ಮಾನವೀಯತೆ ಮರೆತ ಬ್ಯಾಂಕ್ ಸಿಬ್ಬಂದಿ ಬೀದಿಗೆ ಬಿದ್ದ ಕುಟುಂಬ

ಸುದ್ದಿಲೈವ್/ಶಿಕಾರಿಪುರ

ಸಾಲ ಕಟ್ಟಿಲ್ಲ ಎನ್ನುವ ಕಾರಣಕ್ಕೆ ಮನೆಯಲ್ಲಿದ್ದ ರೋಗಿ ಹೊರಹಾಕಿ ಮನೆ ಸೀಜ್ ಮಾಡಿದ ಘಟನೆ ತಾಲೂಕಿನ ಚನ್ನಹಳ್ಳಿ ಗ್ರಾಮದಲ್ಲಿ ಮಂಗಳವಾರ ನಡೆದಿದ್ದು ಕುಟುಂಬ ಅಕ್ಷರಶಃ ಬೀದಿಗೆ ಬಿದ್ದಿದ್ದು ಅವರಿಗೆ ನೆರವಾಗುವವರು ಯಾರು ಎನ್ನುವ ಪ್ರಶ್ನೆ ಎದುರಾಗಿದೆ.

ಪಟ್ಟಣದ ಖಾಸಗಿ ಬ್ಯಾಂಕ್‌ವೊAದರಲ್ಲಿ ಕಳೆದ ಆರು ವರ್ಷಗಳ ಹಿಂದೆ ಚನ್ನಹಳ್ಳಿ ಗ್ರಾಮದ ಲತಾ ನಾಗರಾಜಪ್ಪ 3.60 ಲಕ್ಷ ರೂ. ಸಾಲ ಸಾಲ ಪಡೆದಿದ್ದರು. ಅದರಲ್ಲಿ ಈಗಾಗಲೆ 3.10ಲಕ್ಷ ರೂ. ಮರುಪಾವತಿಸಿದ್ದಾರೆ. ಇನ್ನೂ 3.65ಲಕ್ಷ ರೂ. ಬಾಕಿ ಇದ್ದು ಅದನ್ನು ಕಟ್ಟುವುದಕ್ಕೆ ಸಮಯ ಕೇಳಿದರೂ ಪ್ರಯೋಜವಾಗಿಲ್ಲ. ಮನೆಯಲ್ಲಿ ಹೆಂಡತಿ, ಮಗ, ಇಲ್ಲದ ಸಂದರ್ಭದಲ್ಲಿ ಪ್ಯಾರಲಿಸಿಸ್ ಪೀಡಿತ ನಾಗರಾಜಪ್ಪ ಅವರಿಗೆ ಮನೆಯಿಂದ ಹೊರಗೆ ಕಳುಹಿಸಿ ಮನೆಯ ಹಿಂಬಾಗಿಲು, ಮುಂಬಾಗಿಲು ಸೀಜ್ ಮಾಡಲಾಗಿದ್ದು ಕುಟುಂಬ ಕಂಗಾಲಾಗಿದೆ. ಕಳೆದ ಮೂರು ದಿನಗಳಿಂದ ಇಡೀ ಕುಟುಂಬ ಅವರಿವರ ಮನೆಯಲ್ಲಿ ಊಟ ಮಾಡುತ್ತಿದ್ದು ಮಗ ದೇವಸ್ಥಾನ ಕಟ್ಟೆಮೇಲೆ ಮಲಗಿದರೆ, ಗಂಡ ಹೆಂಡತಿ ಮತ್ತೊಬ್ಬರ ಮನೆಯಲ್ಲಿ ರಾತ್ರಿ ಆಶ್ರಯ ಪಡೆದಿದ್ದಾರೆ. ಬೆಳಗ್ಗೆ ಆಗುತ್ತಿದ್ದಂತೆ ಹೆಂಡತಿ, ಮಗ ಕೂಲಿ ಕೆಲಸಕ್ಕೆ ಹೋದರೆ ನಾಗರಾಜಪ್ಪ ಅವರಿವರ ಮನೆ ಕಟ್ಟೆ ಮೇಲೆ ಕಾಲಕಳೆಯುತ್ತಿದ್ದಾರೆ.

