ಆಯನೂರು ಬಳಿ ಟಾಟಾ ಏಸ್ ಮತ್ತು ಓಮ್ನಿ ನಡುವೆ ಡಿಕ್ಕಿ-ಮೂವರಿಗೆ ಗಾಯ

ಸುದ್ದಿಲೈವ್/ಶಿವಮೊಗ್ಗ

ರಸ್ತೆ ಅಪಘಾತಗಳು ಶಿವಮೊಗ್ಗ ತಾಲೂಕಿನಲ್ಲಿ ಹೆಚ್ಚಾಗ ತೊಡಗಿದೆ. ಅದೂ ಆಯನೂರಿನಲ್ಲಿ ನಿನ್ನೆ ರಾತ್ರಿ ಮತ್ತು ಇಂದು ಮಧ್ಯಾಹ್ನ ಮತ್ತೊಂದು ಅಪಘಾತ ನಡೆದಿದೆ.

ನಿನ್ನೆ ರಾತ್ರಿ ಆಯನೂರು ಪೆಟ್ರೋಲ್ ಬಂಕ್ ಬಳಿ ಪಾದಾಚಾರಿಯ ಮೇಲೆ ಕಾರೊಂದು ಹರಿದು ಸಾವಿಗೆ ಕಾರಣವಾದಂತೆ ಇಂದು ಸಹ ಅದೇ ಪಟ್ಟಣದಲ್ಲಿ ರಸ್ತೆ ಅಪಘಾತವಾಗಿದೆ.

ಸಾಗರ ರಸ್ತೆಯಲ್ಲಿ ಬರುವ ಆಯನೂರು ಪಾರಂಗೂ ಮುಂದೆ ಓಮ್ನಿ ಕಾರೊಂದು ಟಾಟಾ ಏಸ್ ನಡುವೆ ಡಿಕ್ಕಿ ಉಂಟಾಗಿದೆ. ಅಪಘಾತದಲ್ಲಿ ಮೂವರಿಗೆ ರಕ್ತಗಾಯಗಳಾಗಿವೆ. ಅದೃಷ್ಠವಶಾತ್ ಸಧ್ಯಕ್ಕೆ ಯಾರ ಪ್ರಾಣ ಹಾನಿಯಾಗಿಲ್ಲ ಎಂದು ತಿಳಿದು ಬಂದಿದೆ. ಓಮ್ನಿ ಕಾರು ಶಿವಮೊಗ್ಗ ಕಡೆಯಿಂದ ಆಯನೂರು ಕಡೆಗೆ ಬರುವಾಗ ಎದುರಿನಿಂದ ಟಾಟಾ ಏಸ್ ಗೆ ಡಿಕ್ಕಿ ಉಂಟಾಗಿದೆ.

ಕರುಣಾಕರ್, ದರ್ಶನ್ ಮತ್ತು ಮಲ್ಲಿಕಾರ್ಜುನ್ ಅವರಿಗೆ ಹೆಚ್ಚು ಗಾಯವಾಗಿದೆ ಕರುಣಾಕರ್ ಅವರ ಕಾಲು ತುಂಡಾಗಿದೆ. ಇವರೆಲ್ಲರೂ ಮಧ್ಯವಯಸ್ಕಿನವರಾಗಿದ್ದಾರೆ. ಮ್ಯಾಕ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕುಂಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.

ಇದನ್ನೂ ಓದಿ-https://suddilive.in/archives/15366

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close