ಪ್ರಜ್ವಲ್ ರೇವಣ್ಣನವರ ಪ್ರಕರಣ ಉನ್ನತ ಮಟ್ಟದ ತನಿಖೆಗೆ ಆಗ್ರಹ

ಸುದ್ದಿಲೈವ್/ಶಿವಮೊಗ್ಗ

ಹಾಸನದ ಸಂಸದರಾದ ಪ್ರಜ್ವಲ್ ರೇವಣ್ಣನವರಿಗೆ ಸಂಬಂಧಿಸಿದ ಅಶ್ಲೀಲ ವಿಡಿಯೋ ಇರುವ ಪೆನ್‌ಡ್ರೈವ್ ಪ್ರಕರಣವು ಮನುಷ್ಯ ಬದುಕಿನ ಮೇಲಿನ ವಿಕೃತಕಾರಿ ಸೆಕ್ಸ್ ಭಯೋತ್ಪಾದನೆ ಘಟನೆಯಾಗಿರುವುದರಿಂದ ದಿ ಗ್ಲೋಬಲ್ ಹ್ಯೂಮನ್ ರೈಟ್ಸ್ ಫೋರಂ ಸಂಸ್ಥೆಯು ಶಿವಮೊಗ್ಗ ಜಿಲ್ಲಾಧಿಕಾರಿಗಳ ಮೂಲಕ ಅಧ್ಯಕ್ಷರು, ಮಾನವ ಹಕ್ಕುಗಳ ಆಯೋಗ, ಹಾಗೂ ಮುಖ್ಯಮಂತ್ರಿಗಳು ಹಾಗೂ ಮುಖ್ಯ ಕಾರ್ಯದರ್ಶಿಗಳವರಿಗೆ ಪ್ರತ್ಯೇಕ ದೂರು ಮನವಿಯನ್ನು ನೀಡಿತು.

ದಿ ಗ್ಲೋಬಲ್ ಹ್ಯೂಮನ್ ರೈಟ್ಸ್ ಫೋರಂ ಸಂಸ್ಥೆಯು ನೀಡಿದ ಮನವಿಯಲ್ಲಿ ಅಶ್ಲೀಲ ವಿಡಿಯೋ ಇರುವ ಪೆನ್‌ಡ್ರೈವ್ ಪ್ರಕರಣದಲ್ಲಿ ಹಾಸನ ಸಂಸದ ಪ್ರಜ್ವಲ್ ರೇವಣ್ಣನವರನ್ನು ಉನ್ನತ ಮಟ್ಟದ ತನಿಖೆಗೆ ಒಳಪಡಿಸಬೇಕು ಹಾಗೂ ಈ ಪ್ರಕರಣದಲ್ಲಿರುವ ನೂರಾರು ಸಂತ್ರಸ್ಥೆಯರಿಗೆ ಸೂಕ್ತ ಪೊಲೀಸ್, ಸಾಮಾಜಿಕ ಭದ್ರತೆ ನೀಡಬೇಕು, ಮೊಬೈಲ್‌ನಲ್ಲಿದ್ದ ೨೮೦೦ಕ್ಕೂ ಹೆಚ್ಚು ಅಶ್ಲೀಲ ವೀಡಿಯೋ ತುಣುಕುಗಳನ್ನು ರಾತ್ರೋರಾತ್ರಿ ಸಾವಿರಾರು ಪೆನ್ ಡ್ರೈವ್‌ನಲ್ಲಿ ಡೌನ್‌ಲೋಡ್ ಮಾಡಿ ಹಂಚಿಕೆ ಮಾಡಿರುವ ಕಿಡಿಗೇಡಿಗಳ ಮೇಲೆ ಕಾನೂನು ರಿತ್ಯಾ ಪ್ರಕರಣ ದಾಖಲಿಸಿ ತನಿಖಿಸಬೇಕು ಎಂದು ಆಗ್ರಹಿಸಿದೆ.

ಈ ಪ್ರಕರಣದ ಸುದ್ದಿಯನ್ನು ಟಿಆರ್‌ಪಿಗಾಗಿ (ಟೆಲಿವಿಷನ್ ರೇಟಿಂಗ್ ಪಾಯಿಂಟ್) ಯಥಾವತ್ತಾಗಿ ಬಿತ್ತರಿಸುತ್ತಿರುವ ಸುದ್ದಿವಾಹಿನಿ, ಸಾಮಾಜಿಕ ಜಾಲತಾಣಗಳ ಮೇಲೆ ಕಡಿವಾಣವಾಕಬೇಕು, ಇದೊಂದು ಮಹಿಳಾ ಗೌರವ ಪ್ರಧಾನವಾದ ದೇಶದಲ್ಲಿ ಮೊಟ್ಟ ಮೊದಲನೆ ಭಾರಿಗೆ ಮಹಿಳೆಯರನ್ನು ಈ ರೀತಿಯಾಗಿ ತನ್ನ ಕಾಮತೃಷೆಗೆ ಬಳಸಿಕೊಂಡ ಪ್ರಕರಣವಾಗಿದ್ದು ಯಾವ ಉದ್ದೇಶಕ್ಕಾಗಿ ಇದನ್ನು ಚಿತ್ರಿಕರಿಸಿಕೊಂಡಿದ್ದರು ಎನ್ನುವುದರ ಬಗ್ಗೆಯ ಸೂಕ್ತ ತನಿಖೆಗೊಳಪಡಿಸಬೇಕು, ೨೦೨೩ರ ಸಾಲಿನಿಂದಲೂ ಈ ಪ್ರಕರಣದ ಬಗ್ಗೆ ನಾಗರೀಕ ವಲಯದಲ್ಲಿ ಸುದ್ದಿಗಳಿದ್ದರು ಹಾಸನದ ಜಿಲ್ಲಾ ರಕ್ಷಣಾಧಿಕಾರಿಗಳವರು ತಾತ್ಸಾರತೆ ಹೊಂದಿರುವುದು ಅನುಮಾನಕ್ಕೆಡೆ ಮಾಡಿಕೊಟ್ಟಿರುವುದರಿಂದ ಇವರನ್ನು ಕೂಡ ಈ ಪ್ರಕರಣದಲ್ಲಿ ತನಿಖಿಸಬೇಕು, ಇದೊಂದು ಮನುಷ್ಯ ಬದುಕಿನ ಮೇಲಿನ ವಿಕೃತಕಾರಿ ಸೆಕ್ಸ್ ಭಯೋತ್ಪಾದನೆಯಾಗಿರುವುದರಿಂದ ಇದನ್ನು ಗಂಭೀರತೆಯಾಗಿ ಪರಿಗಣಿಸಿ ಸೂಕ್ತ ಕ್ರಮಕ್ಕೆ ಖುದ್ದು ಮಾನವ ಹಕ್ಕುಗಳ ಆಯೋಗ ಕೇಸು ದಾಖಲಿಸಿಕೊಳ್ಳಬೇಕು ಹಾಗೂ ಹಾಗೂ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಈ ಪ್ರಕರಣವನ್ನು ದಾಖಲಿಸಿಕೊಂಡು ತನಿಖಿಸಲು ಆದೇಶಿಸಬೇಕೆಂದು ತಿಳಿಸಿದೆ.

ಈ ದೂರು ಮನವಿಯ ಸಂದರ್ಭದಲ್ಲಿ ಅಧ್ಯಕ್ಷರಾದ ಜ್ಯೋತಿ ಅರಳಪ್ಪ, ಗೌರವ ಅಧ್ಯಕ್ಷರಾದ ಮುಕ್ತಿಯಾರ್ ಅಹ್ಮದ್, ಉಪಾಧ್ಯಕ್ಷರಾದ ಕೆ.ಎಸ್ ಶಶಿ, ಪ್ರಧಾನ ಕಾರ್ಯದರ್ಶಿಗಳಾದ ಗಾರಾ.ಶ್ರೀನಿವಾಸ್ ಸಹ ಕಾರ್ಯದರ್ಶಿ ಚಿರಂಜೀವಿ ಬಾಬು ಹಾಗೂ ನಿರ್ಧೇಶಕರುಗಳಾದ ಸ್ವಪ್ನ ಸಂತೋಷ್ ಗೌಡ, ಮಮತಾ ಶಿವಣ್ಣ, ರುದ್ರೇಶ್ ಯಾದವ್, ಪರಮೇಶ್ವರ್, ಎಲ್,ಕೆ, ಚಂದ್ರಹಾಸ್ ಎನ್ ರಾಯ್ಕರ್, ಅನೀಲ್ ಕುಮಾರ್‌ರವರುಗಳು ಉಪಸ್ಥಿತರಿದ್ದರು.

