ಸಿದ್ದರಾಮಯ್ಯನವರ ಸರ್ಕಾರ ಅಲ್ಪಾವಧಿ ಸರ್ಕಾರ

ಸುದ್ದಿಲೈವ್/ಶಿವಮೊಗ್ಗ

ಸಾಂತ್ವಾನ ಹೇಳಲು ಬಂದ ವಿಪಕ್ಷ‌ನಾಯಕ ಆರ್ ಆಸೋಕ್ ರಾಜ್ಯ ಸರ್ಕಾರವನ್ನ ಎಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಚಂದ್ರಶೇಖರ್ ಸಾವು ನಿಷ್ಠಾವಂತ ಅಧಿಕಾರಿಗಳಿಗೆ ಭಯ ಹುಟ್ಟಿಸಿ ಬಲಿ ಪಡೆದಿದೆ. ಸಿದ್ದರಾಮಯ್ಯ ಸರ್ಕಾರ ಬಂದಾಗಲೆಲ್ಲ ಅಧಿಕಾರಿಗಳು ಭಯ ಭೀತಿಗೆ ಒಳಗಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಸಿದ್ದರಾಮಯ್ಯನವರ ಕಳೆದ ಸರ್ಕಾರವಿದ್ದಾಗ ಡಿವೈಎಸ್ಪಿ ಅನುಪಮ ಶೆಣೈ ರೋಸತ್ತು ರಾಜೀನಾಮೆ ನೀಡಿದರು. ಕಲ್ಬುರ್ಗಿಯಲ್ಲಿ ಮಲ್ಲಿಕಾರ್ಜುನ ಬಂಡೆ, ಡಿ.ಕೆ ರವಿ ಸಾವು ಸಿದ್ದರಾಮಯ್ಯ ಸರ್ಕಾರದಲ್ಲಿ ನಡೆದಿದ್ದು.‌ಭಾಗ್ಯ ಭಾಗ್ಯ ಎನ್ನುವ ಸರ್ಕಾರ ಅಧಿಕಾರಿಗಳ ಜೀವನ ಭಾಗ್ಯವನ್ನೂ ಕಿತ್ತುಕೊಂಡಿದೆ ಎಂದು ಆರೋಪಿಸಿದರು.

ವಾಲ್ಮೀಕಿ ನಿಗಮಕ್ಕೂ ಐಟಿ ಕಂಪನಿಗೂ ಏನು ಸಂಬಂಧ, ಪರಿಶಿಷ್ಟ ಜಾತಿ ಅಭಿವೃದ್ಧಿಗಾಗಿ ಹಣ ವಿನಿಯೋಗಿಸುವ ನಿಗಮ ಐಟಿ ಕಂಪನಿಗೆ ಹಣನ್ನ ಹೇಗೆ ವರ್ಗಾಯಿಸಲಿದೆ. ಹಣಕಾಸು ಸಚಿವರಾಗಿ ಸಿದ್ದರಾಮಯ್ಯನವರೇ ಇದ್ದರೂ ಹಣಕಾಸು ಸಚಿವಾಲಯದ ಅನುಮತಿಯಿಲ್ಲದೆ ಹೇಗೆ ವರ್ಗಾವಣೆ ಆಗಿದೆ ಎಂದು ಪ್ರಶ್ನಿಸಿದರು.

ಚಂದ್ರಶೇಖರ್ ಅವರಿಗೆ ನ್ಯಾ.ನಾಗಮೋಹನ್ ದಾಸ್ ಬೆಸ್ಟ್ ಅವಾರ್ಡ್ ನೀಡಿದ್ದಾರೆ. ಕೋವಿಡ್ ಇದ್ದಾಗ‌ಒಂದು ತಿಂಗಳವರೆಗೆ ಐಸಿಯುವಿನಲ್ಲಿದ್ದ ಚಂದ್ರಶೇಖರ್ ಬದುಕುಳಿದಿದ್ದೇ ಹೆಚ್ಚು. ಭ್ರಷ್ಠಚಾರಿ ಅಧಿಕಾರಿ ಆಗಿದ್ದರೆ ಅವರು ಮಾಡಿರುವ 20 ಲಕ್ಷ ಸಾಲವನ್ನ ತೀರಿಸಿಕೊಳ್ಳುತ್ತಿದ್ದರು ಎಂದು ಹೇಳಿದರು.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷ ಕಳೆದಿದೆ. ಒಂದು ವರ್ಷದ ಸಾಧನೆಯಲ್ಲಿ ಸಚಿವ ನಾಗೇಂದ್ರ ಅವರ ಮೊದಲ‌ ವಿಕೆಟ್ ಪಥನವಾಗಲಿದೆ. ದಕ್ಷ ಅಧಿಕಾರಿಗಳ ಬಲಿ ಪಡೆದ ಸರ್ಕಾರದ ಮೊದಲ ವಿಕೆಟ್ ಪಥನವಾಗಲಿದೆ. ಮೃತ ಅಧಿಜಾರಿ ಕುಟುಂಬಕ್ಕೆ ಗೃಹ ಸಚಿವರು ಪೊಳ್ಳು ಭರವಸೆ ನೀಡಿದ್ದಾರೆ. ಡಿಸಿ ಇನ್ನೂ ಸಂತ್ರಸ್ತರ ಮನೆಗೆ ಬಂದಿಲ್ಲ.‌ ಹಾಗಾಗಿ ಸರ್ಕಾರದ ಭರವಸೆಯ ಬಗ್ಗೆ ಅನುಮಾನವಿದೆ ಎಂದಿದ್ದಾರೆ.

