Girl in a jacket

ಮನೆಗಳ್ಳರ ಬಂಧನ

ಸುದ್ದಿಲೈವ್/ಶಿವಮೊಗ್ಗ

ಮನೆಗಳ್ಳತನದ ಆರೋಪದ ಮೇರೆಗೆ ಶಿವಮೊಗ್ಗದ ಹಸೂಡಿ ಫಾರಂನ ನಿವಾಸಿ ಬಸಣ್ಣ ಯಾನೆ ಶರಫೀಯ ಎಂಬುವನನ್ನ ಬಂಧಿಸಿ 4.85 ಲಕ್ಷ ರೂರೂ ಮೌಲ್ಯದ ಚಿನ್ನಾಭರಣವನ್ನ ವಶಕ್ಕೆ ಪಡೆಯಲಾಗಿದೆ.

ದಿನಾಂಕ:-16-02-2024 ರಂದು ಆನವಟ್ಟಿ ಗ್ರಾಮದ  ಸದಾಶಿವಗೌಡ, (64), ರವರ ವಾಸದ ಮನೆಯ ಬೀಗವನ್ನು ಮುರಿದು ಮನೆಯಲ್ಲಿದ್ದ ಬಂಗಾರದ ಒಡವೆಗಳನ್ನು ಹಾಗೂ ನಗದು ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು ಈ ಕುರಿತು ಆನವಟ್ಟಿ ಪೊಲೀಸ್ ಠಾಣೆಲ್ಲಿ ದೂರು ದಾಖಲಾಗಿತ್ತು.

ಪ್ರಕರಣದ ಆರೋಪಿತರ ಮತ್ತು ಕಳುವಾದ ಮಾಲು ಪತ್ತೆಗಾಗಿ  ಮಿಥುನ್ ಕುಮಾರ್ ಜಿ. ಕೆ. ಐಪಿಎಸ್, ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ, ಅನಿಲ್ ಕುಮಾರ್ ಭೂಮರಡ್ಡಿ, ಹೆಚ್ಚುವರಿ ಪೊಲೀಸ್ ಅಧಿಕ್ಷಕರು-1, ಶಿವಮೊಗ್ಗ ಜಿಲ್ಲೆ ಮತ್ತು ಕಾರಿಯಪ್ಪ, ಎ ಜಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು-2, ಶಿವಮೊಗ್ಗ ಜಿಲ್ಲೆರವರ ಮಾರ್ಗಗದರ್ಶನದಲ್ಲಿ

ಕೇಶವ್, ಪೊಲೀಸ್ ಉಪಾಧೀಕ್ಷಕರು, ಶಿಕಾರಿಪುರ ಉಪ ವಿಭಾಗ ಮತ್ತು ರಮೇಶ್ ರಾವ್, ಸಿಪಿಐ ಸೊರಬ ವೃತ್ತ ರವರ ಮೇಲ್ವಿಚಾರಣೆಯಲ್ಲಿ, ಶಿವಾನಂದ ವೈ ಕೆ ಪಿಎಸ್ಐ ಮತ್ತು ವಿಟ್ಟಲ್ ಎಂ ಅಗಾಸಿ ಪಿಎಸ್ಐ ಆನವಟ್ಟಿ ಪೊಲೀಸ್ ಠಾಣೆ ರವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ಹೆಚ್.ಸಿ ಕಲಂದರ್,
ಗಿರೀಶ್, ಪಿಸಿ ಜಗದೀಶ್, ಮಂಜುನಾಥ್,ಮಲ್ಲೇಶ್,ಹರಿಪ್ರಸಾದ್,ಚಿಕ್ಕಪ್ಪ ಕಡಕೋಳ, ಹನುಮಂತ ಹಾಗೂ ಬೆರಳಚ್ಚು ವಿಭಾಗ ಶಿವಮೊಗ್ಗದ ಅಧಿಕಾರಿಗಳಾದ ಕೆಂಚಪ್ಪ ಬಿ, ಪಿಐ, ರಮೇಶ್ ನಾಯ್ಕಾ, ಎ.ಎಸ್.ಐ, ಮಹಾದೇವಮ್ಮ ಎ.ಎಸ್.ಐ, ಮಲ್ಲಿಕಾರ್ಜುನ ಸ್ವಾಮಿ ಹೆಚ್.ಸಿ, ತ್ಯಾಗರಾಜ್, ಪಿ ಸಿ, ಮತ್ತು ಕಿರಣ್ ಪಿ.ಸಿ ರವರನ್ನು ಒಳಗೊಂಡ ತನಿಖಾ ತಂಡವನ್ನು ರಚಿಸಲಾಗಿರುತ್ತದೆ.

ತನಿಖಾ ತಂಡವು ಈ ದಿನ ದಿನಾಂಕ 18-05-2024 ರಂದು ಪ್ರಕರಣದ ಕಳುವು ಆರೋಪಿ ಶಿವಮೊಗ್ಗ ಹಸೂಡಿ ಗ್ರಾಮದ ಹಕ್ಕಿಪಿಕ್ಕಿ ಕ್ಯಾಂಪ್ ನ ನಿವಾಸಿ ಬಸಣ್ಣ @ ಶರಫೀಯ, (26), ಈತನನ್ನು ದಸ್ತಗಿರಿ ಮಾಡಲಾಗಿದೆ. ಅಂದಾಜು ಮೌಲ್ಯ 4,85,000/- ರೂಗಳ ಒಟ್ಟು 87 ಗ್ರಾಂ ತೂಕದ ಬಂಗಾರದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.

ಸದರಿ ತನಿಖಾ ತಂಡದ ಈ ಉತ್ತಮವಾದ ಕಾರ್ಯವನ್ನು ಮಾನ್ಯ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆರವರು ಪ್ರಶಂಸಿ ಅಭಿನಂದನೆ ಸಲ್ಲಿಸಿರುತ್ತಾರೆ.

ಇದನ್ನೂ ಓದಿ-https://suddilive.in/archives/14992

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
close