ಸುದ್ದಿಲೈವ್/ಶಿವಮೊಗ್ಗ
ಕೇರಳದಲ್ಲಿ ಕರ್ನಾಟಕದ ಕಾಡಾನೆಯ ದಾಳಿಗೆ ಸಾವನ್ನಪ್ಪಿದ್ದ ವ್ಯಕ್ತಿಗೆ ಪರಿಹಾರ ಕೊಡಲು ರಾಜ್ಯ ಸರ್ಕಾರದ ಬಳಿಯಿದ್ದ ಎಲ್ಲಾ ಕಾನೂನುಗಳು ಬಸವಾಪುರದ ತಿಮ್ಮಪ್ಪ ಸತ್ತಾಗ ಅಡ್ಡಿ ಬಂದಿದೆ. ಕೇರಳದಲ್ಲಿ ಕಾಡಾನೆಗಳ ದಾಳಿಗೆ ಕರ್ನಾಟಕದ ಖಜಾನೆ ಬಳಿಕೊಳ್ಳುವುದಾದರೆ, ಮಲೆನಾಡಿನ ವ್ಯಕ್ತಿ ಕಾಡಾನೆ ದಾಳಿ ಸತ್ತಾಗ ಪರಿಹಾರ ನೀಡುವ ವಿಷಯದಲ್ಲಿ ನಿಯಮಗಳಿಲ್ಲ ಎಂಬ ಉತ್ತರ ಇಡೀ ವ್ಯವಸ್ಥೆಯನ್ನೆ ಬೆತ್ತಲಗೊಳಿಸಿದೆ.
ಕಾಡಿನಲ್ಲಿ ಧರುಗು ಆರಿಸಲು ಹೋದ ತಿಮ್ಮಪ್ಪನವರು ಕಾಡಾನೆಗೆ ನಿನ್ನೆ ಬಲಿಯಾಗಿದ್ದಾರೆ. ಬಡಕುಟುಂಬ ತಿಮ್ಮಪ್ಪನಿಗೆ ವನ್ಯಜೀವಿ ಧಾಮದಲ್ಲಿ ಕಾಡಾನೆ ದಾಳಿಗೆ ತುತ್ತಾಗಿರುವ ಕಾರಣ ಅರಣ್ಯ ಇಲಾಖೆ ಪರಿಹಾರ ನೀಡಲು ಬರೋದಿಲ್ಲ ಎಂದು ಸ್ಪಷ್ಟಪಡಿಸಿದೆ..
ಪರಿಹಾರ ಕೊಟ್ಟರೆ ಈಗ ಮಾನವೀಯತೆ ಅಡಿಯಲ್ಲಿ ನೀಡಬೇಕು. ಅಥವಾ ಎಂಎಲ್ ಎಗಳ ಫಂಡ್ ನಿಂದ ಹರಿಹಾರ ಕೊಡಬೇಕು. ಈ ಮಾನವೀಯತೆ ಅಡಿಯಲ್ಲಿ ಮೃತನ ಕುಟುಂಬಕ್ಕೆ ಸಿಗೋದು ಬಿಡಿಕಾಸು. ಅದೇ ವನ್ಯಜೀವಿಗಳ ದಾಳಿಗೆ ಸಿಲುಕಿದರೆ ಲಕ್ಷಾನುಗಟ್ಟಲೆ ಪರಿಹಾರ ಸಿಗುವ ಮಾಹಿತಿ ಇದೆ. ತಿಮ್ಮಪ್ಪನವರು ಸಾವನ್ನಪ್ಪಿರುವ ಸ್ಥಳಕ್ಕೆ ಇಬ್ವರು ಶಾಸಕರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಶಾಸಕ ಗೋಪಾಲ ಕೃಷ್ಣ ಬೇಳೂರು ಮತ್ತು ಎಂಎಲ್ ಸಿ ಡಿ.ಎಸ್ ಅರುಣ್ ಭೇಟಿ ನೀಡಿದ್ದು ಇಬ್ಬರಿಗೂ ಸ್ಥಳಿಯರ ಆಗ್ರಹ ಕೇಳಿ ಬಂದಿದೆ.