ಸರ್ಕಾರದ ಸಿಎಂ ಮತ್ತು ಡಿಸಿಎಂ ಇಬ್ಬರೂ ತರಾತುರಿಯಲ್ಲಿ ಸಭೆ ನಡೆಸುತ್ತಿದ್ದಾರೆ. ಸಿಬಿಐಗೆ ಪ್ರಕರಣ ಹೋಗುತ್ತಿದೆ ಎಂದು ಸಭೆ ನಡೆಸಲಾಗುತ್ತಿದೆ. ಒಬ್ಬ ಸಚಿವ ಸಿಎಂ ಡಿಸಿಎಂ ಅನುಮತಿ ಇಲ್ಲದೆ ಅವ್ಯವಹಾರ ನಡೆಸಲು ಹೇಗೆ ಸಾಧ್ಯ? ಸಿಎಂ ಮತ್ತು ಡಿಸಿಎಂ ಪಾಲು ಇದೆ. ಎಂದರು.

ಸಿಐಡಿ ತನಿಖೆ‌ ಎಂಬುದೆ ದೊಂಬರಾಟ. ನೊಂದ ಕುಟುಂಬಸ್ಥರ ಅನುಮತಿ ಪಡೆದು ತನಿಖೆಯನ್ನ ಸಿಐಡಿಗೆ ಕೊಡಬೇಕಿತ್ತು. ಆದರೆ ಸರ್ಕಾರ ತರಾತುರಿಯಲ್ಲಿ ಸಿಐಡಿಗೆ ಹಸ್ತಾಂತರಿಸಿದ್ದು ಹೇಗೆ? ಅವ್ಯವಹಾರ ನಡೆದರೂ ಒಬ್ಬನ ಬಂಧನವಾಗಿಲ್ಲ. ಆದರೆ ಪ್ರಜ್ವಲ್ ರೇವಣ್ಣನವರ ಪ್ರಕರಣವನ್ನ ಉಲ್ಲೇಖಿಸದೆ ಬೇರೆಪ್ರಕರಣದಲ್ಲಿ ಸರ್ಕಾರಕ್ಕೆ ಇರುವ ಆಸಕ್ತಿ ಇಲ್ಲಿ ಯಾಕೆ ಇಲ್ಲ ಎಂದು ಕಠೋರವಾಗಿ ಪ್ರಶ್ನಿಸಿದರು.‌

ಪರಮೇಶ್ವರ್ ಅಸಾಹಕ ಗೃಹಸಚಿವ, ಆಯಾ ಜಿಲ್ಲೆಯಲ್ಲಿ ಅವರ ಇಲಾಖೆಯನ್ನ‌ ಉಸ್ತುವಾರಿ ಸಚಿವರೆ ನಿರ್ವಾಹಿಸುತ್ತಾರೆ. ನಿಗಮದ ಅವ್ಯವಹಾರದ ತನಿಖೆಯನ್ನ ಸಿಬಿಐಗೆ ಬ್ಯಾಂಕ್ ನೀಡುವ ಮುನ್ನ ಸರ್ಕಾರವೇ ಕೊಟ್ಟರೆ ಸರ್ಕಾರದ ಮಾನ‌ಮರ್ಯಾದೆ ಉಳಿಯುತ್ತದೆ. ಸಿಬಿಐ ಬಗ್ಗೆ ನಂಬಿಕೆ ಇಲ್ಲವೆಂದು ಗೃಹಸಚಿವರು ಹೇಳಿದ್ದಾರೆ. ಆದರೆ ಜಾರ್ಜ್ ಪ್ರಕರಣದಲ್ಲಿ ಸಿಬಿಐನೇ ಕ್ಲೀನ್ ಚೀಟ್ ನೀಡಿದ್ದು. ಸಿಬಿಐ ಮೇಲೆ ಯಾಕೆ ಅಪನಂಬಿಕೆ ನಿಮಗೆ. ಪಕ್ಷಪಾತವಾದ ತನಿಖೆ ಇದರಲ್ಲಿ ನಡೆಯಲಿದೆ ಎಂದರು.

ನಿಗಮದಲ್ಲಿ ಎಸ್ ಟಿ ಗೆ ಇನ್ನು ಮುಂದೆ ಸಾಲ ಸಿಗಲ್ಲ. ಬೇಡ ಜನಾಂಗಕ್ಕೆ ಸಿದ್ದರಾಮಯ್ಯ ಅನ್ಯಾಯ ಮಾಡುತ್ತಿದ್ದಾರೆ. ಇನ್ನುಮುಂದೆ ಸಾಲ ಸಿಗಲ್ಲ ಎಂದು ಸರ್ಕಾರನೇ ಘೋಷಿಸಿರುವುದು ದುರಂತ ಎಂದರು.

