ಮಳೆಗೆ ಧರೆಗಿಳಿದ ಮರ ಹಾಗೂ ವಿದ್ಯುತ್ ಕಂಬಗಳು

ಸುದ್ದಿಲೈವ್/ಸೊರಬ/ಶಿವಮೊಗ್ಗ

ಜಿಲ್ಲೆಯಾದ್ಯಂತ ಇಂದು ಮಳೆಯಾಗಿದೆ. ಮಳೆ ಎಷ್ಟರ ಮಟ್ಟಿಗೆ ತಂಪೆರೆದಿದೆ ಎನ್ನುವುದಕ್ಕಿಂತ ಸುಡು ಬಿಸಿಲಿಂದ ತಕ್ಕಮಟ್ಟಿಗೆ ರಿಲ್ಯಾಕ್ಸ್ ನೀಡಿದೆ.‌ ಶಿವಮೊಗ್ಗದಲ್ಲೂ ಸಣ್ಣಪ್ರಮಾಣದಲ್ಲಿ ಮಳೆಯಾಗಿದೆ.

ಸಾಗರ, ಸೊರಬ, ಹೊಸನಗರ ತೀರ್ಥಹಳ್ಳಿಯ ಬಹುತೇಕ ಮಳೆಯಾಗಿದೆ. ರೈನ್ ಅಲರ್ಟ್ ನಡುವೆ ಈ ಮಳೆ ಕೊಂಚ ತಂಪೆರೆದಿದೆ. ಆದರೆ ಸೊರಬದಲ್ಲಿ ಮಳೆಯಿಂದಾಗಿ ಮರ ಮತ್ತು ಕಂಬಗಳು ಧರೆಗುರುಳಿವೆ.

ಬಿರುಸಿನ ಗಾಳಿ ಸಮೇತ ಸುರಿದ ಮಳೆಗೆ ವಿದ್ಯುತ್ ಕಂಬಗಳು ಹಾಗೂ ಮರ ಧರೆಗೆ ಉರುಳಿದ ಘಟನೆ ಚಂದ್ರಗುತ್ತಿ ಸಮೀಪದ ಜೋಳದ ಗುಡ್ಡೆ ಗ್ರಾಮದ ಮುಖ್ಯರಸ್ತೆಯಲ್ಲಿ ಮಂಗಳವಾರ ಸಂಜೆ ನಡೆದಿದೆ.

ಮಧ್ಯಾಹ್ನದ ವರೆಗೆ ಬಿರು ಬಿಸಿಲಿನಿಂದ ಕೂಡಿದ ವಾತಾವರಣ ನಂತರ ಮೋಡ ಕವಿದು ಬಿರುಸಿನ ಗಾಳಿ ಸಮೇತ ಮಳೆ ಬೀಳಲಾರಂಭಿಸಿತು. ಗಾಳಿ ಮಳೆಗೆ ಜೋಳದ ಗುಡ್ಡೆ ಗ್ರಾಮದಲ್ಲಿ ಬೃಹತ್ ಮರವೊಂದು ವಿದ್ಯುತ್ ತಂತಿ ಮೇಲೆ ಉರುಳಿ ರಸ್ತೆಗೆ ಅಡ್ಡಲಾಗಿ ಧರೆಗೆ ಉರುಳಿತು. ಪರಿಣಾಮ ಸುಮಾರು ಮೂರು ವಿದ್ಯುತ್ ಕಂಬಗಳು ಮುರಿದು ಹೋಗಿದ್ದು, ಕೆಲ ಸಮಯ ಸೊರಬ ಚಂದ್ರಗುತ್ತಿ ಮಾರ್ಗದಲ್ಲಿ ವಾಹನಗಳ ಸಂಚಾರಕ್ಕೆ ತೊಡಕಾಯಿತು.

ವಿಷಯ ತಿಳಿದು ಸ್ಥಳಕ್ಕೆ ಮೆಸ್ಕಾಂ ಸಿಬ್ಬಂದಿ ಆಗಮಿಸಿದರು. ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳೀಯರ ನೆರವಿನೊಂದಿಗೆ ಮರವನ್ನು ತೆರವುಗೊಳಿಸಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಗ್ರಾಪಂ ಸದಸ್ಯ ಲೋಕೇಶ್ ಸೇರಿದಂತೆ ಇತರರು ಅಧಿಕಾರಿಗಳಿಗೆ ಸಹಕಾರ ನೀಡಿದರು. ಚಂದ್ರಗುತ್ತಿ ಹೋಬಳಿ ವ್ಯಾಪ್ತಿಯ ಬಹುತೇಕ ಕಡೆ ಮಳೆಯಾಗಿದ್ದು, ಬಿಸಿಲಿನಿಂದ ಕಾದ ಇಳೆಗೆ ಮಳೆ ತಂಪೆರಚಿದಂತಾಗಿದೆ.

ಇದನ್ನೂ ಓದಿ-https://suddilive.in/archives/14766

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close