಗಲು ಇಲಾಖೆ ಬಿಟ್ಟಿದೆ ಎಂದರು.
ನಿನ್ನೆ ನಡೆದಿದ್ದು ಗ್ಯಾಂಗ್ ವಾರ್. ಕೋಟೆ ಪಿಐ ಗುರು ಬಸವರಾಜ್ ಗೆ ಬಂದಿದ್ದಾರೆ. ಅವರಿಗೆ ಏನೂ ಅನಿಸಲಿಲ್ಲ. ಲಾ ಅಂಡ್ ಆರ್ಡರ್ ಬಿಗಿ ಮಾಡಿದ್ದರೆ ಮೂರು ಕೊಲೆ ಆಗ್ತಾ ಇರಲಿಲ್ಲ. ಅಮಾನೀಯವಾಗಿ ಘಟನೆ ನಡೆದಿದ್ದಕ್ಕೆ ಇಲಾಖೆ ಕಾರಣ ಎಂದು ಆರೋಪಿಸಿದರು.
ಕೋಟೆ ಪೊಲೀಸರ ನಿರ್ಲಕ್ಷ ಇದರಲ್ಲಿ ಎದ್ದು ಕಾಣ್ತಾ ಇದೆ. ತಲ್ವಾರ್ ಇಟ್ಟುಕೊಂಡು ಮನೆಯಿಂದ ಬಂದಿದ್ದಾರೆ ಎಂದು. ಇವರೆಲ್ಲಾ ಹೊಳಲೂರಿನಲ್ಲಿ ಉಳಿದುಕೊಂಡಿದ್ದರು ಎಂದು ಆರೋಪಿಸಿದರು.
ಯಲ್ಲಮ್ಮ ದೇವಸ್ಥಾನದ ಬಳಿ ಹಿಂದೂ ಮನೆಯಲ್ಲಿ ಮುಸ್ಲೀಂ ಯುವಕರು ಕೃತ್ಯ ನಡೆಸಿದ್ದಾರೆ. ಗಾಂಜಾ ಅಫೀಮ್ ನ ಹಾವಳಿ ನಡೆಸಿದ್ದಾರೆ. ಇದರ ಪರಿಣಾಮ ಕೊಲೆ ನಡೆದಿದೆ ಎಂದು ಆರೋಪಿಸಿರುವ ಶಾಸಕರು, ಸರ್ಕಾರಿ ನೌಕರ(ಶರವಣ) ಅವನ ಮೇಲೆ ಅಡ್ಡಗಟ್ಟಿ ಹಲ್ಲೆ ಮಾಡಿದ್ದಾರೆ. 6/4/2024 ರಂದು ಎಫ್ಐಆರ್ ಆಗಿದೆ. ಇಲಾಖೆ ಯಾಕೆ ಬೇಕು ಕ್ರಮಕೈಗೊಳ್ಳದಿದ್ದರೆ ಎಂದು ಪ್ರಶ್ನೆ
ರಕ್ಷಣ ಇಲಾಖೆ ಅಧಿಕಾರಿಗಳು ಹೀಗೆ ನಡೆಯುತ್ತೆ ಎಂದರೆ ಏನು ಹೇಳೋಣ? ರಕ್ಷಣ ಇಲಾಖೆ ಹೀಗೆ ಮುಂದು ವರೆದರೆ ಜನಾಂದೋಲನ ನಡೆಸಬೇಕಾಗುತ್ತದೆ. ಸರ್ಕಾರ ರಕ್ಷಣ ಇಲಾಖೆ ನಿರ್ಬಂಧಿಸುತ್ತಿದೆ ಎಂದು ಶಂಕಿಸಿದರು.
ಎಫ್ ಐಆರ್ ಆಗಿದೆ ಸರ್ಕಾರಿ ನೌಕರ ನಮೇಲೆ ಹಲ್ಲೆ ನಡೆದರೂ ಕ್ರಮ ಇಲ್ಲ. ಕೋಟೆ ಪಿಐ ಗುರುಬಸವರಾಜ್ ಏ.27 ರಂದು 2022 ರಲ್ಲಿ ನಡೆದ ಸಾವರ್ಕರ್ ಪ್ರಕರಣದಲ್ಲಿ ಹಿಂದೂ ಸಂಘಟನೆಯವರ ಹೆಸರು ಸೇರಿಸಿ ನೋಟೀಸ್ ನೀಡಿದ್ದಾರೆ. ಸಾಗರದಲ್ಲಿ ಬಿಹೆಪಿ ಯುವಮೋರ್ಚಾದ ಕಾರಗಯಕರ್ತರನ್ನ ಗಡಿಪಾರು ಮಾಡಿದ್ದಾರೆ.
