Girl in a jacket

ಸೊರಬದಲ್ಲಿ ಕೈಕೊಟ್ಟ ಮತ ಯಂತ್ರ : ಮತದಾರರು ಬೇಸರ

ಸುದ್ದಿಲೈವ್/ಸೊರಬ

ಪಟ್ಟಣದ ಚಿಕ್ಕಪೇಟೆಯ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ (ಪೂರ್ವ ಭಾಗ) ಮತಗಟ್ಟೆ ಸಂಖ್ಯೆ 159 ರಲ್ಲಿ ಸುಮಾರು ಒಂದು ತಾಸು ಮತದಾನ ಪ್ರಕ್ರಿಯೆ ಸ್ಥಗಿತಗೊಂಡಿದ್ದು, ಮತದಾರರು ಬೇಸರ ವ್ಯಕ್ತಪಡಿಸಿದ್ದಾರೆ.

ಡಾ. ಬಿ.ಆರ್. ಅಂಬೇಡ್ಕರ್ ಬಡಾವಣೆ, ಹಳೇ ಪೋಸ್ಟ್ ಆಫೀಸ್ ರಸ್ತೆ, ಎ.ಕೆ. ಕಾಲೋನಿ ಸೇರಿದಂತೆ ಒಟ್ಟು 938 ಮತದಾರರಿದ್ದಾರೆ. ಮಹಿಳಾ ಮತದಾರರು 495 ಇದ್ದು, ಸಖಿ ಮತಗಟ್ಟೆಯನ್ನಾಗಿಸಲಾಗಿದೆ. ಬೆಳಗ್ಗೆಯಿಂದ ಮಂದ ಗತಿಯಲ್ಲಿ ಆರಂಭವಾದ ಮತದಾನ ಪ್ರಕ್ರಿಯೆ 8.30 ರ ಸುಮಾರಿಗೆ ಮತಯಂತ್ರದಲ್ಲಿ ದೋಷ ಕಂಡು ಬಂದಿತು. ಇದರಿಂದ ಕೆಲ ಕಾಲ ಮತದಾರರಲ್ಲಿ ಗೊಂದಲ ಮೂಡಿತು. ಇದಾಗಲೇ 30 ಜನ ಮತದಾನ ಮಾಡಿದ್ದರು.

ಸ್ಥಳಕ್ಕೆ ಆಗಮಿಸಿದ ಚುನಾವಣಾ ಅಧಿಕಾರಿಗಳು ಹೊಸ ಮತಯಂತ್ರವನ್ನು ಅಳವಡಿಸಿದರು. ನಂತರ ಸುಮಾರು 40 ನಿಮಿಷಗಳ ತರುವಾಯ ಮತದಾನ ಪ್ರಕ್ರಿಯೆ ಆರಂಭಗೊಂಡಿತು ಎಂದು ತಿಳಿದು ಬಂದಿದೆ.

ಇದನ್ನೂ ಓದಿ-https://suddilive.in/archives/14359

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು