ಮಾನವೀಯತೆ ಮೆರೆದ ಹಿಂದೂ ಹುಲಿ-ಪರಿಹಾರ ನೀಡದಿದ್ದರೆ ಹಣ ಸಂಗ್ರಹದ ಬಗ್ಗೆ ಮಾಜಿ ಡಿಸಿಎಂ ಹೇಳಿದ್ದೇನು?

ಸುದ್ದಿಲೈವ್/ಶಿವಮೊಗ್ಗ

ವಾಲ್ಮೀಕಿ ಅಭಿವೃದ್ಧಿ ಮಂಡಳಿಯಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ ಡೆತ್ ನೋಟ್ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದ ಚಂದ್ರಶೇಖರ್ ಅವರ ಮನೆಗೆ ಇಂದು ಹಿಂದೂ ಹುಲಿ ಈಶ್ವರಪ್ಪ ಭೇಟಿ ನೀಡಿ ಸಾಂತ್ವಾನ ಹೇಳಿದ್ದಾರೆ.

ಚುನಾವಣೆ ನೀತಿ ಸಂಹಿತೆ ಹಿನ್ನಲೆಯಲ್ಲಿ ಸಾಂತ್ವಾನಬಹೇಳಲು ಬಙದ ನಾಯಕರು ಕುಟುಂಬದ ಸಮಸ್ಯೆ ಕೇಳಿ ವಾಪಾಸ್ ಆಗಿದ್ದರು. ಆರ್ಥಿಕ ಮುಗ್ಗಟ್ಟು ಇದೆ. ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದೇನೆ ಮಕ್ಕಳ ವಿದ್ಯಾಭ್ಯಾಸ ಕಷ್ಟ ಎಂದಿದ್ದರು.

ಆದರೆ ಬಿಜೆಪಿ ರಾಜ್ಯಾಧ್ಯಕ್ಷ ವಿಜೇಂದ್ರ, ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಸಚಿವ ಮಧು ಬಂಗಾರಪ್ಪ, ಗೃಹಸಚಿವ ಡಾ.ಪರಮೇಶ್ವರ್, ಭೋವಿ ಅಭಿವೃದ್ಧಿ ನಿಗಮ ಭೇಟಿ ನೀಡಿ ಅವರು ಚುನಾವಣ ನೀತಿ ಸಂಹಿತೆಯಲ್ಲಿ ವಾಪಾಸ್ ಆಗಿದ್ದಾರೆ.

ಆದರೆ ಹಿಂದೂ ಹುಲಿ ಈಶ್ವರಪ್ಪ ಸಂಕಷ್ಟಕ್ಕೆ ಸ್ಪಂಧಿಸಿದ್ದಾರೆ. ನಂತರ ಮಾಧ್ಯಮಗಳಿಗೆ ಮಾತನಾಡಿದ ಅವರು, ಪ್ರಾಮಾಣಿಕ ಅಧಿಕಾರಿ ಸಾವನ್ನಪ್ಪಿದ್ದಾರೆ. ಕುಟುಂಬಸ್ಥರು ನನ್ನ ಬಳಿ ಖಾಸಗಿಯಾಗಿ ಮಾತನಾಡಿದಾಗ ಕರಳು ಕಿವುಚಿ ಬಂದಿದೆ. ಚಂದ್ರಶೇಖರ್ ಹೆಂಡತಿ ಒಡವೆಯನ್ನ‌ಒತ್ತೆ ಇಟ್ಟು 20 ಲಕ್ಷ ಸಾಲ ಮಾಡಿದ್ದಾರೆ. ಮನೆಯಲ್ಲಿ ಅರ್ಧ ಕೆಜಿ ಅಕ್ಕಿ ಸಹ ಇಲ್ಲ ಎಂದರು.

ಅಧಿಕಾರಿಗಳು ಐಷಾರಾಮಿ ಜೀವನ ನಡೆಸುವುದನ್ನ ನೋಡಿದ್ದೇವೆ. ಆದರೆ ಪ್ರಮಾಣಿಕ ಅಧಿಕಾರಿ ಚಂದ್ರಶೇಖರ್ ತಾನು ಸತ್ತರು ಪರವಾಗಿಲ್ಲ ಸತ್ಯ ನ್ಯಾಯ ನಿಷ್ಠೆ ಗೆಲ್ಲಬೇಕು ಎಂದು ನಂಬಿ ಕೆಲಸ ಮಾಡಿಕೊಂಡು ಬಂದಿದ್ದಾರೆ. ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಙದು ಆಗ್ರಹಿಸಿದರು.

ಸರ್ಕಾರ ದೂರು ಕೊಟ್ಟವರ ಗೌಪ್ಯತೆ ಕಾಪಾಡಬೆಕು.‌ಇಲ್ಲವಾದಲ್ಲಿ ಅಧಿಕಾರಿಗಳನ್ನ ಕಳೆದುಕೊಳ್ಳಬೇಕಾಗುತ್ತದೆ. ಅಧಿಕಾರಿಗಳು ಯಾರೂ ಆತ್ಮಹತ್ಯೆ ಮಾಡಿಕೊಳ್ಳಬಾರದು.‌ ಅವರ ಮನೆ ಸ್ಥಿತಿ ನನಗೆ ಗೊತ್ತಿತ್ತು. ಹಾಗಾಗಿ 3 ಲಕ್ಷ ರೂ. ನೀಡಿದ್ದೇನೆ. ಸರ್ಕಾರ ಚುಬಾವಣೆ ನೀತಿ ಸಂಹಿತೆ ಮುಗಿದ ಮೇಲೆ 50 ಲಕ್ಷ ರೂ. ಕೊಡಬೇಕು.‌ಇಲ್ಲವಾದಲ್ಲಿ ಸಾರ್ವಜನಿಕರಿಂದ ಚಂದ ಎತ್ತಿ ಹಣಕೊಡಿಸುವೆ ಎಂದು ಹಿಂದೂ ಹುಲಿ ಗುಡುಗಿದ್ದಾರೆ.

