ಡಿಕೆಶಿಯನ್ನ ಸಚಿವ ಸಂಪುಟದಿಂದ ಕೈಬಿಡಿ-ಜೆಡಿಎಸ್ ಭರ್ಜರಿ ಪ್ರತಿಭಟನೆ

ಸುದ್ದಿಲೈವ್/ಶಿವಮೊಗ್ಗ

ಡಿಕೆ ಶಿವಕುಮಾರ್ ಅವರನ್ನ ಸಚಿವ ಸಂಪುಟದಿಂದ ಕೈಬಿಡಬೇಕೆಂದು ಒತ್ತಾಯಿಸಿ ಇಂದು ಜಿಲ್ಲಾ ಜಾತ್ಯಾತೀತ ಜನತಾದಳ ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಧಿಕರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿತು.

ನೆಹರೂ ರಸ್ತೆಯಲ್ಲಿರುವ ಕಚೇರಿಯಿಂದ ಹೊರಟ ಪಕ್ಷದ ಪ್ರತಿಭಟನಾ ಮೆರವಣಿಗೆ ನಗರದ ಗೋಪಿ ವೃತ್ತ, ಮಹಾವೀರ ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತಲುಪಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿತು.

ಈ ವೇಳೆ ಮಾತನಾಡಿದ ಪಕ್ಷದ ಅಧ್ಯಕ್ಷ ಕಡಿದಾಳ್ ಗೋಪಾಲ್, ಅಶ್ಲೀಲ ವೀಡಿಯೋ ಪ್ರಕರಣ ಮಹಿಳಾ ಲೈಂಗಿಕ ದೌರ್ಜನ್ಯ ಹಾಗೂ ಪೆನ್ ಡ್ರೈವ್ ಹಂಚಿಕೆ ಪ್ರಕರಣದ ತನಿಖೆಯನ್ನ ಈಗಾಗಲೇ ನೀಡಿರುವ ಎಸ್ ಐಟಿ ತನಿಖೆಯನ್ನ ರದ್ದುಗೊಳಿಸಬೇಕು. ಸಿಬಿಐಗೆ ವಹಿಸಬೇಕು ಎಂದು ಆಗ್ರಹಿಸಿದರು.

ಪೆನ್ ಡ್ರೈವ್ ಹಂಚಿಕೆಯ ಮಾಸ್ಟರ್ ಮೈಂಡ್ ಡಿ.ಕೆ.ಶಿವಕುಮಾರ್ ರನ್ನ ಸಚಿವ ಸಂಪುದಿಂದ ವಜಾಗೊಳಿಸಬೇಕು ಎಂದು ಅವರು ಒತ್ತಾಯಿಸಿದರು.

ಮಾಜಿ ಶಾಸಕ ಕೆಬಿ ಪ್ರಸನ್ನ ಕುಮಾರ್ ಮಾತನಾಡಿ,ಮೊದಲಿಗೆ ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಎಸ್ಐಟಿ ತನಿಖೆಯನ್ನ ಸ್ವಾಗತಿಸಲಾಗಿದೆ‌. ನಂತರ ಎಸ್ಐಟಿ ತನಿಖೆಯಲ್ಲಿ ರಾಜಕೀಯ ವಾಸನೆ ಹೊಡೆಯಲು ಆರಂಭಿಸಿತು. ಹಾಗಾಗಿ ಎಸ್ಐಟಿ ರದ್ದುಗೊಳಿಸಬೇಕು. ಸಿಬಿಐಗೆ ತನಿಖೆಗೆ‌ವಹಿಸಬೇಕು ಎಂದರು.

ಮೈಕ್ ಬಳಕೆಗೆ ಅಡ್ಡಿ

ಇದೇ ವೇಳೆ ಪರಿಷತ್ ಚುನಾವಣೆಯ ನೀತಿ ಸಂಹಿತೆ ಜಾರಿಯಿರುವ ಹಿನ್ನಲೆಯಲ್ಲಿ ಪ್ರತಿಭಟನೆಗೆ ಬಳಸಲಾದ ಮೈಕ್ ಗೆ ಅಧಿಕಾರಿಗಳು ತಡೆವೊಡ್ಡಿದ್ದಾರೆ. ಜಿಲ್ಕಾಧ್ಯಕ್ಷ ಕಡಿದಾಳ್ ಗೋಪಾಲ್ ಮಾತನಾಡಿ ಮಾಜಿ ಶಾಸಕರು ಮಾತನಾಡುವ ವೇಳೆ ಅಧಿಕಾರಿಗಳು ತಡೆವೊಡ್ಡಿದರು. ನಂತರ ಬಖಸಲಾಗುತ್ತಿದ್ದ ಆಟೋ ಮೈಕ್ ನ್ನ ಸ್ಥಗಿತಗೊಳಿಸಲಾಯಿತು.‌

ಇದನ್ನೂ ಓದಿ-https://suddilive.in/archives/14799

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು