ಈ ಬಾರಿ ಕಾಂಗ್ರೆಸ್ ಸಾಂಪ್ರದಾಯಿಕ ಮತಗಳು ಕಿಲಕಿಲ..!-ವೈರಲ್ ಆಗುತ್ತಿವೆ ರಿಲ್ಯಾಕ್ಸ್ ಗೆ ಜಾರಿದ ಶಿವಣ್ಣ ದಂಪತಿಗಳ ಫೊಟೊಗಳು

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗ ಲೋಕಸಭಾ ಚುನಾವಣೆಯ ಮತದಾನಕ್ಕೆ ಏಳು ದಿನ ಬಾಕಿ ಇದೆ. ಚುನಾವಣೆ ಮೇ 07 ರಂದು ನಡೆದರೂ ಮೇ.05 ರಂದು ಬಹಿರಂಗ ಪ್ರಚಾರಕ್ಕೆ ತೆರೆ ಬೀಳಲಿದೆ. ಇವೆಲ್ಲದರ ಮಧ್ಯೆ ಕಾಂಗ್ರೆಸ್ ಪಕ್ಷಕ್ಕೆ ಹೊಸ ಹುರುಪು, ಚೈತನ್ಯ ತಂದುಕೊಟ್ಟಿದೆ.

ಕಾಂಗ್ರೆಸ್ ಮತದಾರರಲ್ಲಿ ಅದರಲ್ಲೂ ಗ್ರಾಮೀಣ ಭಾಗದಲ್ಲಿ ಕಾಂಗ್ರೆಸ್ ನ ಸಾಂಪ್ರದಾಯಿಕ ಮತಗಳು ಹುರುಪುಪಡೆದುಕೊಂಡಿದೆ. ಕಾರಣ ಎಸ್ ಬಂಗಾರಪ್ಪನವರು ಶಿವಮೊಗ್ಗ ಲೋಕಸಭಾ ಕ್ಷೇತ್ರವನ್ನ ಸೋತಾಗಿನಿಂದಲೂ ಅದರ ಅಭ್ಯರ್ಥಿಗಳೇ ಇಲ್ಲದಂತಾಗಿತ್ತು. 15 ವರ್ಷಗಳ ನಂತರ ಕಾಂಗ್ರೆಸ್ ನ ಸಾಂಪ್ರದಾಯಿಕ ಮತಗಳು ಲಭ್ಯವಾಗಿದೆ. ಈ ಹಿನ್ನಲೆಯಲ್ಲಿ ಸಾಂಪ್ರದಾಯಿಕ ಮತದೃವೀಕಣಾಗಲಿದೆಯಾ? ಎಂಬ ಪ್ರಶ್ನೆ ಹೆಚ್ಚಾಗಿ ಉದ್ಭವಿಸಿದೆ.

2009 ರಲ್ಲಿ ಎಸ್ ಬಂಗಾರಪ್ಪನವರು ಸೋತ ನಂತರ ಬಿಜೆಪಿ ಶಿವಮೊಗ್ಗ ಲೊಕಸಭಾ ಕ್ಷೇತ್ರದಲ್ಲಿ ಮತ್ತೆ ಕೇಸರಿ ಬಾವುಟ ಹಾರಿಸಿತ್ತು. 2013 ರಲ್ಲಿ ಮಂಜುನಾಥ್ ಭಂಡಾರಿ ಕಾಂಗ್ರೆಸ್ ಪಕ್ಷದಿಂದ ಕಣಕ್ಕಿಳಿದಿದ್ದರೂ ಕೆಲವರು ಅವರನ್ನ ಪಕ್ಷದ ಅಭ್ಯರ್ಥಿಯೆಂದೇ ಸ್ವೀಕರಿಸಿರಲಿಲ್ಲ. ಈ ವೇಳೆ ಐದು ಲಕ್ಷಕ್ಕೂ ಅಧಿಕ ಮತಗಳನ್ನ ಪಡೆದು ಎರಡನೇ ಸ್ಥಾನದಲ್ಲಿ ಪಕ್ಷವನ್ನ ಕೊಂಡೊಯ್ದಿದ್ದರು. ಆದರೆ ಬಿಜೆಪಿಯ ಮಾಜಿ ಸಿಎಂ ಯಡಿಯೂರಪ್ಪ ಮೂರು ಲಕ್ಷ ಅಂತರದಲ್ಲಿ ಗೆದ್ದು ಬೀಗಿದ್ದರು.

