Girl in a jacket

ಭದ್ರಾವತಿಯ ಪವರ್ ಮ್ಯಾನ್ ಆನಂದ್ ವರ್ಗಾವಣೆ ರಾಜಕೀಯ ಪ್ರೇರಿತನಾ?

ಸುದ್ದಿಲೈವ್/ಭದ್ರಾವತಿ

ಭದ್ರಾವತಿ ಸಹಾಯಕ ಅಭಿಯಂತರರು(ವಿ) ಘಟಕ-1 ರಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪವರ್ ಮ್ಯಾನ್ ವರ್ಗಾವಣೆ ರಾಜಕೀಯ ಪಕ್ಷದ ಪ್ರತಿಭಟನೆಗೆ ಕಾರಣವಾಗಿದೆ.

ಪವರ್ ಮ್ಯಾನ್ ಆನಂದ್ ಅವರನ್ನ ಒಂದೇ ದಿನ ಮೂರು ಭಾರಿ ವರ್ಗಾವಣೆಯಾಗಿರುವುದನ್ನ ಖಂಡಿಸಿ ಇಂದು ಜಾತ್ಯಾತೀತ ಜನತಾದಳದ ಶಾರದಾ ಅಪ್ಪಾಜಿ ಗೌಡರ ನೇತೃತ್ವದಲ್ಲಿ ಪೇಪರ್ ಟೌನ್ ಪೊಲೀಸ್ ಠಣೆ ವ್ಯಾಪ್ತಿಯ ಕಾರ್ಯನಿರ್ವಾಹಕ ಅಭಿಕಮಯಂತರ ಕಚೇರಿಯ ಇಇ ಅಭಿಯಂತರ ಪ್ರಭಾರಿ ಬೀರಪ್ಪರಿಗೆ ಮನವಿ ನೀಡಿದ್ದಾರೆ.

ಆನಂದ್ ಅವರು 2023 ರಲ್ಲಿ ರಜಾದಿನ ರೆಸಾರ್ಟ್ ನಲ್ಲಿ ಊಟ ಮಾಡುವ ದಿನ ಆನಂದ್ ಅವರನ್ನ ಜೂಜಾಟದಲ್ಲಿ ಭಾಗಿಯಾಗಿದ್ದರು ಎಂದು ಆರೋಪಿಸಿ ಸ್ಟೇಷನ್ ಮೆಟ್ಟಿಲು ಏರಿಸಲಾಗಿತ್ತು. ಇದಾದ ನಂತರ ಆನಂದ್ ಅವರನ್ನ ಶಾಸಕರ ಪತ್ರದ ಆಧಾರದ ಮೇಲೆ ಅಮಾನತ್ತುಗೊಳಿಸಲಾಗಿತ್ತು.

ತಡಯಾಜ್ಞೆಯ ನಂತರ ಒಂದೇ ದಿನ ಧರ್ಮಸ್ಥಳದ ಉಜಿರೆ, ಉಜಿರೆಯಿಂದ ಹೊಳೆಹೊನ್ನೂರಿಗೆ ವರ್ಗಾಯಿಸಿ ನಂತರ ಕೆಲಸಕ್ಕೆ ಸೊರಬಕ್ಕೆ ವರ್ಗಾಯಿಸಲಾಗಿತ್ತು. ಈ ಆದೇಶಕ್ಕೆ ನ್ಯಾಯಾಲಯದಿಂದ ಆನಂದ್ ತಡೆಯಾಜ್ಞೆ ತಂದಿದ್ದರು. ಇದಾದ ಎರಡು ತಿಂಗಳ ನಂತರ ಎಫ್ಐಆರ್ ಮಾಡಿಸಿ ಮತ್ತೆ ಅಮಾನತ್ತುಗೊಂಡಿರುತ್ತಾರೆ. ಮೆಸ್ಕಾಂ ಎಂಡಿ ಅವರು ಭದ್ರವತಿಯಲ್ಲಿ ಕೆಲಸ ಮಾಡಲು ಮರು ನಿಯುಕ್ತಿ ಮಾಡಿಕೊಳ್ಳಲು ತಿಳಿಸಿದರು ಸಹ 90 ದಿನದ ನಂತರ ನಿಯುಕ್ತಿಗೊಳಿಸುತ್ತಿರುವುದನ್ನ ಜೆಡಿಎಸ್ ತಾಲೂಕು ಪಕ್ಷ ಆಕ್ಷೇಪಿಸಿದೆ.

90 ದಿನ ಮುಗಿದು ಮತ್ತು 90 ದಿನ ಮುಗಿದಿದೆ ಎಂದು ಜೆಡಿಎಸ್ ಆರೋಪಿಸಿದ್ದು, ಆನಂದ್ ಅವರು ಎಲ್ಲಿ ಅಮಾನತ್ತುಗೊಳಿಸಲಾಗಿತ್ತು ಅಲ್ಲೇ ನಿಯುಕ್ತಿಗೊಳಿಸಲು ಶಾರದ ಅಪ್ಪಾಜಿ ಗೌಡರು ಆಗ್ರಹಿಸಿದ್ದಾರೆ. ಈ ಬಗ್ಗೆ ಮನವಿ ಸ್ವೀಕರಿಸಿದ ಇಇ ಪ್ರೌಅರಿ ಬೀರಪ್ಪ ಆನಂದ್ ಅವರ ನಿಯುಕ್ತಿಯನ್ನ ಮರು ಪರಿಶೀಲಿಸಲಾಗುವುದಾಗಿ ತಿಳಿಸಿದರು

ಇದನ್ನೂ ಓದಿ-https://suddilive.in/archives/14944

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
close