ಈಶ್ವರಪ್ಪನವರ ಪ್ರಕರಣ ನಡೆದಾಗ ರಸ್ತೆ ರಸ್ತೆಯಲ್ಲಿ ಹೋರಾಡಿದ ಕಾಂಗ್ರೆಸ್ ನಾಯಕರು‌ ಈಗ ಬಿಲದಲ್ಲಿ ಹೊಕ್ಕಿಕೊಂಡಿದ್ದಾರೆ.ಖಜಾನೆಯಲ್ಲಿ ಹಣವಿಲ್ಲ ಎಂಬುದು ಸ್ಪಷ್ಟವಾಗಿದೆ. ಹೆಣ್ಣುಮಕ್ಕಳಿಗೆ ರಕ್ಷಣೆ ಇಲ್ಲ.‌ಆದರೂ ಸರ್ಕಾರ ಬಿಜೆಪಿ ಸರ್ಕಾರಕ್ಕಿಂತ ಬೆಸ್ಟ್ ಎಂದು ಕಾಂಗ್ರೆಸ್ ಹೇಳ್ತಾ‌ಇದೆ.

186 ಕೋಟಿಯಲ್ಲಿ ಸಿಎಂಗೆ ಎಷ್ಟು ಪಾಲು ಹೋಗಿದೆ ಎಂಬುದು ಕಾದು ನೋಡಬೇಕಿದೆ. ಇದರ ಬಗ್ಗೆ ಸದನದಲ್ಲಿ ಹೋರಾಟ ನಡೆಸಲಾಗುವುದು.‌ಸರ್ಕಾರ ಸದನ ನಡೆಯ ಬಾರದು ಎಂಬ ತಂತ್ರಗಾರಿಕೆ ನಡೆಸುತ್ತಿದೆ ಎಂದು ಅನುಮಾನ‌ ವ್ಯಕ್ತಪಡಿಸಿದರು.

ಡಿಕೆಶಿ ಅವರ ವಿರುದ್ಧವೇ ವಾನಾಚಾರ ನ ಡೆಸಲಾಗುತ್ತಿದೆ ಎನ್ನುತ್ತಿದ್ದಾರೆ. ಅವರ ಬಾಯಿಯಲ್ಲಿ ಹೋಮ ಹವನದ ಬಗ್ಗೆ ಹೇಳಿರುವುದು ಸಿಂಪತಿ ತೆಗೆದುಕೊಳ್ಳಲು ಜೊರಟಿರುವುದು ಸ್ಪಷ್ಟವಾಗಿದೆ. ಪ್ರಜ್ವಲ್ ರೇವಣ್ಣ‌ಬಂಧನ ತಡವಾಗಿದೆ. ಪ್ರಜ್ವಲ್ ಗೆ ಬುದ್ದಿ ಇದ್ದಿದ್ದರೆ ಕಾನೂನಿಗೆ ಶರಣಾಗಬೇಕಿತ್ತು. ತಡವಾದರೂ ಬಂದು ಶರಣಾಗಿದ್ದಾರೆ. ತನಿಖೆಯಾಗಲಿ ಕಾನೂನು‌ ನೋಡಿಕೊಳ್ಳಲಿದೆ ಎಂದರು.

ಸಿದ್ದರಾಮಯ್ಯ ಅಧಿಕಾರಕ್ಕೆ ಬಂದಾಗಲೆಲ್ಲ ನಾಲ್ಕು ಸಂಗತಿಗಳು ಸಂಭವಿಸುತ್ತದೆ.‌ ಒಂದು ಕಾನೂನು ಸುವ್ಯವಸ್ಥೆ ಗೂಂಡಾಗಳಿಗೆ ಗುತ್ತಿಗೆ ಆಗುತ್ತದೆ. ಎರಡು, ಹಿಂದೂಗಳಿಗೆ ರಕ್ಷಣೆ ಇಲ್ಲದಂತಾಗುತ್ತದೆ . ಮೂರು ಬರ ಎಂಬುದು ರಾಜ್ಯಕ್ಕೆ ಕಟ್ಟಿಟ್ಟ ಬುತ್ತಿಯಾಗುತ್ತದೆ. ಅಲ್ಪ ಸಂಖ್ಯಾತರ ಓಲೈಕೆ ಮಾಡಲಾಗುತ್ತಿದೆ. ಸಿದ್ದರಾಮಯ್ಯ ಸರ್ಕಾರ ಅಲ್ಪಾವಧಿ ಸರ್ಕಾರ ಎಂದು ಭವಿಷ್ಯ ನುಡಿದರು.‌

ಇದನ್ನೂ ಓದಿ-https://suddilive.in/archives/15916

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket