ಮಾಸ್ ರೇಪಿಸ್ಟ್ ಪರ ಪ್ರಧಾನಿ ಮತಯಾಚನೆ-ರಾಹುಲ್ ವಾಗ್ದಾಳಿ

ಸುದ್ದಿಲೈವ್/ಶಿವಮೊಗ್ಗ

ಈ ಚುನಾವಣೆ ಮೊದಲ ಚುನಾವಣೆಯಾಗಿದೆ . ಬಿಜೆಪಿ ಭಾರತದ ಸಂವಿಧಾನವನ್ನ ಬದಲಿಸುವ ಇಂಗಿತ ವ್ಯಕ್ತಪಡಿಸಿದೆ. ಅದರ ಮೇಲೆ ದೇಶದ ಚುನಾವಣೆ ನಡೆಯುತ್ತಿದೆ ಎಂದು ಭವಿಷ್ಯದ ಪ್ರಧಾನಿ ರಾಹುಲ್ ಗಾಂಧಿ ತಿಳಿಸಿದರು.

ಅವರು ಫ್ರೀಡಂ ಪಾರ್ಕ್ ನಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿ, ಕಾಂಗ್ರೆಸ್ ಸಂವಿಧಾನವನ್ನ ರಕ್ಷಿಸುತ್ತಿದೆ. ಸಂವಿಧಾನ ಬರೆದಿರುವ ಅಂಬೇಡ್ಕರ್ ಅವರಿಗೆ ಧನ್ಯವಾದ ಹೇಳಬೇಕಿದೆ. ಸಮಾನತೆಯನ್ನ ಸಂವಿಧಾನದಲ್ಲಿ ಹೇಳಿದೆ. ಮೀಸಲಾತಿ ಒಬಿಸಿ ಹಿಂದುಳಿದ ವರ್ಗಗಳಿಗೆ ಸಂವಿಧಾನದಲ್ಲಿ ಲಭಿಸುವ ಹಕ್ಕಾಗಿದೆ.

ಆದರೆ ಬಿಜೆಪಿ ಈ ಮೀಸಲಾತಿಯನ್ನ ತೆಗೆಯಲು ಹೊರಟಿದೆ. ಬಿಜೆಪಿ ಸಮಾನತೆಯರನ್ನ ನಕ್ಸಲ್ ವಾದಿಗಳು ಎನ್ನುತ್ತಿದ್ದಾರೆ. ಒಂದು ಕಡೆ ಸಂವಿಧಾನ ರಕ್ಷಕರು ಎನ್ನುತ್ತಾರೆ. ಬುಡಕಟ್ಟು ಜನರಿಗೆ‌ಮೀಸಲಾತಿ ವಿರೋಧಿಸುತ್ತಿದೆ. ಕಾಂಗ್ರೆಸ್ ಸಮಾನತೆಯಿಂದ ನೋಡುತ್ತದೆ. ಈ ವಿಷಯ ಎತ್ತಿರುವ ಬಿಜೆಪಿಗೆ ಧನ್ಯವಾದ ಹೇಳಬೇಕಿದೆ ಎಂದರು.

ಬುಡಕಟ್ಟುಗಳ ಬಗ್ಗೆ ಮಾತನಾಡಿದರೆ ನಕ್ಸಲ್ ವಾದಿಗಳು ಎನ್ನುತ್ತಾರೆ. ಜೆಪಿ ನಡ್ಡಾ ಮತ್ತು ಪ್ರಧಾನಿಗಳು ದೇಶದ ಬುಡಕಟ್ಟು ಜನರಿಗೆ‌ಮೀಸಲಾತಿ ನೀಡುವ ಬಗ್ಗೆ ಮಾತನಾಡಿರುವುದಕ್ಕೆ ಕ್ಷಮೆ ಕೇಳಬೇಕು. ಪ್ರಜ್ಬಲ್ರೇವಣ್ಣ 400 ಜನ ಮಹಿಳೆಯರನ್ನ ಬಲತ್ಕರಿಸಿ ವಿಡಿಯೋ ಮಾಡಿದ್ದಾರೆ. ಇದೊಂದು ಸೆಕ್ಸ್ ಸ್ಕ್ಯಾಂಡಲ್ ಆಗಿದೆ ಎಂದು ಆರೋಪಿಸಿದರು.

