ಹೊಸಮನೆಯಲ್ಲಿ ಕಿಡಿಗೇಡಿಗಳ ಅಟ್ಟಹಾಸ

ಸುದ್ದಿಲೈವ್/ಶಿವಮೊಗ್ಗ

ಹೊಸಮನೆ ಮೂರನೇತಿರುವಿನ ಬಳಿಯಿರುವ ಮಾರಿಕಾಂಬ ದೇವಸ್ಥಾನದ ಡಾ.ಬಾಬು ಜಗಜೀವನ್ ರಾಮ್ ಸಮುದಾಯ ಭವನದ ಸುತ್ತಮುತ್ತಲಿನ ಮನೆಗಳ ಮುಂದೆ ನಿಲ್ಲಿಸಿರುವ ವಾಹನಗಳ ಗ್ಲಾಜುಗಳನ್ನ‌ ಒಡೆದು ದುಷ್ಕರ್ಮಿಗಳು ಅಟ್ಟಹಾಸ ಮೆರೆದಿದ್ದಾರೆ.

ಸಮುದಾಯ ಭವನದ ಬಳಿ ನಿಲ್ಲಿಸಿದ್ದ ನಾಲ್ಕು ಕಾರು, ನಾಲ್ಕು ದ್ವಿಚಕ್ರ ವಾಹನ ಹಾಗೂ ಎರಡು ಆಟೋಗಳನ್ನ ರಾತ್ರೋ ರಾತ್ರಿ‌ ದುಷ್ಕರ್ಮಿಗಳು ಹಾನಿ ಮಾಡಿದ್ದಾರೆ. ದ್ವಿಚಕ್ರವಾಹನಗಳ ಹೆಡ್ ಲೈಟ್ ಒಡೆದಿದ್ದಾರೆ. ಕಾರುಗಳ ಗ್ಲಾಜುಗಳನ್ನ ಜಕಂಗೊಳಿಸಿದ್ದಾರೆ.

ಮದುವೆಗಾಗಿ ತುಮಕೂರಿನಿಂದ ಶಿವಮೊಗ್ಗಕ್ಕೆ ಬಂದಿದ್ದ ರಂಗರಾಜು ಅವರಿಗೆ ಸೇರಿದ ಮಾರುತಿ ಸ್ವಿಫ್ಟ್ ಕಾರನ್ನ ಕಿಡಿಗೇಡಿಗಳು ಗಾಜುಗಳನ್ನ ಹೊಡೆದಿದ್ದಾರೆ. ಜಗದೀಶ್ ಅವರಿಗೆ ಸೇರಿದ ಅಂಗಡಿ ಬೀಗವನ್ನ‌ಮಚ್ಚಿನಿಂದ ಹೊಡೆದಿದ್ದಾರೆ.

ಸಂದೇಶ್ ಅವರಿಗೆ ಸೇರಿದ ಹೂಂಡೈ ವರ್ಣ ಕಾರುಇನ ಹಿಂಭಾಗದ ಗ್ಲಾಜುಗಳು ಸಂಪೂರ್ಣ ಹಾನಿಗೊಳಗಾಗಿದೆ, ಇಲ್ಲಿಂದ ಸ್ವಲ್ಪ ಮುಙದೆ ಸ್ಯಾಂಟ್ರೋ ಕಾರನ್ನೂ ದುಷ್ಕರ್ಮಿಗಳು ಹಾನಿ ಮಾಡಿದ್ದಾರೆ, ಮಂಜ, ಲಿಂಗರಾಜು ಅವರಿಗೆ ಸೇರಿದ ಎರಡು ಆಟೋಗಳ ಗಾಜನ್ನ ಹೊಡೆದಿದ್ದಾರೆ.‌ಸಿದ್ದಪ್ಪ, ಜಗದೀಶ್, ಚಂದ್ರಪ್ಪ ಸೇರಿದಂತೆ ನಾಲ್ವರ ಬೈಕ್ ಗಳನ್ನ ಕಿಡಿಗೇಡಿಗಳು ಹಾಳು ಮಾಡಿದ್ದಾರೆ. ರಾತ್ರಿ ಹುಟ್ಟುಹಬ್ಬ ಆಚರಣೆಯ ವೇಳೆ ಈ ಕೃತ್ಯ ನಡೆದಿದೆ ಎನ್ನಲಾಗಿದೆ.

ಒಂದು ತಿಂಗಳ ಹಿಂದೆ ಹೊಸಮನೆಯ ಎರಡನೇ ತಿರುವಿನಲ್ಲಿ ಓಮ್ನಿ ಮತ್ತು ಆಕ್ಟಿವಾ ಕಾರನ್ನ ದುಷ್ಕರ್ಮಿಗಳು ಹಾನಿಉಂಟು ಮಾಡಿದ್ದರು. ಒಂದು ತಿಂಗಳ‌ನಂತರ ಮತ್ತೆ ದುಷ್ಕರ್ಮಿಗಳು ಅಟ್ಟಹಾಸ ಮೆರೆದಿದ್ದಾರೆ. ಸ್ಥಳೀಯರು ಗಾಂಜಾ ಗುಂಗಿನಿಂದ ಯುವಕರು ಈ ದುಷ್ಕೃತ್ಯ ಮೆರೆದಿರುವುದಾಗಿ ಆರೋಪಿಸಿದ್ದಾರೆ. ರಾತ್ರಿನೇ ಪೊಲೀಸರು ಸ್ಥಳಕ್ಕೆ ದಾವಿಸಿ ಅಗತ್ಯ ಮಾಹಿತಿ ಕಲೆ ಹಾಕಿದ್ದಾರೆ.

ಇದನ್ನೂ ಓದಿ-https://suddilive.in/archives/15780

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close