ಕುಟುಂಬದ ಯಜಮಾನ ನಾಗರಾಜಪ್ಪ ಅವರಿಗೆ 2ವರ್ಷದ ಹಿಂದೆ ಪ್ಯಾರಲಿಸಿಸ್ ಆಗಿದ್ದು ಅಂದಿನಿAದ ಸಾಲದ ಕಂತು ಕಟ್ಟುವುದು ವಿಳಂಬವಾಗಿದೆ. ಕುಟುಂಬಕ್ಕೆ ಇದ್ದ 10ಗುಂಟೆ ಜಮೀನು ಮಾರಾಟ ಮಾಡಿದ್ದು ಹಣ ಬಾರದೆ ಸಮಸ್ಯೆ ಇನ್ನಷ್ಟು ಬಿಗುಡಾಯಿಸಿದೆ. ನಿತ್ಯ ನುಂಗುವ ಗುಳಿಗೆಯೂ ಮನೆಯೊಳಗೆ ಇದ್ದು ಅದನ್ನಾದರೂ ತೆಗೆದುಕೊಡಿ ಎನ್ನುವ ಬೇಡಿಕೆಗೂ ಮನ್ನಣೆ ಸಿಕ್ಕಿಲ್ಲ. ಮನೆಯಿದ್ದರೂ ಬೇರೊಬ್ಬರ ಮನೆ ಆಶ್ರಯದಲ್ಲಿ ಇರಬೇಕಾದ ಅನಿವರ‍್ಯ ಸ್ಥಿತಿಗೆ ತಲುಪಿರುವ ಕುಟುಂಬಕ್ಕೆ ತಾಲೂಕು ಆಡಳಿತ ರಕ್ಷಣೆ ನೀಡಬೇಕು ಎಂದು ಗ್ರಾಮಸ್ಥರು ಕೋರಿದ್ದಾರೆ.

ಇದನ್ನೂ ಓದಿ-https://suddilive.in/archives/15930

ವಕೀಲ ಶ್ರೀಪಾಲ್ ಹೇಳಿಕೆ

ಖಾಸಗಿ ಹಣಕಾಸು ಸಂಸ್ಥೆಗಳು ಆರ್‌ಬಿಐ ನಿಯಮ ಮೀರಿ ಬಡ್ಡಿ ವಸೂಲಿ ಮಾಡುತ್ತಿವೆ. ಸಾಲ ನೀಡುವಾಗ ಅವರಿಗೆ ಅರ್ಥವಾಗದ ನಿಯಮ ಕಟ್ಟಪಾಡಿಗೆ ಸಹಿ ಪಡೆದು ಮೂರರಷ್ಟು ವಸೂಲಿ ಮಾಡುತ್ತಾರೆ ಅದಕ್ಕೆ ಸರಕಾರ ಕಡಿವಾಣ ಹಾಕಬೇಕು. ಅನಾರೋಗ್ಯ ಪೀಡಿತ ವ್ಯಕ್ತಿ ದೃಷ್ಠಿಯಲ್ಲಿಟ್ಟುಕೊಂಡು ಜಿಲ್ಲಾಡಳಿತ ಕುಟುಂಬಕ್ಕೆ ಅಗತ್ಯ ನೆರವು ನೀಡಬೇಕು ಎಂದು ವಕೀಲ ಶ್ರೀಪಾಲ್ ತಿಳಿಸಿದರು.

ಡಿಸಿ ಹೇಳಿಕೆ

ಸಂತ್ರಸ್ತ ವ್ಯಕ್ತಿ ಸಾಲದ ವಿಷಯಕ್ಕೆ ನ್ಯಾಯಾಲಯದ ಮೊರೆ ಹೋಗುವುದು ಅನಿವರ‍್ಯ. ಅವರಿಗೆ ನಿರಾಶ್ರಿತ ಕೇಂದ್ರದಲ್ಲಿ ತಾತ್ಕಾಲಿಕ ನೆರವು ನೀಡಬಹುದು. ಕಾನೂನು ನೆರವು ನೀಡುವುದಕ್ಕೂ ಅವಕಾಶ ಇದ್ದು ಸಂತ್ರಸ್ತರು ಅದರ ಸದುಪಯೋಗ ಪಡೆದುಕೊಳ್ಳಬಹುದು ಎಂದು ಡಿಸಿ ಗುರುದತ್ತ ಹೆಗಡೆ ಹೇಳಿದರು.‌

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close