ಮಾಸ್ ರೇಪಿಸ್ಟ್ ಗೆ ಪ್ರಧಾನಿಯಿಂದ ಮತಯಾಚನೆ

ಪ್ರಧಾನಿ ಮೋದಿ ಪ್ರಜ್ವಲ್ ರೇವಣ್ಣನ ಜೊತೆಮತ ಕೇಳಲು ಬಂದಿದ್ದರು. ಪ್ರಜ್ವಲ್ ಗೆ ಮತ ನೀಡಿದರೆ ನನಗೆ ಮತ ಹಾಕಿರುವುದಾಗಿ ಮೋದಿ ಹೇಳಿದ್ದಾರೆ. ಪ್ರಜ್ವಲ್ ರೇವಣ್ಣ‌ ಮಾಸ್  ರೇಪಿಸ್ಟ್ ಎಂದು ಗೊತ್ತಿದ್ದರೂ ಅವರ ಜೊತೆ ಮೈತ್ರಿ ಮಾಡಿಕೊಂಡಿದ್ದಾರೆ.

ಪ್ರಧಾನಿ ದೇಶದ ಪ್ರತಿಯೊಬ್ಬ ಮಹಿಳೆಯನ್ನ ಬಲತ್ಕರಿಸಿದ್ದಾರೆ. ದೇಶದ ಮಹಿಳೆಯರ ಮುಂದೆ ಪ್ರಧಾನಿ ಮತ್ತು ಗೃಹಸಚಿವರು ತಲೆ ಬಾಗಿಸಿ ಕ್ಷಮೆ ಕೇಳಬೇಕು. ಇಡೀ ದೇಶದಲ್ಲಿ ಮಾಸ್ ರೇಪಿಸ್ಟ್ ಗೆ ಮತ ಯಾಚಿಸಿರುವ ಘಟನೆ ನಡೆದಿದೆ ಆರ್ಭಟಿಸಿದರು.

22 ಜನ ಶ್ರೀಮಂತರ ಬೆನ್ನಿಗೆ ನಿಂತ ಬಿಜೆಪಿ

ಅಧಿಕಾರಕ್ಕಾಗಿ ಬಿಜೆಪಿ ಏನು ಮಾಡಲು ಸಿದ್ದರಿದ್ದಾರೆ. 10 ವರ್ಷದಿಂದ 22 ಜನರಿಗಾಗಿ ಕೆಲಸ ಮಾಡಿರುವ ಮೋದಿ ಬಡವರ ರಕ್ತ ಹೀರಿದ್ದಾರೆ. ಅಂಬಾನಿ, ಅದಾನಿ ಸೇರಿದಂತೆ 22 ಜನರಿಗಾಗಿ ಕೆಲಸ ಮಾಡಿ, 14 ಲಕ್ಷ ಕೋಟಿ ರೂ. ನ್ನ ಮನ್ನಾ ಮಾಡಿರುವುದಾಗಿ ಆರೋಪಿಸಿದರು.

ಮೋದಿ ಮಾಸ್ ರೇಪಿಸ್ಟ್ ಗೆ ದೇಶದಿಂದ ಹೊರಹೋಗಲು ಅವಕಾಶ ಮಾಡಿಕೊಟ್ಟಿದ್ದಾರೆ. ಇದೇ ಅವರ ಗ್ಯಾರೆಂಟಿ ಯಾಗಿದೆ. ಕಾಂಗ್ರೆಸ್ ಪಕ್ಷ ಇಂತಹ ರೇಪಿಸ್ಟ್ ರನ್ನ ವಿದೇಶದಿಂದ ಕರೆತರುವುದು ನಮ್ಮ ಗ್ಯಾರೆಂಟಿಯಾಗಿದೆ.

