ಬಟ್ಟೆ ಅಂಗಡಿಯ ಒಳಗೆ ನುಗ್ಗಿದ ಕಾರು-ರಸ್ತೆ ಅಪಘಾತದಲ್ಲಿ ಯುವಕ ಸಾವು

ಸುದ್ದಿಲೈವ್/ತೀರ್ಥಹಳ್ಳಿ/ಶಿವಮೊಗ್ಗ

ಎರಡು ಪ್ರತ್ಯೇಕ ರಸ್ತೆ ಅಪಘಾತ ಪ್ರಕರಣದಲ್ಲಿ ಕಾರೊಂದು ಬಟ್ಟೆ ಅಂಗಡಿಗೆ ನುಗ್ಗಿದರೆ, ಮತ್ತೊಂದು ಪ್ರಕರಣದಲ್ಲಿ ಯುವಕನೋರ್ವ ಹೊಳೆಹೊನ್ನೂರು ರಸ್ತೆಯಲ್ಲಿ ಗೂಡ್ಸ್ ವಾಹನಕ್ಕೆ ಬೈಕ್ ನಲ್ಲಿ ಹೋಗುವಾಗ ಸಾವನ್ನಪ್ಪಿದ್ದಾನೆ.

ಕಾರೊಂದು ಏಕಾಏಕಿ ಬಟ್ಟೆಅಂಗಡಿ ಒಳಗೆ ನುಗ್ಗಿ ಸಂಪೂರ್ಣ ಪುಡಿಯಾದ ಘಟನೆ ತೀರ್ಥಹಳ್ಳಿ ಪಟ್ಟಣದ ಗಾಂಧಿ ಚೌಕದಲ್ಲಿ ಮಂಗಳವಾರ ತಡ ರಾತ್ರಿ ಸಂಭವಿಸಿದೆ.

ಕರ್ನಾಟಕ ಬ್ಯಾಂಕ್ ಕಟ್ಟಡದ ಗಜಾನನ ಟೆಕ್ಸ್
ಟೈಲ್ಸ್ ಅಂಗಡಿಯ ಕೆಳಗೆ ಕಾರು ಬಿದ್ದಿದ್ದು, ಒಂದು ಸ್ಕೂಟಿ ಕೂಡ ಪುಡಿ ಪುಡಿಯಾಗಿದೆ. ಅದೃಷ್ಟವಶಾತ್ ಯಾರಾದರೂ ಇದ್ದಿದ್ದರೆ ದೊಡ್ಡ ದುರಂತ ನಡೆಯುತ್ತಿತ್ತು. ಆಗುಂಬೆ ರಸ್ತೆಯಿಂದ ಛತ್ರಕೇರಿ ಕಡೆಗೆ ತಿರುಗಿಸುವ ವೇಳೆ ವ್ಯಾಗನರ್‌ ಸಂಪೂರ್ಣ ಪುಡಿ ಪುಡಿಯಾಗಿದೆ. ಚಾಲಕನ ನಿರ್ಲಕ್ಷ್ಯ ಘಟನೆಗೆಕಾರಣ ಎಂದು ಸ್ಥಳೀಯರು ತಿಳಿಸಿದ್ದಾರೆ.

ಶಿವಮೊಗ್ಗದಲ್ಲಿ ನಡೆದ ಘಟನೆ

407 ಆಟೋ  ಮತ್ತು  ಬೈಕ್ ಡಿಕ್ಕಿ ನಡುವೆ ಡಿಕ್ಕಿ ಉಂಟಾಗಿದ್ದು, ಅಪಘಾತದಲ್ಲಿ ಕೃಷ್ಣ (34) ಅಪಘಾತದಲ್ಲಿ ಸಾವು ಕಂಡ ದುರ್ದೈವಿಯಾಗಿದ್ದಾನೆ. ಅಪಘಾತದ ರಭಸಕ್ಕೆ ಕೃಷ್ಣರ ತಲೆಯಿಂದ ಮೆದುಳು ಹೊರಬಂದಿದೆ.

ಹೆಲ್ಮೆಟ್ ಧರಿಸದೇ ಬೈಕ್ ಚಾಲನೆ ಮಾಡುತ್ತಿದ್ದ ಕೃಷ್ಣ, ಬೀರನಹಳ್ಳಿ ಗ್ರಾಮದ ವ್ಯಕ್ತಿಯಾಗಿದ್ದಾನೆ. ಘಟನೆ ಶಿವಮೊಗ್ಗದ ಪುರ್ಲೆ ಕೆರೆ ಬಳಿ ನಡೆದಿದೆ. ಶಿವಮೊಗ್ಗದಿಂದ ಹೊಳೆಹೊನ್ನೂರು ಕಡೆಗೆ ಬೈಕ್ ನಲ್ಲಿ ಪಯಣಿಸುತ್ತಿದ್ದ ಕೃಷ್ಣನಿಗೆ ಹೊಳೆಹೊನ್ನೂರು ಕಡೆಯಿಂದ ಶಿವಮೊಗ್ಗದೆಡೆಗೆ ಬರುತ್ತಿದ್ದ 407 ವಾಹನಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ಕೃಷ್ಣ ಸಾವುಕಂಡಿದ್ದಾನೆ.

ಇದನ್ನೂ ಓದಿ-https://suddilive.in/archives/14458

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close