ತಲವಾರು ಹಿಡಿದು ಹೊಡೆದಾಡಿದವರಿಗೆ ಗಡಿಪಾರು ಮಾಡದೆ ಅಮಾಯಕರ ಮೇಲೆ ಕ್ರಮ ಜರುಸಿಗಿಸುವ ಇಲಾಖೆ ಅವಶ್ಯಕತೆ ಇಲ್ಲ. ನಗರವನ್ನ ಶಾಂತಿಯುತವಾಗಿ ನಡೆಯಬೇಕು ಎಂದು ಯೋಚಿಸುತ್ತಿರುವ ಸಂದರ್ಬದಲ್ಲಿ ರಕ್ಷಣ ಇಲಾಖೆ ನಿರ್ಲಕ್ಷ ತನದಿಂದ ಕೈಚೆಲ್ಲಿಕುಳಿತಿದೆ.
ಘಟನೆ ನಡೆದ ಸ್ಥಳದ ಪಕ್ಕ ಮತಗಟ್ಟೆ ಇದೆ. ನಿರ್ಲಕ್ಷತನ ತೋರಿದ ಕೋಟೆ ಪಿಐ ಅಮಾನತ್ತಾಗಬೇಕು. ಯಲ್ಲಮ್ಮ ದೇವಸ್ಥಾನದ ಪಕ್ಕದ ಮನೆಗೆ ಅಕ್ರಮ ವಿದ್ಯುತ್ ಸಂಪರ್ಕಪಡೆದಿದ್ದಾರೆ. ಹಿಂದೂ ಮನೆಯಲ್ಲಿದ್ದು ಕೃತ್ಯ ಮಾಡುವ ತಂಡ ಶಿವಮೊಗ್ಗದಲ್ಲಿದ್ದಾರೆ. ಇವರ ಬೆಳವಣಿಗೆಗೆ ರಕ್ಷಣ ಇಲಾಖೆ ಎಂದು ಆರೋಪಿಸಿದರು.
ಅಫೀಮು, ಗಾಂಜಾ ಮಾರಾಟ ಮಾಡುವವರ ಬಗ್ಗೆ ಓಸಿ ಬಿಡ್ಡರ್ ಬಗ್ಗೆ ಇಲಾಖೆಗೆ ಮಾಹಿತಿ ನೀಡಿದರೆ ಸಾಕ್ಷಿ ಕೇಳಲಾಗಿತ್ತು. ಪೊಲೀಸ್ ಓರ್ವ ಲಂಚ ಪಡೆದ ಪ್ರಕರಣದಲ್ಲಿ ಬಂಧನವಾಗುತ್ತೆ. ಏನೇನು ಬಡೆಯುತ್ತದೆ ಗೊತ್ತಿಲ್ವಾ? ಶಿವಮೊಗ್ಗದಲ್ಲಿ ಘಟನೆಗಳು ಮರುಕಳಿಸಬಾರದು.
ಕಾಂಗ್ರೆಸ್ ನ ಮಾನಸಿಕತೆಗೆ ತಕ್ಕಂತೆ ವರ್ತಿಸಬೇಡಿ. ಹಿಂದೂ ಯುವಕರ ಮೇಲೆ ಕ್ರಮ ಕೈಗೊಳ್ಳುತ್ತೀರಿ. 2022 ರಲ್ಲಿ ನಡೆದ ಘಟನೆ ಬಗ್ಗೆ ಮೊನ್ಬೆ ಚಾರ್ಚ್ ಶೀಟ್ ಮಾಡಲಾಗಿದೆ. ರೌಡಿಶೀಟರ್ ಗಳ ಪರೇಡ್ ನಡೆದಿದೆ. ರೌಡಿಶೀಟರ್ ಗಳ ಪಟ್ಟಿಯಲ್ಲಿ ಈ ಮೂವರು ಇಲ್ಲವಾ? ಚುನಾವಣೆ ನಡೆದ ದಿನ ತಲ್ವಾರ್ ಸಿಕ್ಕಿದೆ ರಕ್ಷಣ ಇಲಾಖೆ ಬಗ್ಗೆ ಕ್ರಮ ಗಕೈಗೊಳ್ಳಬೇಕು ಎಂದು ಗುಟುರ್ ಹಾಕಿದರು.
ಅಶೋಕ ರಸ್ತೆ, ಬಿಬಿಸ್ಟ್ರೀಟ್ ಜಯನಗರಕ್ಕೆ ಬಂದು ತಲ್ವಾರ್ ಹುಡುಕಿದರೆ ಸಿಗಲ್ಲ ಹುಡುಕುವ ಜಾಗದಲ್ಲಿ ಹುಡುಕದೆ ಜನರಿಗೆ ಹೆದರಿಸುವ ಕೆಲಸ ಮಾಡಬೇಡಿ. ಸರ್ಕಾರ ಕ್ರಮ ಕೈಗೊಳ್ಳುವ ಮೊದಲು ಎಸ್ಪಿ ಜಾಗ ಖಾಲಿ ಮಾಡಲಿ. ಹಕ್ಕುಚ್ಯುತಿ ಮಂಡಿಸುವ ಪರಿಸ್ಥಿತಿ ಬಂದರೂ ಮಂಡುಸಲು ಸಿದ್ದ ಎಂದು ದೂರಿದರು.
ಇದನ್ನೂ ಓದಿ-https://suddilive.in/archives/14491