ಸುದ್ದಿಲೈವ್/ಶಿವಮೊಗ್ಗ
ಪರಿಷತ್ ಚುನಾವಣೆ ನಿಧಾನಕ್ಕೆ ಕಾವೇರುತ್ತಿದೆ. ನಿಧಾಕ್ಕೆ ಅಭ್ಯರ್ಥಿಗಳ ಮತಬೇಟೆ ಚುರುಕುಗೊಂಡಿದೆ. ಈ ನಿಟ್ಟಿನಲ್ಲಿ ನೈರತ್ಯ ಪದವೀದರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಧನಂಜಯ್ ಸರ್ಜಿ ಮತಬೇಟೆಯನ್ನ ಚುರುಕುಗೊಳಿಸಿದ್ದಾರೆ.
ಇಂದು ಶಿವಮೊಗ್ಗ ನಗರದ ಸರ್ಜಿ ಕನ್ವೆನ್ಷನ್ ಹಾಲ್ ನಲ್ಲಿ ಬುಧವಾರ ನಡೆದ ಎಲ್ಲ ಸಮಾಜದ ಮುಖಂಡರ ಸ್ನೇಹ ಮಿಲನ ಕಾರ್ಯಕ್ರಮದಲ್ಲಿ ಮತಯಾಚನೆ ನಡೆಸಿದ್ದಾರೆ. ಈ ಬಾರಿಯ ಪರಿಷತ್ ಚುನಾವಣೆಯಲ್ಲಿ ತಮ್ಮನ್ನ ಗೆಲ್ಲಿಸುವಂತೆ ಕೋರಿದ್ದಾರೆ.
ಸ್ನೇಹ ಮಿಲನ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಶಾಸಕರು ಮತ್ತು ರಾಜ್ಯ ಬಿಜೆಪಿ ಕಾರ್ಯದರ್ಶಿಗಳಾದ ಡಿ. ಎಸ್. ಅರುಣ್ , ವಿಧಾನಪರಿಷತ್ ಶಾಸಕರಾದ ಎಸ್. ರುದ್ರೇಗೌಡ್ರು, ರಾಜ್ಯ ಪ್ರಕೋಷ್ಠಗಳ ಸಂಯೋಜಕರಾದ ಎಸ್.ದತ್ತಾತ್ರಿ,
ಶ್ರೀನಿಧಿ ಟೆಕ್ಸ್ ಟೈಲ್ಸ್ ನ ಮಾಲೀಕರಾದ ಟಿ.ಆರ್. ಅಶ್ವತ್ಥನಾರಾಯಣ ಶೆಟ್ಟಿ, ಸಂಘದ ಹಿರಿಯರದ ಕಿಣಿ ಹಾಗೂ ಕಾರ್ಯಕರ್ತರು ವಿವಿಧ ಸಮಾಜದ ಮುಖಂಡರು, ಉದ್ಯಮಿಗಳು ನೂರಾರು ಅಭಿಮಾನಿಗಳು ಉಪಸ್ಥಿತರಿದ್ದರು.
ಇದನ್ನೂ ಓದಿ-https://suddilive.in/archives/15348