ಸುದ್ದಿಲೈವ್/ಶಿವಮೊಗ್ಗ
ವಾಲ್ಮೀಕಿ ಅಭಿವೃದ್ಧಿ ನಿಗಮದ ಅಕೌಂಟೆಂಟ್ ಆಗಿದ್ದ ಚಂದ್ರಶೇಖರ್, ನಿಗಮದಲ್ಲಿ ಆಗಿರುವ ಅವ್ಯವಹಾರದ ಬಗ್ಗೆ ಡೆತ್ ನೋಟ್ ಬರೆದು ಆತ್ಮಹತ್ಯೆಗೆ ಶರಣಾದ ಬೆನ್ನಲ್ಲೇ ಬಿಜೆಪಿ ಸೋಷಿಯಲ್ ಮೀಡಿಯಾದಲ್ಲಿ ಸರ್ಕಾರದ ವಿರುದ್ಧ ಮುಗಿಬಿದ್ದಿದೆ.
ಚಂದ್ರಶೇಖರ್ ಅವರ ಆತ್ಮಹತ್ಯೆ ಇಡೀ ಸರ್ಕಾರದ ಅವ್ಯವಸ್ಥೆಯ ವಿರುದ್ಧ ಬೆರಳು ಮಾಡುವಂತೆ ಮಾಡಿದೆ. ಈ ಹಿಂದೆ 40% ಕಮಿಷನ್ ಆರೋಪ ಹೊತ್ತಿದ್ದ ಬಿಜೆಪಿಯ ಪರಿಸ್ಥಿತಿಯನ್ನ ಕಾಂಗ್ರೆಸ್ ಸರ್ಕಾರ ಎದುರಿಸುವಂತೆ ಮಾಡಿದೆ.
ಈ ಎಲ್ಲಾ ಬೆಳವಣಿಗೆಯ ಮಧ್ಯೆ ಪ್ರಕರಣ ಸಿಐಡಿಗೆ ವಹಿಸಲಾಗಿದೆ ಸಿಐಡಿ ಡಿವೈಎಸ್ಪಿ ಮೊಹಮ್ಮದ್ ರಫಿ ನೇತೃತ್ವದ ತಂಡ ಶಿವಮೊಗ್ಗದಲ್ಲಿರುವ ಮೃತನಮನೆಗೆ ಭೇಟಿ ನೀಡಿ ಅಗತ್ಯ ದಾಖಲಾತಿಗಳನ್ನ ವಶಕ್ಕೆ ಪಡೆದಿದೆ.
ಈ ಮಧ್ಯೆ ಬಿಜೆಪಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟರ್ ವೊಂದನ್ನ ವೈರಲ್ ಮಾಡಿದೆ. ಕಮಿಷನ್ ಸಂದಾಯವಾಗದಿದ್ದಾಗ ಕುಣಿಕೆ ಗ್ಯಾರೆಂಟಿ ಎಂಬ ಪೋಸ್ಟರ್ ವೊಂದು ಬಿಡುಗಡೆ ಮಾಡಿದೆ. ಅಧಿಕಾರಿಗಳಿಗಾಗಿ ಆತ್ಮಹತ್ಯೆ ಭಾಗ್ಯವೆಂದು ಸಹ ಸಬ್ ಟೈಟಲ್ ನೀಡಲಾಗಿದೆ. ಇದು ಸೋಷಿಯಲ್ ಮೀಡಿಯಾದಲ್ಲಿ ಬಾರಿ ಸೌಂಡ್ ಮಾಡುತ್ತಿದೆ.
ಇದನ್ನೂ ಓದಿ-https://suddilive.in/archives/15680