ಮಹಾಲಕ್ಷ್ಮಿ ಯೋಜನೆ ಮುಂದಿನ ಪ್ರಧಾನಿಯನ್ನ ಆಯ್ಕೆ ಮಾಡಲಿದೆ

ಗೃಹಲಕ್ಷ್ಮೀಯಂತೆ ಮಹಾಲಕ್ಷ್ಮಿ ಯೋಜ‌ನೆ ಮುಂದಿನ ಭವ್ಯ ಭಾರತದ ನಿರ್ಮಾಣ ಮಾಡುವ ನಿರ್ಧಾರ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಲಿದೆ. ಮೋದಿ ಎಲ್ಲರನ್ನೂ ಬಡವರನ್ನಾಗಿ ಮಾಡಿದ್ದಾರೆ. ಕೋಟಿಗಟ್ಟಲೆ ಮಹಿಳೆಯರ ಪಟ್ಟಿ ಮಾಡಿ ಅವರ ಅಕೌಂಟ್ ಗೆ 1 ಲಕ್ಷ ರೂ. ಹಣ ಬಿಡುಗಡೆಯನ್ನ ಕಾಂಗ್ರೆಸ್ ಮಾಡಲಿದೆ ಎಂದು ಭರವಸೆ ನೀಡಿದರು‌

ಮಹಾಲಕ್ಷ್ಮಿಯ ಬಗ್ಗೆ ಮಾತನಾಡಿದರೆ ಪ್ರಧಾನಿಗೆ ಭಯ ಹುಟ್ಟಿದೆ. ಅದಾನಿ ಅಂಬಾನಿ ಸೇರಿದಂತೆ 22 ಜನ ಶ್ರೀಮಂತರಿಗೆ ಹಣ ಹೋಗುವಂತೆ ಮಾಡಿರುವ ಮೋದಿಗೆ ಬಡವರಿಗೆ ಹಣ ಹೀಗುವುದು ಇಷ್ಟವಿಲ್ಲ. ಹಾಗಾಗಿ ಮಹಾಲಕ್ಷ್ಮಿ ಯೋಜನೆ ಅವರಿಗೆ ನೋವು ಉಂಟು ಮಾಡಿದೆ ಎಂದು ವಿವರಿಸಿದರು.

ನೀಡಿರುವ ಭರವಸೆ ಈಡೇರಲಿದೆ

ಯುವಕರಿಗೆ ಉದ್ಯೋಗ, ನೀಡುವುದು ಕಾಂಗ್ರೆಸ್ ಭರವಸೆಯಾಗಿದೆ. ಉದ್ಯೋಗ ನೀಡುವುದಾಗಿ ಹೇಳಿದ್ದ ಮೋದಿ ಸುಳ್ಳು ಹೇಳಿದ್ದಾರೆ. 30 ಲಕ್ಷ ಸರ್ಕಾರಿ ಹುದ್ದೆಗಳು ಕೇಂದ್ರದಲ್ಲಿ ಖಾಲಿ ಇದೆ ಕಾಂಗ್ರೆಸ್ ಸರ್ಕಾರ ರಚಿಸುತ್ತಿದ್ದಂತೆ ಭರ್ತಿ ಮಾಡುವುದಾಗಿ ಹೇಳಿದರು.

