ಸುದ್ದಿಲೈವ್/ಶಿವಮೊಗ್
ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧೀಕ್ಷಕ ಚಂದ್ರಶೇಖರ್ ಆತ್ಮಹತ್ಯೆ ಮಾಡಿಕೊಂಡು ಇಂದಿಗೆ ಐದು ದಿನಗಳು ಕಳೆದಿದ್ದು, ಇಂದು ವಿಪಕ್ಷ ನಾಯಕ ಆರ್ ಅಶೋಕ್ ಇಂದು ಮೃತರ ಪತ್ನಿ ಕವಿತರಿಗೆ ಸಾಂತ್ವಾನ ಹೇಳಿದ್ದಾರೆ.
ಪ್ರಕರಣದಲ್ಲಿ ಸಂಬಂಧ ಪಟ್ಟ ಸಚಿವರ ತಲೆದಂಡ ಆಹುವ ವರೆಗೂ ಬಿಜೆಪಿ ಹೋರಾಡಲಿದೆ. ವಿಧಾನ ಸಭೆಯಲ್ಲೂ ಈ ಬಗ್ಗೆ ಧ್ವನಿ ಎತ್ತುತ್ತೇವೆ. ಈಗಾಗಲೇ ಯೂನಿಯನ್ ಬ್ಯಾಂಕ್ ಪ್ರಕರಣವನ್ನ ಸಿಬಿಐಗೆ ಹಸ್ತಾಂತರಿಸಲಿದೆ. ಒಂದು ಕೋಟಿಗೂಅಧಿಕ ಹಣ ಅವ್ಯವಹಾರ ನಡೆದರೆ ಪ್ರಕರಣವನ್ನ ಸಿವಿಐಗೆ ಹಸ್ತಾಂತರಿಸುವಂತೆ ನಿಯಮವಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಹಾಗಾಗಿ ಪ್ರಕರಣ ಸಿಬಿಐಗೆ ಹೋಗಲಿದೆ. ಚಂದ್ರಶೇಖರ್ ಸಾವಿಗೆ ನ್ಯಾಯ ದೊರೆಯಲಿದೆ ಎಂದು ಪತ್ನಿಗೆ ಭರವಸೆ ನೀಡಿದರು. ವಿಧಾನ ಸಭೆಯಲ್ಲೂ ಬಿಜೆಪಿ ಬಿಡಲ್ಲ ಎಂಬ ಭರವಸೆ ನೀಡಿದರು. ಸಿಐಡಿ ಪೆನ್ ಡ್ರೈವ್ ಪಡೆದುಕೊಂಡು ಹೋಗಿದ್ದಾರೆ.
ಆದರೆ ಸಂಬಂಧ ಪಟ್ಟ ಅಧಿಕಾರಿಗಳು ಮತ್ತು ಸಚಿವರನ್ನ ಬಂಧಿಸುವಂತಾಗಬೇಕು. ಈ ವೇಳೆ ಎಂಎಲ್ ಸಿ ಡಿಎಸ್ ಅರುಣ್, ಶಾಸಕ ಚೆನ್ನಬಸಪ್ಪ ಹಾಗೂ ಇತರರು ಅಶೋಕ್ ಗೆ ಸಾಥ್ ನೀಡಿದರು.
ಇದನ್ನೂ ಓದಿ-https://suddilive.in/archives/15908