ರಾಜ್ಯದಲ್ಲಿ ಮಹಿಳೆಯರಿಗೆ ರಕ್ಷಣೆ ನೀಡುವಲ್ಲಿ ರಾಜ್ಯ ಸರ್ಕಾರ ವಿಫಲ: ಬಿಜೆಪಿ ಮಹಿಳಾ ಮೂರ್ಚಾದಿಂದ ಪ್ರತಿಭಟನೆ.

ಸುದ್ದಿಲೈವ್/ಶಿವಮೊಗ್ಗ

ಹುಬ್ಬಳ್ಳಿಯ ನೇಹ ಹೀರೆಮಠ, ಅಂಜಲಿ ಅಂಬಿಗೇರ ಹಾಗೂ ಕೂಡಗಿನ ಮೀನಾಕ್ಷಿ ಹೀಗೆ ರಾಜ್ಯದಲ್ಲಿ ಸಾಲು ಸಾಲು ಯುವತಿಯರ ಕೊಲೆ ನಡೆಯುತ್ತಿದೆ. ಈ ಯುವತಿಯರ ಕೊಲೆಯಿಂದಾಗಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಆರೋಪಿಸಿ ಶಿವಮೊಗ್ಗ ಜಿಲ್ಲಾ ಬಿಜೆಪಿ ಮಹಿಳಾ ಮೂರ್ಚಾ ಪ್ರತಿಭಟನೆ ನಡೆಸಿದ್ದಾರೆ. ಜಿಲ್ಲಾ ಬಿಜೆಪಿ ಮಹಿಳಾ ಘಟಕದ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಲಾಗಿದೆ.

ಹುಬ್ಬಳ್ಳಿಯಲ್ಲಿ ಮೊನ್ನೆ ನಡೆದ ಅಂಜಲಿ ಅಂಬಿಗೇರ ಹತ್ಯೆ ಇಡೀ ನಾಗರೀಕ ಸಮಾಜ ತಲೆ ತಗ್ಗಿಸುವ ಘಟನೆಯಾಗಿದೆ. ರಾಜ್ಯಾದ್ಯಂತ ಹೆಣ್ಣು ಮಕ್ಕಳ ಸರಣಿ ಕೊಲೆಗಳು, ಅನುಮಾನದ ಸಾವುಗಳು, ಲೈಂಗಿಕ ದೌರ್ಜನ್ಯ ಪ್ರಕರಣಗಳೇ ಹೆಚ್ಚಾಗುತ್ತಿದ್ದು ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದು ಬಿದ್ದಿದೆ. ಕೆಲ ದಿನಗಳ ಹಿಂದೆ ಹುಬ್ಬಳ್ಳಿ ನೇಹಾ, ಮಡಿಕೇರಿಯಲ್ಲಿ ಮೀನಾಳೆ ರುಂಡ ಕತ್ತರಿಸಿ ಕೊಲೆಗೈದ ಘಟನೆ ಮತ್ತದೇ ಈಗ ಅಂಜಲಿ ಕೊಲೆಯಾಗಿದೆ. ಸಾಮಾಜಿಕ ಸುಭದ್ರತೆಗೆ ಹೆಸರಾಗಿದ್ದ ಕರ್ನಾಟಕ ರಾಜ್ಯವನ್ನು ಆಡಳಿತದಲ್ಲಿ ಕ್ರಿಮಿನಲ್‌ಗಳು, ಕೊಲೆಗಡುಕದ ತಾಣವನ್ನಾಗಿಸುತ್ತಿದೆ.

ಈ ಘಟನೆ ಕುರಿತು ಶೀರ್ಘ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ತೀವ್ರ ಹೋರಾಟ ನಡೆಸುವುದು ಅನಿವಾರ್ಯವಾಗಿದೆ. ತಾವು ತಕ್ಷಣ ಈ ಹೀನಾಯ ಕೃತ್ಯದಲ್ಲಿ ಭಾಗಿಯಾದವರಿಗೆ ಕಾನೂನು ರೀತಿಯ ಶಿಕ್ಷೆ ಕೊಡಿಸಬೇಕೆಂದು ಆಗ್ರಹಿಸಿದೆ. ಪ್ರತಿಭಟನೆಯ ನಂತರ ಡಿಸಿ ರವರಿಗೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಜಿಲ್ಲಾ ಮಹಿಳಾ ಮೂರ್ಚಾದ ಪದಾಧಿಕಾರಿಗಳು ಹಾಜರಿದ್ದರು.

ಇದನ್ನೂ ಓದಿ-https://suddilive.in/archives/14970

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close