ಅಕ್ರಮ ಬಡ್ಡಿವ್ಯವಹಾರ-ಜಯನಗರ ಪೊಲೀಸರಿಂದ ದಾಳಿ

ಸುದ್ದಿಲೈವ್/ಶಿವಮೊಗ್ಗ

ಅಕ್ರಮ ಬಡ್ಡಿ ವ್ಯವಹಾರ ಮಾಡುತ್ತಿದ್ದ ವ್ಯಕ್ತಿಯ ವಿರುದ್ಧ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವೆಂಕಟೇಶ ನಗರ ಶಿವಮೊಗ್ಗ ಟೌನ್‌ನ ಮಹಿಳೆಯೊಬ್ಬರು ವೆಂಕಟೇಶ್ ಎಂಬುವರಿಂದ ತಿಂಗಳಿಗೆ 5% ಬಡ್ಡಿಯಂತೆ ಸಾಲವನ್ನು ಪಡೆದಿದದರು. ಇದಕ್ಕಾಗಿ ತಮ್ಮ ಮನೆಯ ದಾಖಲೆ ಪತ್ರ ಹಾಗೂ ಬ್ಯಾಂಕ್ ನ ಖಾಲಿ ಚೆಕ್ ಅನ್ನು ಅಡವಿಟ್ಟಿದ್ದರು.

ಸಾಲ ಮತ್ತು ಬಡ್ಡಿ ಹಣವನ್ನು ಸಕಾಲದಲ್ಲಿ ನೀಡಲು ಆಗದೆ ಇದ್ದುದರಿಂದ ಮಹಿಳೆಗೆ ವೆಂಕಟೇಶನು ಬಡ್ಡಿ ಹಣವನ್ನು ಕೊಡು ಇಲ್ಲ ಅಂದರೆ ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ. ನೀವು ಕೊಟ್ಟ ಚೆಕ್ ಗಳ ಆಧಾರದ ಮೇಲೆ ಹೆಚ್ಚಿನ ಹಣಕ್ಕಾಗಿ ಕೋರ್ಟ್ ನಲ್ಲಿ ಕೇಸು ಹಾಕುತ್ತೇನೆಂದು ಬೆದರಿಕೆ ಹಾಕಿದ್ದನು.

ಆದ್ದರಿಂದ ಅಕ್ರಮವಾಗಿ ಬಡ್ಡಿ ವ್ಯವಹಾರವನ್ನು ನಡೆಸುತ್ತಿರುವ ವೆಂಕಟೇಶನ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಕೋರಿ ನೀಡಿದ ದೂರಿನ ಮೇರೆಗೆ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಶ್ರೀ ಮಿಥುನ್ ಕುಮಾರ್ ಜಿ. ಕೆ. ಐಪಿಎಸ್, ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ, ಶ್ರೀ ಅನಿಲ್ ಕುಮಾರ್ ಭೂಮರಡ್ಡಿ, ಹೆಚ್ಚುವರಿ ಪೊಲೀಸ್ ಅಧಿಕ್ಷಕರು-1, ಶಿವಮೊಗ್ಗ ಜಿಲ್ಲೆ ಮತ್ತು ಶ್ರೀ ಕಾರಿಯಪ್ಪ, ಎ ಜಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು-2, ಶಿವಮೊಗ್ಗ ಜಿಲ್ಲೆ ರವರ ಮಾರ್ಗಗದರ್ಶನದಲ್ಲಿ ಶ್ರೀ ಸುರೇಶ್, ಪೊಲೀಸ್ ಉಪಾಧೀಕ್ಷಕರು, ಶಿವಮೊಗ್ಗ ಬಿ ಉಪ ವಿಭಾಗರವರ ಮೇಲ್ವಿಚಾರಣೆಯಲ್ಲಿ ಶ್ರೀ ಸಿದ್ದೇಗೌಡ ಪೊಲೀಸ್ ನಿರೀಕ್ಷಕರು, ಜಯನಗರ ಪೊಲೀಸ್ ಠಾಣೆ ರವರ ನೇತೃತ್ವದ ಸಿಬ್ಬಂದಿಗಳನ್ನೊಳಗೊಂಡ ತಂಡವು ವೆಂಕಟೇಶ್ ಅವರ ಮನೆಯ ಮೇಲೆ ದಾಳಿ ನಡೆಸಿದೆ.

ದಾಳಿಯಲ್ಲಿ, 29,750/- ನಗದು ಹಣ 13 ಖಾಲಿ ಚೆಕ್ ಗಳು, ರೂ 55,000/- ಎಂದು ನಮೂದಾಗಿರುವ ಒಂದು ಚೆಕ್, ಸಹಿ ಇರುವ 100 ರೂನ ಖಾಲಿ ಇ-ಸ್ಟಾಂಪ್, ನಿವೇಶನ ದಾಖಲಾತಿಗಳು ಮತ್ತು ಬಡ್ಡಿ ವ್ಯವಹಾರದ ಬಗ್ಗೆ ನಮೂದು ಮಾಡಿರುವ ಏಳು ನೋಟ್ ಬುಕ್‌ಗಳು ಪತ್ತೆಯಾಗಿದೆ. ಇವುಗಳನ್ನ ಪೊಲೀಸರು ವಶಪಡಿಸಿಕೊಂಡು ಕಾನೂನು ರೀತಿಯ ಕ್ರಮ ಜರುಗಿಸಿದ್ದಾರೆ.

ವಿಶೇಷ ಸೂಚನೆ

ಅಕ್ರಮ ಬಡ್ಡಿದಾರ ಬಗ್ಗೆ ಮಾಹಿತಿ ಇದ್ದಲ್ಲಿ ಸಾರ್ವಜನಿಜರು ಹತ್ತಿರದ ಪೊಲೀಸ್ ಠಾಣೆ ಅಥವಾ 112 ಗೆ ದೂರು ನೀಡಬಹುದು ಎಂದು ಪೊಲೀಸ್ ಪ್ರಕಟಣೆಯಲ್ಲಿ ಸೂಚಿಸಲಾಗಿದೆ.

ಇದನ್ನೂ ಓದಿ-https://suddilive.in/archives/14965

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close