ಈ ವೇಳೆ ಜೆಡಿಎಸ್ ಅಭ್ಯರ್ಥಿ ಗೀತ ಶಿವರಾಜ್ ಕುಮಾರ್ ಮೂರನೇ ಸ್ಥಾನಪಡೆದಿದ್ದರು. 2018 ರ ಲೋಕಸಭಾ ಉಪಚುನಾವಣೆ, 2019 ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ನ ಬೆಂಬಲಿತ ಅಭ್ಯರ್ಥಿ ಜೆಡಿಎಸ್ ನ ಮಧು ಬಂಗಾರಪ್ಪ ಎರಡು ಬಾರಿ ಸ್ಪರ್ಧಿಸಿದ್ದರಿಂದ ಕಾಂಗ್ರೆಸ್ ನ ಸಾಂಪ್ರದಾಯಿಕ ಮತಗಳು ಚದುರಿಹೋಗಿತ್ತು.

ಈ ಬಾರಿ ಹಳಬರಿಗೆ ಚೇತನ್ಯ ಮೂಡಿದೆ. ಈಡಿಗ ಮತಗಳನ್ನ ಕಾಂಗ್ರೆಸ್ ಭದ್ರ ಮಾಡಿಕೊಳ್ಳುವತ್ತ ಹೊರಟಿದೆ. ಪಕ್ಷದಿಂದ ಗೀತ ಶಿವರಾಜ್ ಕುಮಾರ್ ಕಣಕ್ಕಿಳಿದಿದ್ದರಿಂದ ಪಕ್ಷದ ಸಾಂಪ್ರದಾಯಿಕ ಮತಗಳು ಮತ್ತೆ ಗಟ್ಟಿಗೊಂಡಿದೆ. ಹೊಸನಗರ, ಸಾಗರ, ಸೊರಬದಲ್ಲಿ ಜಾತಿ ಮತಗಳನ್ನ‌ ಗಟ್ಟಿಪಡಿಸಿಕೊಳ್ಳಲು ಕಾಂಗ್ರೆಸ್ ಹೆಚ್ಚಿನ ಗಮನ ಹರಿಸುತ್ತಿರುವಂತೆ ಕಂಡು ಬರುತ್ತಿದೆ.

ಒಂದು ವೇಳೆ ಮತ ದೃವೀಕರಣಗೊಂಡರೆ ಕಾಂಗ್ರೆಸ್ ಮತ್ತೆ ಗೆಲುವಿನ ನಾಗಲೋಟದಲ್ಲಿ ಸಾಗಲಿದೆ. ಆದರೆ ತೀರ್ಥಹಳ್ಳಿ ಮತ್ತು ಬೈಂದೂರಿನ ಜಾತಿ ಮತಗಳು ಎತ್ತ ಸಾಗುತ್ತಿದೆ ಎಂಬುದು ನಿರ್ಯವಾಗಬೇಕಿದೆ. ಈಡಿಗರ ಜೊತೆ ಒಕ್ಕಲಿಗರ ಮತಗಳನ್ನ ಕಾಂಗ್ರೆಸ್ ಸೆಳೆಯುತ್ತಿದೆ. ಒಕ್ಕಲಿಗರು ಹೇಗೆ ನಿಲ್ತಾರೆ ಎಂಬುದು ಕಾದು‌ನೋಡಬೇಕಿದೆ.

ಬಿಜೆಪಿಗೆ ಶಿವಮೊಗ್ಗ ಭದ್ರಕೋಟೆ ಎನಿಸಿರುವುದು ಮಾಜಿ ಸಿಎಂ ಯಡಿಯೂರಪ್ಪನವರು ಇರುವುದರಿಂದ ಎಂಬುದನ್ನೂ ಸಹ ಮರೆಯುವಹಾಗಿಲ್ಲ. ಕಾಂಗ್ರೆಸ್ ಭದ್ರಕೋಟೆಯಲ್ಲಿ ಬಿಎಸ್ ವೈ ಪಕ್ಷವನ್ನ ಕೈಹಿಡಿದು ನಡೆಸಿದ್ದಾರೆ. ಹಾಗಾಗಿ ಶಿವಮೊಗ್ಗ ಬಿಜೆಪಿ ಭದ್ರಕೋಟೆ ಎಂದು ಹೇಳುವುದು ಕಷ್ಟವಿದೆ.

ಕಾಂಗ್ರೆಸ್ ಶಿವಮೊಗ್ಗ ನಗರದಲ್ಲಿ ಕೊಂಚ ತಿಣಕಾಡುತ್ತಿದೆ. ಬಹಿರಂಗ ಪ್ರಚಾರಕ್ಕೆ ಐದು ದಿನಗಳು‌ಮಾತ್ರ ಬಾಕಿ ಇದೆ. ಕಾಂಗ್ರೆಸ್ ಕೆಲ ವಾರ್ಡ್ ಗಳಿಗೆ ಮತಕೇಳಿಕೊಂಡು ಬಂದಿಲ್ಲ. ವಾರ್ಡ್ ಇನ್ಚಾರ್ಜ್ ಗಳೇ ಬಿಸಿಲಿನ ತಾಪಮಾನಕ್ಕೆ ಮನೆಯಿಂದ ಹೊರಗೆ ಬರುತ್ತಿಲ್ಲವೆಂಬ ಆರೋಪವೂ ಇದೆ. ಶಿಕಾರಿಪುರದಲ್ಲಿ ಕಾಂಗ್ರೆಸ್ ಸಾಂಪ್ರದಾಯಿಕ ಮತಗಳು ವಿಧಾನ ಸಭೆ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಗೆ ಹೋಗಿತ್ತು. ಈ ಬಾರಿ ಕ್ರೂಢೀಕರಣಗೊಳ್ಳಲಿದೆ.