ಡಾ.ಪರಂ ಹೇಳಿಕೆ ಒಪ್ಪಲ್ಲ

ಗೃಹ ಸಚಿವ ಡಾ.ಪರಮೇಶ್ವರ್ ನನ್ನ ಪ್ರಕರಣ ಮತ್ತು ಚಂದ್ರಶೇಖರ್ ಪ್ರಕರಣ ಬೇರೆ ಎಂದಿದ್ದಾರೆ. ಆದರೆ ಚಂದ್ರಶೇಖರ್ ಡೆತ್ ನೋಟ್ ನಲ್ಲಿ ಸಚಿವರ ಮೌಕಿಖ ಅದೇಶ ಎಂದು ಉಲ್ಲೇಖಿಸಿದ್ದಾರೆ. ಈ ವಿಷಯದಲ್ಲಿ ಬಿಜೆಪಿ ನಾಯಕರನ್ನ‌ನೆಚ್ಚುತ್ತೇನೆ. ಸಚಿವರು ಎಂದರೆ ಬೇರೆ ಇಲಾಖೆ ಸಚಿವರು ಆದೇಶ ನೋಡಲು ಬರುತ್ತಾ ಎಂದು ಪ್ರಶ್ನಿಸಿದರು. ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡ ಬೆನ್ನಲ್ಲೇ ಬಿಜೆಪಿ ಹೈಕಮಾಂಡ್ ರಾಜೀನಾಮೆ ಕೊಡಲು ಸೂಚಿಸಿದರು.

ಲೂಟಿಗೆ ಗ್ರೀನ್ ಸಿಗ್ನಲ್

ರಾಜೀನಾಮೆ ನೀಡಲು ಕಾಂಗ್ರೆಸ್ ಪ್ರತಿಭಟನೆ ನಡೆಸಿತ್ತು. ಇದು ಕಾಂಗ್ರೆಸ್ ನ ಹಣೆಬರಹ. ಸಚಿವರು ನೇರವಾಗಿ ಭ್ರಷ್ಠಾಚಾರದಲ್ಲಿ ಸಿಕ್ಕಿ ಬಿದ್ದು ಯಾರೋ ಮೂಲಕ ಬಜಾವಾಗಲು ತನಿಖೆ ನಡೆಸಲಾಗುತ್ತಿದೆ. ಕಾಂಗ್ರೆಸ್ ಎಲ್ಲಾ‌ಮಂತ್ರಿಗಳು ಇದನ್ನೇ ಶುರು ಹಚ್ಚಿಕೊಳ್ಳುತ್ತಾರೆ. ಇದು ಮುಂದುವರೆದರೆ ಸರ್ಕಾರ ಲೂಟಿಗೆ ಗ್ರೀನ್ ಸಿಗ್ನಲ್ ನೀಡಿದಂತಾಗುತ್ತದೆ ಎಂದು ಹೇಳಿದರು.‌

ಪ್ರಮಾಣಿಕ ಅಧಿಕಾರಿಗಳು ನಿಮ್ಮ ಬಳಿ ಹೇಳದೆ ಡೆತ್ ನೋಟ್ ಬರೆದೇ ಸಾಯಿಯ ಬೇಕಾ ಎಂದು ಗುಡುಗಿದರು. ಸಿಎಂ ಸಿದ್ದರಾಮಯ್ಯ ಸಂಬಂಧ ಪಟ್ಟ ಮಂತ್ರಿಗಳ ರಾಜೀನಾಮೆ ಪಡೆಯಬೇಕು. ಇಲ್ಲವೆಂದರೆ ರಾಷ್ಟ್ರಭಕ್ತರ ಬಳಗ ಹೋರಾಟ ನಡೆಸಲಾಗುತ್ತದೆ. ಪ್ರಕರಣವನ್ನ ಸಿಬಿಐಗೆ ನೀಡಿ ಎಂದು ಎಚ್ಚರಿಸಿದರು.

ಶೋಗೆ ಬಂದು ಹೋದ್ರಾ ಡಾ.ಪರಂ

ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಬ್ರಷ್ಠಾಚಾರದ ಹಣ ಬೇರೆ ರಾಜ್ಯದ ಚುನಾವಣೆಗೆ ಬಳಕೆಯಾಗಿದೆ ಎಂದು ಬಿಜೆಪಿ ಆಗ್ರಹಿಸಿದೆ. ಇದನ್ನ ಸಿಬಿಐಗೆ ಕೊಡಿ ಎಂದಿದೆ. ಆದರೆ ಗೃಹಸಚಿವ ಡಾ.ಪರಮೇಶ್ವರ್ ಸಿಬಿಐ ಮೇಲೆ ನಮಗೆ ವಿಶ್ವಾಸವಿಲ್ಲ ಹಾಗಾಗಿ ಕೊಡಲ್ಲ ಎಂದಿದ್ದಾರೆ. ಹಾಗಾದರೆ ಶೋ ಮಾಡಲು ಬಂದಿದ್ರಾ ಎಂದು ಈಶ್ವರಪ್ಪ ಗುಡುಗಿದರು.

ಇದನ್ನೂ ಓದಿ-https://suddilive.in/archives/15868

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket