ಸುದ್ದಿಲೈವ್/ಶಿವಮೊಗ್ಗ
ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಎಲ್ಲಾ ತಯಾರಿ ನಡೆದಿದೆ. ಸಂಘಟನಾತ್ಮಕವಾಗಿ ಉತ್ತಮವಾಗಿದೆ. ಪದವಿಧರ ಕ್ಷೇತ್ರವನ್ನು ನಿರಂತರವಾಗಿ ಗೆದ್ದುಕೊಂಡು ಬರಲಾಗಿದೆ.ಶಿಕ್ಷಕರ ಕ್ಷೇತ್ರದಲ್ಲಿ ನಾಲ್ಕು ಬಾರಿ ಗೆಲ್ಲಲಾಗಿದೆ. ಹೀಗಾಗಿ ಈ ಬಾರಿಯೂ ಗೆಲುವಿನ ವಿಶ್ವಾಸವಿದೆ ಎಂದು ಎಸ್. ದತ್ತಾತ್ರಿ ಹೇಳಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಹೊಂದಾಣಿಕೆಯಿಂದಾಗಿ ಜೆಡಿಎಸ್ ಗೆ ಈ ಬಾರಿಬಿಟ್ಟು ಕೊಡಲಾಗಿದೆ. ಪದವೀಧರ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿ ಧನಂಜಯ ಸರ್ಜಿ ಸ್ಪರ್ಧಿಸಿದ್ದಾರೆ ಎಂದರು.
ಬಿಜೆಪಿ ವತಿಯಿಂದ ಕ್ಷೇತ್ರದ ಸಂಚಾಲಕರನ್ನಾಗಿ ಕಾರ್ಕಳದ ಸುನೀಲ್ ಕುಮಾರ್ ಹಾಗೂ ಸಹ ಸಂಚಾಲಕರನ್ನು ಡಿ.ಎಸ್. ಅರುಣ್ ಅವರನ್ನು ಘೋಷಣೆ ಮಾಡಲಾಗಿದೆ. ತಾಲೂಕು ಮಟ್ಟದಲ್ಲಿಯೂ ನೇಮಕ ಮಾಡಲಾಗಿದೆ ಎಂದರು.
ಪ್ರತೀ ೨೦ ಮತದಾರರಿಗೆ ಒಬ್ಬ ಘಟ ನಾಯಕನನ್ನು ನೇಮಕ ಮಾಡಲಾಗಿದೆ.
ಘಟನಾಯಕರು ಮನೆ ಮನೆಗಳಿಗೆ ಭೇಟಿ ನೀಡಲಿದ್ದಾರೆ. ಬಳಿಕ ಫೋನ್ ಸಂಪರ್ಕ ಮಾಡಲಿದ್ದಾರೆ. ನಂತರ ಮತದಾರರನ್ನು ಮತಗಟ್ಟೆಗೆ ಕರೆ ತರುವ ಹೊಣೆ ಅವರದ್ದಾಗಿದೆ ಎಂದರು.
ನಮ್ಮ ಎಂಎಲ್ ಎ ಇಲ್ಲದ ಕಡೆಗಳಲ್ಲಿಮಾಜಿ ಎಂಎಲ್ ಎಗಳು ಕೆಲಸ ಮಾಡುತ್ತಿದ್ದಾರೆ.
ಅಭ್ಯರ್ಥಿ ಧನಂಜಯ ಸರ್ಜಿ ಈಗಾಗಲೇ ಒಂದು ಬಾರಿ ಕ್ಷೇತ್ರದಲ್ಲಿ ಸಂಚಾರ ಮಾಡಿದ್ದಾರೆ. ರಾಜ್ಯಾಧ್ಯಕ್ಷ ವಿಜೇಂದ್ರ ಕೂಡ ಬರಲಿದ್ದಾರೆ. ಮಾಜಿ ಸಿಎಂ ಯಡಿಯೂರಪ್ಪ ನವರು ಸಭೆ ನಡೆಸಲಿದ್ದಾರೆ. ಎಬಿವಿಪಿ ಕೂಡ ಕೆಲಸ ಮಾಡುತ್ತಿದೆ ಎಂದರು.
ಈ ಬಾರಿ ಧನಂಜಯ ಸರ್ಜಿ ೧೫ ಸಾವಿರ ಮತಗಳನ್ನುಪಡೆದು ಗೆಲ್ಲಲಿದ್ದಾರೆ. ಭೋಜೇ ಗೌಡರು ಕೂಡ ಶಿಕ್ಷಕರ ಕ್ಷೇತ್ರದಲ್ಲಿ ಒಳ್ಳೆಯ ಹೆಸರಿದೆ. ಅವರೂ ಕೂಡ ಹೆಚ್ಚಿನ ಅಂತರದಿಂದ ಗೆಲ್ಲಲಿದೆ.
ಭಟ್ಟರು ನಿವೃತ್ತಿಯಾಗಲಿ
ರಘುಪತಿ ಭಟ್ಟರಿಗೆ ಪಕ್ಷ ಎಲ್ಲವನ್ನು ಕೊಟ್ಟಿದೆ. ಮೂರು ಬಾರಿ ಶಾಸಕರನ್ನಾಗಿ ಮಾಡಿದೆ. ಜಿಲ್ಲಾಧ್ಯಕ್ಷರಾಗಿದ್ದರು.ಹೀಗಾಗಿ ಈ ಬಾರಿ ರಘುಪತಿ ಭಟ್ಟರು ನಿವೃತ್ತಿಯಾಗಬೇಕು ಎಂದು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಬಿ.ಆರ್. ಮಧುಸೂದನ್, ರತ್ನಾಕರ ಶೆಣೈ, ಹೃಷಿಕೇಶ ಪೈ, ಸುಧೀಂದ್ರ ಕಟ್ಟೆ, ತಲಕಾಕೊಪ್ಪ ಪ್ರಕಾಶ್, ಪದ್ಮಿನಿರಾವ್, ಪ್ರಕಾಶ್ ಪಂಡಿತ್, ಸುಬ್ರಹ್ಮಣ್ಯ, ಕೆ.ವಿ. ಕೃಷ್ಣಮೂರ್ತಿ, ರಾಘವೇಂದ್ರಾಚಾರ್ ಇದ್ದರು.
ಇದನ್ನೂ ಓದಿ-https://suddilive.in/archives/15411