ಚಲನಚಿತ್ರ ಮಂದಿ ಬಂದು ಕಾಂಗ್ರೆಸ್ ಪರ ಮತಯಾಚಿಸಿದ್ದಾರೆ. ಹೋದಕಡೆಯಲ್ಲ ಜನ ಸೇರ್ತಾ ಇದ್ದಾರೆ. ಈ ಜನರ ಮತಗಳು ಕಾಂಗ್ರೆಸ್ ಬೀಳುವಂತೆ ಮಾಡುವಲ್ಲಿ ಯಶಸ್ವಿಯಾಗಬೇಕಿದೆ.‌ ಈ ಹಿನ್ನೆಲೆಯಲ್ಲಿ ನಟ ದುನಿಯಾ ವಿಜಯ್ ಕಳೆದ ಮೂರು ದಿನಗಳಿಂದ ಮೊಕ್ಕಂ ಹೂಡಿದ್ದಾರೆ.

ಅದರಂತೆ ಬಿಜೆಪಿಯಾಗಲಿ, ಮಾಜಿ ಡಿಸಿಎಂ ಈಶ್ವರಪ್ಪನವರು ಸಹ ಪ್ರಚಾರದಲ್ಲಿ ಹಿಂದೆ ಬಿದ್ದಿಲ್ಲ. ಪ್ರಚಾರಗಳು ಮೂರು ಪಕ್ಷಗಳು ಭರ್ಜರಿ ನಡೆಸಿದ್ದಾರೆ. ಈಶ್ವರಪ್ಪನವರಿಗೂ ಸಾರ್ವಜನಿಕ ಸಭೆಗಳಲ್ಲಿ ಜನ ಸೇರ್ತಾ ಇದ್ದಾರೆ. ಈಗ ಕಾಂಗ್ರೆಸ್ ಮತ್ತು ಬಿಜೆಪಿ ಸಮಬಲವಾಗಿ ಪ್ರಚಾರಕ್ಕೆ ಧುಮಿಕಿದೆ ಎನ್ನಲಾಗಿದೆ. ಕೊನೆಯ ಒಂದರೆಡು ದಿನಗಳಲ್ಲಿ ನಡೆಯುವ ಕರಾಮತ್ತು ಚುನಾವಣೆಯ ದಿಕ್ಕನ್ನ ಬದಲಿಸಲಿದೆ ಎಂಬ ಮಾತಿದೆ. ಕಾದು ನೋಡಬೇಕಿದೆ.

ವೈರಲ್ ಆಗುತ್ತಿರುವ ರಿಲ್ಯಾಕ್ಸ್ ಫೋಟೊಗಳು

ಸಮುದ್ರದ ದಂಡೆಯ ಮೇಲೆ ಕುಳಿತು ಕಾಂಗ್ರೆಸ್ ಅಭ್ಯರ್ಥಿ ಗೀತ ಮತ್ತು ನಟ ಶಿವಣ್ಣನವರು ವಿಶ್ರಾಂತಿ ಪಡೆಯುತ್ತಿರುವ ಫೋಟೊಗಳು ವೈರಲ್ ಆಗುತ್ತಿದೆ. ಎದುರಾಳಿಗರೇ ಈ ಫೊಟೊಗಳನ್ನ ವೈರಲ್ ಮಾಡುತ್ತಿದ್ದಾರೆ ಎಂದು ಹೇಳಿದರೂ, ಯದ್ಧದ ವೇಳೆ ವಿಶ್ರಾಂತಿ ಸರಿಯಲ್ಲ. ಕಾರ್ಯಕರ್ತರ ಸಭೆ, ಹಿರಿಯರ ಸಭೆಯಲ್ಲಿ ಎಂಗೇಜ್ ಆಗಬೇಕಿದೆ. ಶಿವಮೊಗ್ಗ ನಗರದಲ್ಲಿ ಪ್ರಚಾರಗಳು ಸರಿಯಾಗುತ್ತಿಲ್ಲ. ಈ ಬಗ್ಗೆನೂ ಗಮನ ಹರಿಸಬೇಕಿದೆ.

ಇದನ್ನೂ ಓದಿ-https://suddilive.in/archives/13972

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket