ಜೆಡಿಎಸ್ ನಲ್ಲಿದ್ದ ಇಕ್ಕಟ್ಟಿನ ಸ್ಥಿತಿ ಕಾಂಗ್ರೆಸ್ ನಲ್ಲಿ ಇಲ್ಲ-ಚೆಲುವರಾಯ ಸ್ವಾಮಿ

ಸುದ್ದಿಲೈವ್/ಶಿವಮೊಗ್ಗ

ಮಲೆನಾಡು ಮತ್ತು‌ ಮಂಡ್ಯ ಒಕ್ಕಲಿಗರ ನಡುವೆ ವ್ಯತ್ಯಾಸವಿದೆ.‌ ಮಂಡ್ಯ ಒಕ್ಕಲಿಗರು ಮತ್ತು‌ಮಲೆನಾಡ ಒಕಗಕಲಿಗರು ಬೇರೆ ಎಂಬ ಮನೋಭಾವಿದೆ. ಅದು ಸುಧಾರಣೆ ಆಗಬೇಕು ಎಂದು ಕೃಷಿ ಸಚಿವ ಚೆಲುರಾಯ ಸ್ವಾಮಿ ತಿಳಿಸಿದರು.

ಅವರು ಒಕ್ಜಲಿಗ ಸನುದಾಯ ಭವನದಲ್ಲಿ ವಿಶ್ವಮಾನವ ವೇದಿಕೆಯಿಂದ ಸ್ನೇಹ ಮಿಲನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಗೋಪಾಲಗೌಡರು, ಕುವೆಂಪುರವನ್ನ ಇಡೀ ಜಗತ್ತು ಒಪ್ಪಿದೆ. ಮೊದಲು ನಾವೆಲ್ಲಾ ಜೆಡಿಎಸ್ ನಲ್ಲಿದ್ದೆವು. ನಂತರ ಕಾಂಗ್ರೆಸ್ ನವರು ದೇವೇಗೌಡರನ್ನ‌ಪ್ರಧಾನಿ ಮಾಡಿತು‌. ಜೆಡಿಎಸ್ ಮತ್ತು ಕಾಂಗ್ರೆಸ್ ನವರ ಅಧಿಕಾರದಲ್ಲಿದ್ದಾಗ ನಾವೇ ಕಿತಾಪತಿ ಮಾಡಿ ಬಿಜೆಪಿ ಜೊತೆ ಕೈಜೋಡಿಸಿದೆವು. ನಂತರ 14 ತಿಂಗಳು ಸರ್ಕಾರ ನಡೆದು ಬಿದ್ದು ಹೋಯಿತು. ಬಿಜೆಪಿ ಅಧಿಕಾರಕ್ಕೆ ಬಂತು ಎಂದರು.

ಮೋದಿಯವರು 10 ವರ್ಷದಲ್ಲಿ ಮಾತು ಎತ್ತಿದರೆ ರಾಮ, ಹಿಂದುತ್ವ ಎನ್ನುತ್ತಾರೆ. ಆದರೆ ರಾಜ್ಯದಲ್ಲಿ ಬರ ಬಂದಿದೆ. ಹಣಕೊಡಲು ಹಿಂದೇಟು ಹಾಕುತ್ತಾರೆ. ನ್ಯಾಯಾಲಯದ ಮೂಲಕ ಪರಿಹಾರ ಪಡೆಯುವ ಸ್ಥಿತಿ ನಿರ್ಮಾಣವಾಗಿದೆ ಎಂದರು.

ಇಡೀ ರಾಷ್ಟ್ರದ ರಕ್ಷಣೆ ಮಾಡಬೇಕಿದೆ. ನಾನು ಕಾಂಗ್ರೆಸ್ ಗೆ ಬಂದ ನಂತರ ಜೆಡಿಎಸ್ ಗಿಂತ ಹೆಚ್ಚು ಸ್ವಾತಂತ್ರ್ಯವಿದೆ. ನಾವು ಬೆಳೆಯಲು ಕಾಂಗ್ರೆಸ್ ಇಕ್ಕಟ್ಟು ಮಾಡಿಕೊಟ್ಟಿಲ್ಲ. ಜೆಡಿಎಸ್ ನಲ್ಲಿದ್ದ ಸಿದ್ದರಾಮಯ್ಯನವರು ಮುಖ್ಯಮಙತ್ರಿ ಆಗಲು ಸಾಧ್ಯವಾಗಿಲ್ಲ ಆದರೆ ಕಾಂಗ್ರೆಸ್ ಗೆ ಬಂದು ಎರಡನೇ ಬಾರಿ ಸಿಎಂ ಆಗಿದ್ದಾರೆ. ಕೆಂಪೇಗೌಡ ಜಯಂತಿ ಏರ್ ಪೋರ್ಟ್, ಅಭಿವೃದ್ಧಿ ಪ್ರಾಧಿಕಾರ ಮಾಡಿದ್ದು ಕಾಂಗ್ರೆಸ್ ಪಕ್ಷ ಎಂದರು.

ಆದಿ ಚುಂಚನಗಿರಿ ಮಠಕ್ಕೆ ಸಹಕಾರ ನೀಡಿರುವುದು ಕಾಂಗ್ರೆಸ್ ಪಕ್ಷ, ಮಠಕ್ಕೆ, ಗೌರವ ಕೊಟ್ಟಿರುವುದು ನಮ್ಮ ಪಕ್ಷವೇ ಆಗಿದೆ. ಸಿದ್ದರಾಮಯ್ಯ ಮತ್ತು ಡಿಜೆಶಿ ಒಂದೇ ನಾಣ್ಯದ ಎರಡು ಮುಖವಾಗಿದ್ದಾರೆ. ಇಬ್ವರ ನಡುವೆ ಭಿನ್ನಾಭಿಪ್ರಾಯವಿಲ್ಲ. ಡಿಕೆಶಿ ಕಾಂಗ್ರೆಸ್ ನಲ್ಲಿ ಪವರ್ ಫುಲ್ ಸಚಿವರಾಗಿದ್ದಾರೆ ಎಂದರು.

ಒಕ್ಕಲಿಗರಿಗೆ ಭವಿಷ್ಯವಿದ್ದರೆ ಕಾಂಗ್ರೆಸ್ ಪಕ್ಷದಲಗಲಿಯೇ, ಬಿಜೆಪಿ ಮಾಜಿ ಸಚಿವ ಅಶ್ವಥ್ ಅವರನ್ನ ಮತ್ತು ಆರ್ ಅಶೋಕ್ ರನ್ನ ಮುಂದೆ ತರಲು ಯತ್ನಿಸಿ ವಿಫಲವಾಯಿತು‌ ಬಿಜೆಪಿಯಲ್ಲಿ ಅವರು ಒಕ್ಕಲಿಗ ನಾಯಕರಾಗಿ ಬ ಎಳೆಯಲು ಸಾಧ್ಯವಾಗಿಲ್ಲ. ಜನತಾದಳವನ್ನ ಕಾಂಗ್ರಸ್ ಹಿಂದೆ ತುಳಿದಿದ್ದಾರೆ ಎಂಬುದು ಸುಳ್ಳು. ಡಿಕೆಶಿಗೆ ಎಲ್ಲರೂ ಬೆಂಬಲಿಸಬೇಕು. ಮಲೆನಾಡಿನ ಒಕ್ಕಲಿಗರ ಸಮಸ್ಯೆಯನ್ನ ಚರ್ಚೆ ಮಾಡಿ ಬಗೆಹರಿಸೋಣ ಎಂದರು.

ಮಂಡ್ಯ ಶಾಸಕ ರವಿಗಾಣಿಗ ಮಾತನಾಡಿ, ಒಕ್ಕಲಿಗರಿಗೆ ಒಂದೇ ದಾರಿ ಕಾಂಗ್ರೆಸ್ ಒಕ್ಕಲಿಗರು ಒಙದಾಗಬೇಕು ಜೆಡಿಎಸ್ ನ್ನ ಬಿಜೆಪಿ ಅಬಾರ್ಷನ್ ಮಾಡಿದ್ದಾರೆ. ಬಿಎಸ್ ವೈ ಗೆ ನಮ್ಮಪಕ್ಷದ ಶಿವಶಂಕರಪ್ಪನವರು ಬೆಂಬಲಿಸಿದ್ದಾರೆ ಎಂದರು.‌

ಇದನ್ನೂ ಓದಿ-https://suddilive.in/archives/14252

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close