ಸುದ್ದಿಲೈವ್/ಶಿವಮೊಗ್ಗ
ಮಳೆಹಾನಿಗೊಳಗಾದ ಪ್ರದೇಶಗಳಲ್ಲಿ ಶೀಘ್ರ ಅಗತ್ಯ ಕ್ರಮ ಕೈಗೊಳ್ಳಬೇಕು ಮತ್ತು ಹಾನಿಗೊಳಗಾದ ಪ್ರದೇಶದಲ್ಲಿ ಶೀಘ್ರವೇ ಸರ್ವೆ ನಡೆಸಿ ಸೂಕ್ತ ಪರಿಹಾರ ನೀಡಬೇಕೆಂದು ಆಗ್ರಹಿಸಿ ಎಸ್ ಡಿ ಪಿ ಐ ಜಿಲ್ಲಾ ಶಾಖೆ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿದ್ದಾರೆ.
ಇತ್ತೀಚೆಗೆ ಬಿದ್ದ ಅಕಾಲಿಕ ಮಳೆಗೆ ಚರಂಡಿ ನೀರುಗಳು ಮನೆಗೆ ನುಗ್ಗಿ ಕೋಟ್ಯಾಂತರ ರೂ. ಮೌಲ್ಯದ ವಸ್ತುಗಳು ಹಾನಿಗೊಳಗಾಗಿವೆ. ನಗರ ಸಭೆ ಇದ್ದ ಶಿವಮೊಗ್ಗ ಪಾಲಿಕೆಯಾಗಿ 10 ವರ್ಷಕ್ಕು ಹೆಚ್ಚು ವರ್ಷಗಳು ಕಳೆದರೂ ಚರಂಡಿ ವ್ಯವಸ್ಥೆಯನ್ನ ಸರಿಪಡಿಸಿಕೊಳ್ಳಲು ಸಾಧ್ಯವಾಗಿಲ್ಲ.
ತಗ್ಗುಪ್ರದೇಶಗಳಲ್ಲಿರುವ ಮನೆಗಳು ಮಖೆಯಿಂದಾಗಿ ಬೀಳುವಂತಾಗಿದೆ. ವಾರ್ಡ್ ನಂಬರ್ 12 ರ ಟ್ಯಾಂಕ್ ಮೊಹಲ್ಲಾ ಮತ್ತು ಬಾಪೂಜಿ ನಗರ, ವಾರ್ಡ್ ನಂಬರ್ 25 ಜೆಪಿ ನಗರ, ವಾರ್ಡ್ ನಂಬರ್ 27 ಆನಂದ್ ರಾವ್ ಬಡಾವಣೆ, ಅಣ್ಣಾನಗರ ಮುಖ್ಯ ರಸ್ತೆ, ವಾರ್ಡ್ ನಂ.28 ಆರ್ ಎಂಎಲ್ ನಗರ, ವಾರ್ಡ್ ನಂ 32 ಟಿಪ್ಪುನಗರ ಕೆರೆ ಅಂಗಳ,
ವಾರ್ಡ್ ನಂ. 33 ನ್ಯೂ ಮಂಡ್ಲಿ, ಎನ್ ಟಿ ರಸ್ತೆ, ಸುಲ್ತಾನ್ ಮೊಹಲ್ಲಾ ಇಮಾಮ್ ಬಾಡಾ, ವಾರ್ಡ್ ನಂಬರ್ 34 ರಲ್ಲಿ ವಾದಿಹುದಾ ಬಡಾವಣೆ, ಮೆಹಬೂಬ್ ನಗರಗಳಲ್ಲಿ ಮನೆಗಳಿಗೆ ಚರಂಡಿ ನೀರು ನುಗ್ಗಿ ಹಾನಿಯುಂಟಾಗಿದೆ. ಸ್ಮಾರ್ಟ್ ಸಿಟಿಯಾಗಿರುವ ಶಿವಮೊಗ್ಗಮಳೆ ಬಿದ್ದ ಮೇಲೆ ಎಷ್ಟು ಸ್ಮಾರ್ಟ್ ಆಗಿದೆ ಎಂಬುದು ತಿಳಿದುಬಂದಿದೆ.
ಮಳೆಗಾಲ ಆರಂಭವಾಗುವುದರೊಳಗೆ ರಾಜಕಾಲುವೆಯ ಹೂಳೆತ್ತಬೇಕು. ಮಳೆಹಾನಿಗೊಳಗಾದ ಪ್ರದೇಶಗಳಲ್ಲಿ ಸೂಕ್ತ ಪರಿಹಾರ ನೀಡಬೇಕು ಎಂದು ಸಂಘಟನೆ ಮನವಿಯಲ್ಲಿ ಒತ್ತಾಯಿಸಿದೆ. ಎಸ್ ಡಿಪಿಐ ಜಿಲ್ಲಾ ಅಧ್ಯಕ್ಷ ಇಮ್ರಾನ್ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು.
ಇದನ್ನೂ ಓದಿ-https://suddilive.in/archives/15634