ಡಾ.ಸರ್ಜಿ ಅವರ ಮತಯಾಚನೆ ಹೇಗೆ ನಡೆಯುತ್ತಿದೆ, ಇವತ್ತು ಏನೆಲ್ಲಾ‌ನಡೆಯಿತು?

ಸುದ್ದಿಲೈವ್/ಶಿವಮೊಗ್ಗ

ನೈರುತ್ಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಧನಂಜಯ ಸರ್ಜಿ ಅವರ ಮತಬೇಟೆ ಬಿರುಸಿನಿಂದ ಸಾಗಿದೆ. ಒಂದು ಕ್ಷೇತ್ರದಲ್ಲಿ ಎರಡು ಮೂರು ಸಭೆ ನಂತರ ಮತದಾರ ಭೇಟಿ ಮೂಲಕ ಸಂಚಲನ ಮೂಡಿಸುತ್ತಿದ್ದಾರೆ.

ಮತ್ತೂರಿನಲ್ಲಿ ಮತದಾಋ ಸಭೆ ನಡೆಸಿ  ಮತಯಾಚನೆ ನಡೆಸಿದ ಡಾ.ಸರ್ಜಿ, ಮಂಗಳೂರಿನ ಪ್ರತಿಷ್ಠಿತ ವೈದ್ಯಕೀಯ ಸಂಸ್ಥೆ ಗಳಾದ ಎ ಜೆ  ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ,  ಫಾದರ್  ಮುಲ್ಲರ್  ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ,

ಕೆ ಎಸ್ ಹೆಗ್ಡೆ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ,  ಯೆನೆಪೋಯ  ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ, ವೆನ್ ಲಾಕ್  ಆಸ್ಪತ್ರೆ ಗಳಿಗೆ ಭೇಟಿ ನೀಡಿ ಮತ ನೀಡುವಂತೆ ಮನವಿ ಮಾಡಿದ್ದಾರೆ.

ಶಿವಮೊಗ್ಗದಲ್ಲಿ ಜವಹಾರ್ ಲಾಲ್ ಇಂಜಿನಿಯರ್ ಕಾಲೇಜು ಹಾಗೂ   ಅಕ್ಷರ ಸ್ಕೂಲ್ ಮತ್ತು ಕಾಲೇಜಿಗೆ ಅಭ್ಯರ್ಥಿ ಡಾ.ಧನಂಜಯ ಸರ್ಜಿ ಭೇಟಿ ನೀಡಿ, ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕರು, ಆಡಳಿತ ವರ್ಗ  ಮತ್ತು ಸಿಬ್ಬಂದಿಗಳಲ್ಲಿ ಮತ ಯಾಚಿಸಿದರು.

ಅದರಂತೆ ದಕ್ಷಿಣ ಕನ್ನಡದಲ್ಲಿ ಮತದಾರರ ಸಂಪರ್ಕ ಅಭಿಯಾನವು ನಡೆದಿದ್ದು,  ಜಿಲ್ಲೆಯ ಎಲ್ಲಾ ಮಂಡಲಗಳಲ್ಲಿ ನಡೆದಿದೆ.‌ ಅದರಂತೆ ಇಂದು ಶಿವಮೊಗ್ಗದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಡಾ.ಸರ್ಜಿ ಅಭಿಮಾನಿ ಬಳಗದಿಂದ ಗೆಲುವಿಗಾಗಿ ವಿಶೇಷ ಪೂಜೆ ನಡೆಸಲಾಗಿದೆ.‌ ಈ ರೀತಿ ಡಾ.ಸರ್ಜಿ ಅವರ ಮತಯಾಚನೆ, ಗೆಲಯವಿಗಾಗಿ ದೇವರಲ್ಲಿ ವಿಶೇಷ ಪೂಜೆಗಳು ಮುಂದುವರೆದಿದೆ.

ಇದನ್ನೂ ಓದಿ-https://suddilive.in/archives/15903

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close