ಮತ ಎಣಿಕೆ ಮತ್ತು ಪರಿಷತ್ ಚುನಾವಣೆಗೆ ಜಿಲ್ಲಾಡಳಿತ ಸಜ್ಜು

ಸುದ್ದಿಲೈವ್/ಶಿವಮೊಗ್ಗ

ಲೋಕಸಭಾ ಕ್ಷೇತ್ರದ ಎಣಿಕೆ ಕಾರ್ಯ ಜೂ.04 ರಂದು ಸಹ್ಯಾದ್ರಿ ಕಾಲೇಜಿನಲ್ಲಿ ನಡೆಯಲಿದೆ. ಈಗಾಗಲೇ ಮತದಾರರ ಆಯ್ಕೆ ಯಾವುದು ಎಂಬುದು ಇವಿಎಂ ನಲ್ಲಿ ಲಾಕ್ ಆಗಿದ್ದು ಇವಿಎಂ ನ್ನ ಸಹ್ಯಾದ್ರಿ ಕಾಲೇಜಿನ ಸ್ಟ್ರಾಂಗ್ ರೂಂ ನಲ್ಲಿ ನಡೆಯಲಿದೆ.

ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ 17.52 ಲಕ್ಷ ಮತಗಳಲ್ಲಿ, 13,72,949 ಮತಗಳು ಬಿದ್ದಿದ್ದು ಇದನ್ನ 14 ಟೇಬಲ್ ನಲ್ಲಿ ಮತ ಎಣಿಕೆ ಆಗಲಿದೆ. ಶಿವಮೊಗ್ಗ ಗ್ರಾಮಾಂತರ, ಸೊರಬ ಮತ್ತು ಬೈಂದೂರು‌ಕ್ಷೇತ್ರದಲ್ಲಿ 18-21 ರೌಂಡ್ ಎಣಿಕೆ ನಡೆದ ನಂತರ ಚಿತ್ರಣ ದೊರೆಯಲಿದೆ ಎಂದರು.

ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 14 ಮತ ಎಣಿಕೆ ಟೇಬಲ್ ಗಳಿರುತ್ತವೆ. ಜಿಲ್ಲೆಯಲ್ಲಿ 8 ವಿಧಾನ ಸಭಾ ಕ್ಷೇತ್ರವಿದ್ದು 14×8=112 ಮತ ಎಣಿಕೆ ಆಗಲಿದೆ. 5000 ಅಂಚೆ ಮತಗಳಿರುತ್ತವೆ. ಕಙಟ್ರೋಲ್ ಯುನಿಟ್ ಮೂಲಕ ಅಂಚೆ ನತದಾನ ಎಣಿಜೆ ಆಗಲಿದೆ. ಮತ ಎಣಿಜೆ ಕೇಂದ್ರದಲ್ಲಿ ಮೊಬೈಲ್ ನಿರ್ಬಂಧವಾಗಲಿದೆ.

ಇವಿಎಂ ಮತ ಎಣಿಕೆಗಳು ಪೂರ್ಣಗೊಙಡ ನಂತರ ಪ್ರತಿ ವಿಧಾನ ಸಭಾ ಕ್ಷೇತ್ರದಿಂದ ಐದು ವಿವಿ ಪ್ಯಾಟ್ ಗಳ ಎಣಿಜೆಗಳನ್ನ ಒಂದಾದದರ ಮೇಲೆ ಒಂದರಂತೆ ಎಣಿಕೆ ಕಾರ್ಯ ನಡೆಯಲಿದೆ.‌ಮತ ಎಣಿಕೆ ಕೇಂದ್ರದ ಸುತ್ತ ಸೆಕ್ಷನ್ 144 ನ್ನ ಜಾರಿ ನಡೆಸಲಾಗುವುದು. ಚುನಾವಣೆ ಗೆದ್ದ ನಙತರ ಸಂಭ್ರಮಾಚಾರಣೆಗೂ ನಿರ್ಬಂಧವಿರುತ್ತದೆ ಎಂದು ತಿಳಿಸಿದರು.

ಜೂ.03 ರಂದು ನೈರುತ್ಯ ಪದವೀಧರ ಕ್ಷೇತ್ರಮತ್ತು ಶಿಕ್ಷಕರ ಕ್ಷೇತ್ರಕ್ಕೆ ಚುನಾವಣೆ ನಡೆಯಲಿದೆ. ಮತದಾರರಿಗೆ ಅಂದು ಸಾಂಧರ್ಭಿಕ ರಜೆಯೂ ಘೋಷಿಸಲಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ 27,412 ಮತಗಳು ನೈರುತ್ಯ ಪದವೀಧರ ಕ್ಷೇತ್ರದ ಮತದಾರರಿದ್ದಾರೆ. ಶಿಕ್ಷಕರ ಕ್ಷೇತ್ರಕ್ಕೆ 4365 ಮತದಾರರಿದ್ದಾರೆ. ಮತ ಎಣಿಕೆ ಮೈಸೂರಿನಲ್ಲಿ ನಡೆಯಲಿದೆ ಎಂದರು.

ಇದನ್ನೂ ಓದಿ-https://suddilive.in/archives/15885

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close