ಹೊಸನಗರ ತಾಲೂಕಿನ ಬಸವಾಪುರ ಗ್ರಾಮದಲ್ಲಿ ತಿಮ್ಮಪ್ಪ ಧರುಗು ಎತ್ತಲು ತೆರಳಿದ್ದ ವೇಳೆ ಕಂಡುಬಂದ ಮೂರು ಕಾಡಾನೆಗಳಲ್ಲಿ ಒಂದು ಕಾಡಾನೆಯ ದಾಳಿ ನಡೆಸಿ ತಿಮ್ಮಪ್ಪನವರ ಮೃತ್ಯುವಿಗೆ ಕಾರಣವಾಗಿದೆ. ಇದರಿಂದ ತಿಮ್ಮಪ್ಪ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.
ತಿಮ್ಮಪ್ಪ ಒಂದು ವೇಳೆ ಮನೆಯಲ್ಲಿದ್ದಾಗ ಕಾಡಾನೆ ದಾಳಿಗೆ ತುತ್ತಾಗಿ, ಸಾವನ್ನಪ್ಪಿದ್ದರೆ, ಅಥವಾ ಜಮೀನಿನಲ್ಲಿದ್ದಾಗ ದಾಳಿ ನಡೆದು ಸತ್ತಿದ್ದರೆ 15 ಲಕ್ಷ ರೂ. ವರೆಗೆ ಅರಣ್ಯ ಇಲಾಖೆಯೇ ಪರಿಹಾರ ನೀಡುತ್ತಿತ್ತು. ಆತ ಅರಣ್ಯ ನಿಷೇಧಿತ ಪ್ರದೇಶದಲ್ಲಿ ಸತ್ತಿರುವುದರಿಂದ ಇಲಾಖೆಯ ರಿಲೀಫ್ ಫಂಡ್ ಹಂಚುವ ನಿಯಮದಲ್ಲಿ ನಿರ್ಬಂಧಗಳಿವೆ ಎಂದು ಹೇಳಿ ಇಲಾಖೆ ಕೈತೊಳೆದುಕೊಂಡಿದೆ.
ಅದೇ ಕರ್ನಾಟಕದಿಂದ ಕೇರಳ ರಾಜ್ಯಕ್ಕೆ ಬಂದಿದ್ದ ಕಾಡಾನೆಗಳು ದಾಳಿ ನಡೆಸಿದಾಗ ಓರ್ವ ವ್ಯಕ್ತಿ ಸಾವನ್ಬಪ್ಪಿರುವ ಘಟನೆ ನೆನಪಿನ ಪಟಲದಲ್ಲಿ ಹಾಗೆ ಉಳಿದಿದೆ. ಇಲ್ಲಿ ಯಾವ ಕಾನೂನು ಅಡ್ಡಿ ಬಾರದೆ ಹೊರರಾಜ್ಯದಲ್ಲಿ ನಡೆದ ಘಟನೆಗೆ ಪರಿಹಾರ ನೀಡಲಾಗಿತ್ತು.
ಹೊರ ರಾಜ್ಯದ ವ್ಯಕ್ತಿಗಳಿಗೆ ಪರಿಹಾರ ನೀಡುವ ನಿಯಮಗಳು ಇರುವುದಾದರೆ? ನಿರ್ಬಂಧವನ್ನ ತಿಮ್ಮಪ್ಪನವರ ಸಾವಿನಲ್ಲಿಯಾಕೆ ಇದೆ? ಮೃತ ಕುಟುಂಬವನ್ನ ಅಂಗಲಾಚುವ ಸ್ಥಿತಿಗೆ ತಂದಿಡುವ ಕಾನೂನಾದರೂ ಯಾವುದು? ಕೇರಳದ ಮೃತ ಕುಟುಂಬಕ್ಕೆ ಅರಣ್ಯ ಇಲಾಖೆಯ ಖಜಾನೆಯಿಂದಲೇ ಹಣ ಹೋಗಿರಲಿಲ್ವಾ? ಇಲ್ಲಿ ಕಾನೂನು ಕಣ್ಣುಮುಚ್ಚಿ ಕುಳಿತಿತ್ತಾ? ಇವೆಲ್ಲದಕ್ಕೂ ರಾಜಕಾರಣಿಗಳು, ಮತ್ತು ಸರ್ಕಾರದ ಅಧಿಕಾರಿಗಳು ಉತ್ತರಿಸಬೇಕಿದೆ.
ಇದನ್ನೂ ಓದಿ-https://suddilive.in/archives/14138