ಅಂಗನವಾಡಿ ಕಾರ್ಯಕರ್ತರಿಗೆ ಉದ್ಯೋಗ ಭರವಸೆ ನೀಡುತ್ತೇವೆ. ರೈತರಿಗೆ ಕನಿಷ್ಠ ಬೆಂಬಲ ಬೆಲೆ ನೀಡುವುದಾಗಿ ಘೋಷಿಸಿದರು. ಸರ್ಕಾರಿ ಹುದ್ದೆಗಳನ್ನ ಮತ್ತು ಸರ್ಕಾರಿ ಕ್ಷೇತ್ರಗಳನ್ನ ಖಾಸಗಿಕರಣ ಮಾಡಲು ಬಿಜೆಪಿ ಹೊರಟಿದೆ. ಇದನ್ನ ರಕ್ಷಿಸಬೇಕಿದೆ ಎಂದು ಕರೆ ನೀಡಿದರು‌

ಸಚಿವರಿಗೆ ಮುಜುಗರ

ಕನ್ನಡಕ್ಕೆ ಭಾಷಾಂತರ ಮಾಡುತ್ತಿದ್ದ ಸಚಿವ ಮಧು ಬಂಗಾರಪ್ಪನವರಿಗೆ ರಾಹುಲ್ ಗಾಂಧಿಯವರ ಹಿಂದಿ ಭಾಷಣವಮ್ನ ತರ್ಜುಮೆ ಮಾಡಿ ಹೇಳುವಲ್ಲಿ ವಿಫಲರಾಗಿದ್ದಾರೆ. ಮಧ್ಯದಲ್ಲಿಯೇ ಮತ್ತೊಬ್ಬರಿಗೆ ಭಾಷಾಂತರಕ್ಕೆ ಬಿಟ್ಟುಕೊಟ್ಟಿದ್ದಾರೆ. ಭಾಷಾಂತರ ನಾನೇ ಮಾಡಬೇಕಿದೆ ಎಂದು ಹೇಳುತ್ತಿದ್ದ ಸಚಿವರಿಗೆ ಇದೊಂದು ಮುಜುಗರ ತಂದ ಸಂಗತಿಯಾಗಿದೆ. ಅದರ ಜೊತೆಗೆ ಕಾಂಗ್ರೆಸ್ ಎಂದರೆ ಅಶಿಸ್ತು ಎದ್ದುಕಾಣುತ್ತಿತ್ತು. ಪ್ರೆಸ್ ಗ್ಯಾಲರಿಯಲ್ಲಿ ಮಾಧ್ಯಮದವರಿಗೆ ಅಡ್ಡ ಬಂದು ನಿಂತು ಕಾರ್ಯಕರ್ತರು ಅಡ್ಡಿಪಡಿಸಿದ ಘಟನೆ ನಡೆದಿದೆ

ಸಿಎಂ‌ ಮಾತು

ಶಿವಮೊಗ್ಗದಲ್ಲಿ ಮುಂದಿನ‌ ಐದು ವರ್ಷದಲ್ಲಿ ಸಂಸದರಾಗಿ ಯಾರು ಆಗಬೇಕೆಂದು ನಿರ್ಧರಿಸುವ ಕಾಕ ಬಂದಿದೆ. ಸೂಕ್ತ ನಿರ್ಧಾರದೊಂದಿಗೆ ಮಾತಹಾಕಿ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ಕಳೆದ ಬಾರಿ 25 ಜನ ಬಿಜೆಪಿ ಸಂಸದರು ಕರ್ನಾಟಕಕ್ಕೆ ಆದ ನ್ಯಾಯವನ್ನ ಮಾತನಾಡಲಿಲ್ಲ. ಬರದ ವಿಚಾರದಲ್ಲಿ,ಮತ್ತು ಹಣಕಾಸು ಯೋಜಬೆಯಲ್ಲಿ ಬರಬೇಕಿದ್ದ ಹಣ ಸಮರ್ಪಕವಾಗಿ ರಾಜ್ಯಕ್ಕೆ ಬಂದಿಲ್ಲ ಎಂದು ದೂರಿದರು.‌

ಇದನ್ನೂ ಓದಿ-https://suddilive.in/archives/14046

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket