ಸುದ್ದಿಲೈವ್/ಶಿವಮೊಗ್ಗ
ಸಕ್ರೇಬೈಲಿನ ಬಳಿ ಮೊನ್ನೆ ಭಾನುವಾರ ಕಾರೊಂದು ಪಲ್ಟಿ ಹೊಡೆದ ಪರಿಣಾಮ ಯುವಕನೋರ್ವ ಸಾವನ್ನಪ್ಪಿರುವ ಘಟನೆ ಈಗ ಎಫ್ಐಆರ್ ದಾಖಲಾಗಿದೆ.
ಮಂಡಗದ್ದೆಯಲ್ಲಿರುವ ಸ್ನೇಹಿತನ ತೋಟದಲ್ಲಿ ಊಟಕ್ಕೆ ಶಿವಮೊಗ್ಗದಿಂದ ಎರಡು ಕಾರಿನಲ್ಲಿ ತೆರಳಿದ್ದಾರೆ. ಒಂದು ಕಾರಿನಲ್ಲಿ ಹರ್ಷಿತ್ ಅಂಕಿತ್, ಪ್ರಜ್ವಲ್, ವರದ ಹಾಗೂ ರಾಹುಲ್ ಹೊರಟರೆ, ಇನ್ನೊಂದು ಕಾರಿನಲ್ಲಿ ಅಮೃತೇಶ, ವರುಣ, ಹಾಗೂ ಗಣೇಶ್ ತೆರಳಿದ್ದಾರೆ.
ಮಂಡಗದ್ದೆಯ ತೋಟದಲ್ಲಿ ಊಟಕ್ಕೆ ಸಂಜೆ 4 ಗಂಟೆಗೆ ತಲುಪಿ ಸಂಜೆ ಸುಮಾರು 7 ಗಂಟೆಯ ಹಾಗೆ ಬಿಟ್ಟಿದ್ದಾರೆ. 7-30 ರಿಂದ 7-35 ರ ಸಮಯದಲ್ಲಿ ಸಕ್ರೆಬೈಲಿನ ಹುಲಿಹಳ್ಳದ ಬಳಿ ಅಮೃತೇಶ್ ಅವರ ಕಾರನ್ನ ಹಿಂದು ಹಾಕಿದ ಪ್ರಜ್ವಲ್ ಕಾರು ಎದುರಿನಿಂದ ಬಂದ ಲಾರಿಯನ್ನ ತಪ್ಪಿಸಲು ಯತ್ನಿಸಿ ಬ್ರೇಕ್ ಹಿಡಿದ ಪರಿಣಾಮ ಕಾರು ಮಗಚಿಕೊಂಡಿದೆ.
ರಾಹುಲ್ ಕೆಎ-14-ಪಿ-9299 ಬ್ರೀಜಾ ಕಾರನ್ನ ಚಲಾಯಿಸುತ್ತಿದ್ದು ಕಾರು ಪಲ್ಟಿ ಹೊಡೆದ ಪರಿಣಾಮ ಹರ್ಷಿತ್ ಗೆ ಎಡಗಣ್ಣಿನ ಹುಬ್ಬಿಗೆ ಹೊಡೆತ ಬಿದ್ದಿದೆ. ಅಂಕಿತ್ಗೆ ಎಡ ಬುಜಕ್ಕೆ ಪೆಟ್ಟಾಗಿದೆ. ಮುಂಭಾಗದಲ್ಲಿ ಕುಳಿತಿದ್ದ ಪ್ರಜ್ವಲ್ ಗೆ ರಕ್ತಸ್ರಾವವಾಗಿ ಮಾತನಾಡುತ್ತಿರಲಿಲ್ಲ.
ಅಮೃತೇಶ್, ಗಣೇಶ್ ಮತ್ತು ವರುಣ್ ಇವರು ಸ್ಥಳೀಯರ ಸಹಾಯದಿಂದ ಗಾಯಗೊಂಡವರನ್ನ ವಾಹನದಲ್ಲಿ ಹಾಕಿಕೊಂಡು ಖಾಸಗಿ ಆಸ್ಪತ್ರೆಗೆ ಕರೆತಂದಿದ್ದಾರೆ. ಪ್ರಜ್ವಲ್ ರನ್ನ ತಪಾಸಣೆ ನಡೆಸಿದ ವೈದ್ಯರು ಆತನ ಸಾವನ್ನ ಖಚಿತ ಪಡಿಸಿದ್ದಾರೆ.
ಅಪಘಾತದಲ್ಲಿ ಹರ್ಷಿತ್, ರಾಹುಲ್, ಅಂಕಿತ ಮತ್ತು ವರದನಿಗೆ ರಕ್ತಗಾಯವಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬ್ರೀಜಾಕಾರಿನ ಮುಂಭಾಗ ನುಜ್ಜುಗುಜ್ಜಾಗಿದೆ. ತುಂಗನಗರ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ-https://suddilive.in/archives/15258