ಸುದ್ದಿಲೈವ್/ಶಿವಮೊಗ್ಗ
ಸಾಗರದ ಆನಂದಪುರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಯುವಕನೋರ್ವ ಲಾಂಗ್ ಝಳಪಿಸಿದ ದೃಶ್ಯವೊಂದು ವೈರಲ್ ಆಗಿದೆ.
ಸಾಗರ ಮೂಲದ ಯುವಕನಿಂದ ಈ ಕೃತ್ಯವೊಂದು ನಡೆದಿದ್ದು, ರಾಷ್ಟ್ರೀಯ ಹೆದ್ದಾರಿಯಲ್ಲಿ ರಂಪಾಟ ನಡೆಸಿದ್ದಾನೆ. ಸ್ಥಳೀಯರಿಂದ ಯುವಕನಿಗೆ ಗೂಸ ಬಿದ್ದಿದ್ದು, ಲಾಂಗ್ ಕಿತ್ತು ಕೆರೆಗೆ ಎಸೆದಿದ್ದಾರೆ.
ಯುವಕನನ್ನ ಅರೆಸ್ಟ್ ಮಾಡಿರುವ ಪೊಲೀಸರಿಂದ ವಿಚಾರಣೆ ನಡೆಯುತ್ತಿದೆ. ಈ ದೃಶ್ಯದಿಂದ ರಸ್ತೆಯಲ್ಲಿ ಸಾಗುತ್ತಿರುವ ವಾಹನಸವಾರರು ಬೆಚ್ಚಿಬಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಎಸ್ಪಿ ಮಿಥುನ್ ಕುಮಾರ್, ಆನಂದಪುರಂನಲ್ಲಿ ನಡೆದಿದ್ದ ಮದುವೆಯಲ್ಲಿ ಸಮೀರ್ ಮತ್ತು ಶಿವ ಎಂಬುವರು ಭಾಗಿಯಾಗಿದ್ದರು. ಶಿವ ಎಂಬುವನು ಸಾರ್ವಜನಿಕ ಸ್ಥಳದಲ್ಲಿ ಕಿರಿಕ್ ಮಾಡಿದ್ದರಿಂದ ಸುತ್ತಮುತ್ತಲಿನ ಜನ ಬೈದಿದ್ದಾರೆ.
ಬೈದ ಕಾರಣ ಸಮೀರ್ ಎಂಬುವನಿಗೆ ಕರೆ ಮಾಡಿ ಕರೆಸಿದ್ದಾನೆ. ಸಮೀರ್ ಬರುವಾಗ ಸ್ಥಳದಲ್ಲಿ ಬಳ್ಳಾರಿ ಮುಲದ ಕುಲುಮೆಯಲ್ಲಿರುವ ಲಾಂಗು ಹಿಡಿದು ಝಳಪಿಸಿದ್ದಾನೆ. ಸಾರ್ವನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಇವರಿಬ್ಬರು ಗಲಾಟೆ ಮಾಡಲು ಕಾರಣವೇನು ಎಂಬುದು ತನಿಖೆ ನಡೆಸಲಾಗುತ್ತಿದೆ. ಇವರಿಬ್ವರು ನಶೆಯಲ್ಲಿದ್ದರಾ? ಎಂಬುದನ್ನೂ ತಪಾಸಣೆ ಮಾಡಲಾಗುತ್ತಿದೆ ಎಂದು ವಿವರಿಸಿದ್ದಾರೆ.
ಇದನ್ನೂ ಓದಿ-https://suddilive.in/archives/15523