ಗೋಮಾಂಸ ಮಾರಾಟದ ಮೇಲೆ ದಾಳಿ

ಸುದ್ದಿಲೈವ್/ಶಿವಮೊಗ್ಗ

ಇಲಿಯಾಜ್ ನಗರದಲ್ಲಿ ದನಗಳನ್ನ ಖರೀದಿಸಿ ಮಾಂಸಕ್ಕೆ ಮಾರಾಟ ಮಾಡುತ್ತಿದ್ದ ಅಡ್ಡ ಮೇಲೆ ನಿನ್ನೆ ದೊಡ್ಡಪೇಟೆ ಪೊಲೀಸರು ದಾಳಿ ನಡೆಸಿದ್ದಾರೆ. ದಾಳಿಯಲ್ಲಿ ಇಬ್ಬರನ್ನ ಬಂಧಿಸಲಾಗಿದೆ. 60 ಕೆಜಿ ದನದ ಮಾಂಸ,ಮಾರಾಟಕ್ಕೆ ಬೇಕಾದ ಉಪಕರಣಗಳನ್ನ ವಶಕ್ಕೆ ಪಡೆಯಲಾಗಿದೆ.

ಇಲಿಯಾಜ್ ನಗರದ ಖಾಜಿ ನಗರದಲ್ಲಿ ಅಪ್ಸರ್ ಶರೀಫ್ ರವರ ಬಾಡಿಗೆ ಮನೆಯಲ್ಲಿ ಇಬ್ವರು ವ್ಯಕ್ತಿಗಳು ದನಗಳನ್ನ ಖರೀದಿಸಿ ಅದರ ಮಾಂಸಗಳನ್ನ ಮಾರಾಟ ಮಾಡುತ್ತಿದ್ದರು ಎಂಬ ಖಚಿತ ಮಾಹಿತಿಯ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ.

ದಾಳಿಯಲ್ಲಿ ಅಪ್ಸರ್ ಶರೀಫ್, ಮೊಹಮದ್ ಫರಾಜ್ ರನ್ನ‌ಬಂಧಿಸಲಾಗಿದೆ. ದನದ ಮಾಂಸವನ್ನ ವಶಕ್ಕೆ ಪಡೆಯಲಾಗಿದೆ. ಮಾಂಸ ಮಾಡಲು ಬೇಕಾದ ಮಚ್ಚು, ಹುಕ್ಕು, ವಶಕ್ಕೆ ಪಡೆಯಲಾಗಿದೆ. ಅಪ್ಸರ್ ಶರೀಪ್ ಹಳ್ಳಿಗಳ ಮೇಲೆ ತೆರಳಿ ದನಗಳನ್ನ ಹಿಡಿದುಕೊಂಡು ಬರುತ್ತಿದ್ದಾನೆ ಎಂದು ತಿಳಿದುಬಂದಿದೆ.

ದನದ ಮಾಂಸ ಮಾರುತ್ತಿದ್ದನೋ ಅಥವಾ ಎಮ್ಮೆ ಮಾಂಸ ಮಾರಾಟ ಮಾಡುತ್ತಿದ್ದನೋ ಎಂಬುದರ ಬಗ್ಗೆ ಪಶುವೈದ್ಯರ ವರದಿ ಕೇಳಲಾಗಿದ್ದು ಪಶುವೈದ್ಯರು ಇದು ದನದ ಮಾಂಸ ಎಂದು ವರದಿ ನೀಡಿದ ಮೇರೆಗೆ ಮುಂದಿನ ಕ್ರಮ ಜರುಗಿಸಲಾಗಿದೆ.

ಇದನ್ನೂ ಓದಿ-https://suddilive.in/archives/15040

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close