ಮನವಿ ಸಂಕ್ಷಿಪ್ತತೆಯ ವಿವರಣೆ : ಅಶ್ಲೀಲ ವಿಡಿಯೋ ಇರುವ ಪೆನ್‌ಡ್ರೈವ್ ಪ್ರಕರಣವು ಮಹಿಳಾ ಪ್ರಧಾನ ರಾಷ್ಟ್ರಕ್ಕೆ ಮಾರಕವಾಗಿದ್ದು ಇದೊಂದು ಮನುಷ್ಯ ಬದುಕಿನ ಮೇಲಿನ ವಿಕೃತಕಾರಿ ಸೆಕ್ಸ್ ಭಯೋತ್ಪಾದನೆಯಾಗಿರುವುದು ಪ್ರಾಥಮಿಕ ಹಂತದಲ್ಲಿ ಧೃಡಪಟ್ಟಿದೆ, ೨೮೦೦ಕ್ಕೂ ಹೆಚ್ಚು ಅಶ್ಲೀಲ ವಿಡಿಯೋ ತುಣುಕುಗಳನ್ನು ತನ್ನ ಮೊಬೈಲ್‌ನಲ್ಲಿಯೇ ಚಿತ್ರಿಕರಿಸಿಕೊಂಡಿದ್ದ ಎನ್ನಲಾದ ಈ ಸಂಗತಿಯಲ್ಲಿ ಹಾಸನ ಸಂಸದ ಪ್ರಜ್ವಲ್ ರೇವಣ್ಣನವರು ಯಾವ ಉದ್ದೇಶಕ್ಕಾಗಿ ಚಿತ್ರಿಕರಿಸಿಕೊಂಡಿದ್ದರು ಎನ್ನುವುದು ಗೊತ್ತು ಮಾಡಿಕೊಳ್ಳಬೇಕಿದೆ, ಕೇವಲ ತನ್ನ ಕಾಮತೃಷೆಗಾಗಿ ಚಿತ್ರಿಕರಿಸಿಕೊಂಡಿದ್ದರೆ..? ಅಥವಾ ಬ್ಲಾಕ್‌ಮೇಲ್ ಮಾಡುವುದಕ್ಕಾಗಿ ಚಿತ್ರಿಕರಿಸಿಕೊಂಡಿದ್ದರೇ..?! ಸೆಕ್ಸ್ ಬಾಂಬರ್ ಯೋಜನೆ ಸಿದ್ದಪಡಿಸಿ ಈ ಮೂಲಕ ಸರಕಾರಿ ಕೆಲಸಗಳನ್ನು ದುರುಪಯೋಗಪಡಿಸಿಕೊಳ್ಳಲು ಇದನ್ನು ಬಳಸಿಕೊಂಡಿದ್ದಾರೆಯೇ..? ೨೦೨೩ರ ಸಾಲಿನಿಂದಲೂ ಈ ಪ್ರಕರಣದ ಬಗ್ಗೆ ಒಂದಿಷ್ಟು ಚರ್ಚೆ ಗ್ರಾಸವಾಗಿದ್ದರು ಹಾಸನದ ಗುಪ್ತದಳ ಅಗತ್ಯ ಮಾಹಿತಿಯನ್ನು ರವಾನಿಸಲು ವೈಪಲ್ಯಗೊಂಡಿತ್ತೇ..? ಅಥವಾ ಮಾಹಿತಿ ಇದ್ದರು ಹಾಸನದ ಜಿಲ್ಲಾರಕ್ಷಣಾಧಿಕಾರಿಗಳು ಯಾವುದೇ ಕ್ರಮ ಜರುಗಿಸದೆ ತಾತ್ಸಾರತೆ ಹೊಂದಿದ್ದು ಯಾವ ಕಾರಣಕ್ಕಾಗಿ ಎನ್ನುವುದು ತಾವುಗಳು ಕೇಸು ದಾಖಲಿಸಿಕೊಂಡು ತನಿಖಿಸಬೇಕೆಂದು ಈ ಮೂಲಕ ತಮ್ಮ ಆವಗಾಹನೆಗೆ ದಿ ಗ್ಲೋಬಲ್ ಹ್ಯೂಮನ್ ರೈಟ್ಸ್ ಪೋರಂ ಸಂಘಟನೆಯು ತರಬಯಸುತ್ತದೆ ಎಂದು ತಿಳಿಸಿದೆ

ಲೋಕಸಭಾ ಚುನಾವಣೆಯ ಈ ಹೊತ್ತಿನಲ್ಲಿ ಪ್ರಜಾಪ್ರಭುತ್ವದ ಹಕ್ಕು ಪ್ರಧಾನತೆಯ ಸಂದರ್ಭದಲ್ಲಿಯೇ ಇದು ಬಹಿರಂಗವಾಗಲು ಕಾರಣವೇನು ಎನ್ನುವುದನ್ನು ಪತ್ತೆಹಚ್ಚಲು ಆಗ್ರಹಿಸುತ್ತದೆ, ಹಾಸನದ ಸಂಸದ ಪ್ರಜ್ವಲ್ ರೇವಣ್ಣನವರು ಮನೆ ಕೆಲಸದವರಿಂದ ಹಿಡಿದು ನಿರೂಪಕಿ, ಪೊಲೀಸ್ ಅಧಿಕಾರಿಗಳು, ವಿವಿಧ ಸರಕಾರಿ, ಅರೆ ಸರಕಾರಿ ನೌಕರಿಯಲ್ಲಿರುವವರನ್ನು, ಸಂಘಟನೆ, ರಾಜಕೀಯದಲ್ಲಿ ಮುಂಚೂಣಿಯಲ್ಲಿದ್ದವರು ಹಾಗೂ ಮಾಡಲಿಂಗ್, ಕಿರುತೆರೆ, ಸಿನಿಮಾ ನಟಿಯರನ್ನು ಬಿಡದೆ ತನ್ನ ಕಾಮತೃಷೆಗೆ ಒತ್ತಾಯಪೂರ್ವಕವಾಗಿಯೋ, ಬಲತ್ಕರಿಸಿಯೋ, ಬ್ಲಾಕ್‌ಮೇಲ್ ಮಾಡಿಯೋ, ನೂರಾರು ಸಂಖ್ಯೆಯಲ್ಲಿ ಮಹಿಳೆಯರನ್ನು ಸೆಳೆದುಕೊಂಡು ೨೮೦೦ಕ್ಕೂ ಹೆಚ್ಚು ಅಶ್ಲೀಲ ವಿಡಿಯೋ ತುಣುಕುಗಳನ್ನು ತನ್ನ ಮೊಬೈಲ್‌ನಲ್ಲಿಯೇ ಚಿತ್ರಿಕರಿಸಿಕೊಂಡಿದ್ದು ನಾಗರೀಕ ಹಾಗೂ ಮನುಷ್ಯ ಬದುಕಿನ ಮಾರಕವಾಗಿದ್ದು ಇದೊಂದು ಅನಾಹುತಕಾರಿ ಘಟನೆಯಾಗಿರುವುದರಿಂದ ಇದೀಗ ತನಿಖೆ ನಡೆಸುತ್ತಿರುವ ಎಸ್‌ಐಟಿಯ ಜೊತೆಯಲ್ಲಿ ಮಾನವ ಹಕ್ಕುಗಳ ಆಯೋಗ ಹಾಗೂ ರಾಜ್ಯ ಪೊಲೀಸ್ ನಿರ್ದೇಶಕರು ಕೂಡ ಪ್ರತ್ಯೇಕವಾಗಿ ತನಿಖಿಸಬೇಕೆಂದು ಸಂಘಟನೆ ಈ ದೂರು ನೀಡುತ್ತದೆ ಎಂದು ಹೇಳಿದೆ

ಮೊಬೈಲ್‌ನಲ್ಲಿದ್ದ ಈ ೨೮೦೦ಕ್ಕೂ ಅಶ್ಲೀಲ ವೀಡಿಯೋ ತುಣುಕುಗಳನ್ನು ಸಾವಿರಾರು ಪೆನ್‌ಡ್ರೈವ್‌ಗಳಿಗೆ ಡೌನ್‌ಲೋಡ್ ಮಾಡಿ ಹಂಚಿಕೆ ಮಾಡಿರುವುದು, ಹಾಗೂ ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಕೆಲ ದೃಶ್ಯ ಮಾಧ್ಯಮಗಳಲ್ಲಿ ಬಿತ್ತರಿಸಿರುವುದು ನಾಗರೀಕ ಸಮಾಜಕ್ಕೆ ತರವಲ್ಲವಾಗಿರುವುದರಿಂದ ಅಶ್ಲೀಲ ವೀಡಿಯೋಗಳನ್ನು ಸೆರೆ ಹಿಡಿದವರು ಹಾಗೂ ವಿಕೃತವಾಗಿ ಮಹಿಳೆಯರನ್ನು ನಡೆಸಿಕೊಂಡವರು ಎಷ್ಟು ಅಪರಾಧಿಗಳೋ.. ಹಂಚಿಕೆ ಹಾಗೂ ಸುದ್ದಿ ಬಿತ್ತರಿಸುವುದು ಕೂಡ ಅಷ್ಟೆ ಅಪರಾಧವಾಗಿರುವುದರಿಂದ ಇಂತಿವರುಗಳ ಮೇಲೂ ಕಾನೂನು ಕ್ರಮ ಜರುಗಿಸಲು ದಿ ಗ್ಲೋಬಲ್ ಹ್ಯೂಮನ್ ರೈಟ್ಸ್ ಪೋರಂ ಸಂಘಟನೆಯು ಒತ್ತಾಯಿಸುತ್ತದೆ ಎಂದು ವಿವರಿಸಿದೆ.

ಇದೊಂದು ದೈಹಿಕ ಹಿಂಸೆ ಪ್ರಧಾನವಾದ ಪ್ರಕರಣ ಮಾತ್ರವಲ್ಲ, ಮಾನಸೀಕ ಅತ್ಯಾಚಾರವು ಹೌದಾಗಿದೆ ಹಾಗೂ ರಾಷ್ಟ್ರದಲ್ಲಿಯೆ ಮೊಟ್ಟ ಮೊದಲನೆ ಪ್ರಕರಣ ಇದಾಗಿದ್ದು ಈ ಮೇಲೆ ಹೇಳಿರುವಂತೆ ಮನುಷ್ಯ ಬದುಕಿನ ಮೇಲಿನ ವಿಕೃತ ಸೆಕ್ಸ್ ಭಯೋತ್ಪಾದನೆಯಾಗಿರುವುದು ಈ ಅಂಶಗಳಿಂದ ಧೃಡಪಡುವುದರಿಂದ ಮಾನವ ಹಕ್ಕುಗಳ ಆಯೋಗ ಹಾಗೂ ರಾಜ್ಯ ಪೊಲೀಸ್ ಮಹಾನಿರ್ದೇಶಕರು ಪ್ರತ್ಯೇಕ ದೂರು ದಾಖಲಿಸಿಕೊಂಡು ತನಿಖಾ ತಂಡ ರಚಿಸುವಂತೆ ಈ ಮೂಲಕ ಸಂಘಟನೆ ಆಗ್ರಹಿಸಿದೆ

ಯಾವುದೇ ವಿಚಾರಣೆಗಳಾಗಲಿ, ತನಿಖೆಗಳಾಗಲಿ ಈ ಪ್ರಕರಣದಲ್ಲಿರುವ ಸಂತ್ರಸ್ಥೆಯರ ಹೆಸರು ಹಾಗೂ ಪರಿಚಯಗಳನ್ನು ಗೌಪ್ಯವಾಗಿಡಬೇಕು, ಹಾಗೂ ಅವರಿಗೆ ಕಾನೂನು ಹಾಗೂ ಸಾಮಾಜಿಕ ಭದ್ರತೆ ನೀಡಬೇಕು ಎಂದು ಈ ಮೂಲಕ ಸಂಘಟನೆ ತಿಳಿಸುತ್ತದೆ ಎಂದು ಹೇಳಿದೆ.

ಈ ಪ್ರಕರಣವು ಬಹುದೊಡ್ಡದಾದ ಲೈಂಗಿಕ ಹಗರಣದಂತೆ ಸ್ಪೋಟವಾಗಿರುವುದರಿಂದ ಇದರ ರೂವಾರಿ ಹಾಸನದ ಸಂಸದ ಪ್ರಜ್ವಲ್ ರೇವಣ್ಣನವರನ್ನು ಹಾಗೂ ಇದಕ್ಕೆ ಬೆಂಬಲಿಸಿದವರನ್ನು ಬಂಧಿಸಿ ವಿಚಾರಣೆ ನಡೆಸಿ ಭಾರತೀಯ ದಂಡ ಸಂಹಿತೆ ರಿತ್ಯಾ ಪ್ರಕರಣ ದಾಖಲಿಸಲು ದಿ ಗ್ಲೋಬಲ್ ಹ್ಯೂಮನ್ ರೈಟ್ಸ್ ಪೋರಂ ಈ ದೂರು ಪ್ರತಿಯನ್ನು ಘಟನೆಯನ್ನು ಆಧರಿಸಿ ತಮ್ಮ ಇಲಾಖೆಗಳಿಗೆ ಸಲ್ಲಿಸುತ್ತಿದೆ ಎಂದು ವಿವರಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close