ವರುಣನಿಗೆ ಕೈಮುಗಿದ ರೈತರು

ಸುದ್ದಿಲೈವ್/ಹೊಳೆಹೊನ್ನೂರು

ಪಟ್ಟಣದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಗುರುವಾರ ಉತ್ತಮ ಮಳೆಯಾಗಿದೆ. ಸಂಜೆ ನಾಲ್ಕು ಘಂಟೆಗೆ ಆರಂಭವಾದ ಮಳೆ ಭಾರೀ ಗಾಳಿ, ಗುಡುಗು ಮತ್ತು ಮಿಂಚು ಸೇರಿದಂತೆ ಸುಮಾರು ಒಂದು ಘಂಟೆ ಕಾಲ ಸತತವಾಗಿ ಸುರಿಯಿತು.

ಯಡೇಹಳ್ಳಿ, ಅಶೋಕನ ನಗರ, ಅಗರದಹಳ್ಳಿ, ಚಂದನಕೆರೆ, ಕಲ್ಲಿಹಾಳ್, ಬೈರನಹಳ್ಳಿ, ಅರಹತೊಳಲು, ಅರಕೆರೆ, ಅರಬಿಳಚಿ, ವಿಠಲಾಪುರ, ಜಂಭರಘಟ್ಟೆ, ಅಗಸನಹಳ್ಳಿ, ಎಮ್ಮೆಹಟ್ಟಿ, ಕೆರೆಬೀರನ ಹಳ್ಳಿ, ಹನುಮಂತಾಪುರ ಸೇರಿದಂತೆ ಎಲ್ಲಾ ಕಡೆಗಳಲ್ಲಿ ಉತ್ತಮ ಮಳೆಯಾಗಿದೆ.

ಕಳೆದ ಮೂರ್ನಾಲ್ಕು ದಿನಗಳಿಂದ ಮಳೆಯ ಮೋಡ ಆವರಿಸುತ್ತಿದ್ದು ಮಳೆ ಮಾತ್ರ ಬಂದಿರಲಿಲ್ಲ. ಇದರಿಂದ ಕಂಗಾಲಾಗಿದ್ದ ರೈತರು ಪ್ರತೀ ದಿನ ಮಳೆಗಾಗಿ ಪ್ರಾರ್ಥಿಸುತ್ತಿದ್ದರು. ಆದರೆ ಗುರುವಾರ ಮಳೆ ಬೀಳಲು ಆರಂಭಿಸಿದ ಕೂಡಲೇ ಸಂತಸಗೊಂಡ ರೈತರು ವರುಣ ದೇವನಿಗೆ ಕೈ ಮುಗಿದು ಸ್ವಾಗತಿಸಿದರು.

ಗುರುವಾರ ಮಳೆ ಬೀಳಲು ಆರಂಭಿಸಿದ ಕೂಡಲೇ ಸಂತಸಗೊಂಡ ರೈತರು ವರುಣ ದೇವನಿಗೆ ಕೈ ಮುಗಿದು ಸ್ವಾಗತಿಸಿದರು.

ಇದನ್ನೂ ಓದಿ-https://suddilive.in/archives/14862

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close