ಸುದ್ದಿಲೈವ್/ಶಿವಮೊಗ್ಗ
ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗಲೆಲ್ಲ ಶಿಕ್ಷಕರಿಗೆ ಮತ್ತು ಪದವೀಧರರಿಗೆ ಅನುಕೂಲ ಮಾಡಿಕೊಟ್ಟಿದೆ ಎಂದು ಪ್ರದೇಶ್ ಕಾಂಗ್ರೆಸ್ ಸಮಿತಿಯ ನೈರುತ್ಯ ಪದವೀಧರ ಕ್ಷೇತ್ರದ ರಾಜ್ಯ ಅಧ್ಯಕ್ಷ ಕುಬೇರಪ್ಲ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ 6 ಜಿಲ್ಲೆಯಲ್ಲಿ 84 ಸಾವಿರ ಮತಗಳನ್ನ ನೈರುತ್ಯ ಕ್ಷೇತ್ರದ ಪದವೀಧರ ಕ್ಷೇತ್ರದಲ್ಲಿದ್ದಾರೆ. ಶಿವಮೊಗ್ಗ ಜಿಲ್ಲೆಯಲ್ಲಿ 27 ಸಾವಿರ ಮತಗಳಿವೆ. 9 ಸಾವಿರ ನಗರದಲ್ಲಿದೆ ಎಂದರು.
7 ನೇ ವೇತನ ಆಯೋಗ ಅಸ್ತಿತ್ವಕ್ಕೆ ಬಂದಿದೆ. ಮದ್ಯಾಂತರ ವರದಿ ನೀಡಿದೆ. ಲೋಕಸಭಾ ಚುನಾವಣೆ ನಂತರ ಮದ್ಯಾಂತರ ವರದಿ ಜಾರಿಯಾಗಲಿದೆ. ಇದರಿಂದ ಶಿಕ್ಷಕರಿಗೆ ಅನುಕೂಲವಾಗಲಿದೆ. 25 ವರ್ಷಗಳ ಕಾಲ ಪದವೀಧರ ಕ್ಷೇತ್ರದಲ್ಲಿದ್ದೇನೆ. ಶಿಕ್ಷಕರಿಗೆ ಮತ್ತು ಪದವೀದರ ಕ್ಷೇತ್ರಕ್ಕೆ ಅನುಕೂಲ ಮಾಡಿಕೊಟ್ಟಿರುವೆ. ಸರ್ಕಾರಿ ಅನುದಾನಿತ ಕಾಲೇಜಿನಲ್ಲಿ ಹುದ್ದೆ ನೀಡಲು ಸಿಎಂ ಸಿದ್ದರಾನಯ್ಯನವರಿಗೆ ಈ ಹಿಂದೆ ಮನವಿ ಮಾಡಿದಾಗ ಮನವಿ ಸ್ವೀಕರಿಸಿದ ಸಿಎಂ 2015 ಕ್ಕೆ ಹುದ್ದೆಯನ್ನ ಭರ್ತಿಮಾಡಿಕೊಂಡಿದ್ದರು.
ಶಿಕ್ಷಕರ ವಯೋಮಿತಿಯನ್ನ ಮೀಸಲಾತಿಗೆ ತಕ್ಕಂತೆ 38-45 ರ ವರಗೆ ಸಡಿಸಲಾಯಿತು. ಸರ್ಕಾರ ಅರೆಕಾಲಿಕ ಉಪನ್ಯಾಸರನ್ನ ಭರಿಸಲಾಯಿತು. 15 ಸಾವಿರ ಪದವಿ ಕಾಲೇಜಿನಲ್ಲಿ ಹೋರಾಟ ನಡೆಸಿದರು. ಅವರಿಗೆ ಸೇವೆಯನ್ನ ತೆಗೆಯದಹಾಗೆ ವರ್ಷ ವರ್ಷ ಇಂಕ್ರಿಮೆಂಟ್, 12 ರಜೆ ಗಳನ್ನ ನಿವೃತ್ತಿಯಾದಾಗ 5 ಲಕ್ಷ ಹಿಡಿಗಂಟು ನೀಡಲು ಆದೇಶವಾಗಿದೆ ಎಂದರು.
ಯುವನಿಧಿಯಲ್ಲಿ ವಿದ್ಯಾರ್ಥಿಗಳ ಬೆಂಬಲ ಸೂಚಿಸಿದ್ದಾರೆ. 7 ನೇ ವೇತನ ಜಾರಿಯಾಗಲಿದೆ. ರಾಜ್ಯದ ಅನುದಾನ ರಹಿತ ಶಾಲಾ ಕಾಲೇಜಿಗೆ ಅನುದಾನ ಸಿಗಲಿದೆ. ಇದರಿಂದ ಬೋಧಕ ಮತ್ತು ಬೋದಕೇತರ ಉಪನ್ಯಾಸಕರಿಗೆ ಅನುಕೂಲವಾಗಲಿದೆ. ಒಪಿಎಸ್ ಮುಂದುವರೆಸಲು ನಿರ್ಧರಿಸಲಾಗಿದೆ. ಇದು ಎಂಎಲ್ ಎ ಚುನಾವಣೆಯ ಪ್ರನಾಳಿಕೆಯಾಗಿದೆ ಎಂದ ಅವರು. ಬಿಜೆಪಿ ಒಪಿಎಸ್ ರದ್ದು ಮಾಡಿ ಹೇಗೆ ಮತ ಕೇಳುತ್ತಾರೆ ಎಂದು ಕುಬೇರಪ್ಪ ಪ್ರಶ್ನಿಸಿದರು.
ಬಿಜೆಪಿ ಯಾವ ಕಾರಣಕ್ಕೆ ಮತ ಕೇಳಲಿದ್ದಾರೆ ಎಂದು ಪ್ರಶ್ನಿಸಿದ ಕುಬೇರಪ್ಪ ನೇಮಕಾತಿಯ ಅನೇಕ ಅನುಕೂಲ ಮಾಡಿಕೊಟ್ಟ ಸಿದ್ದರಾಮಯ್ಯರಿಗೆ ಬೆಂಬಲಿಸುವ ದೃಷ್ಠಿಯಿಂದ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ ಅಭ್ಯರ್ಥಿಗೆ ಬೆಂಬಲಿಸುವಂತೆ ಕೋರಿದರು.
ಎಸ್ಪಿ ದಿನೇಶ್ ಮುಂಚೂಣಿಯಲ್ಲಿದ್ದ ಅಭ್ಯರ್ಥಿ. ಆದರೆ ಪಕ್ಷದ ತೀರ್ಮಾನಕ್ಕೆ ಬದ್ಧವಾಗಬೇಕಿದೆ. ನಾನು ವಿನಂತಿಸಿದ್ದೇವೆ. ಮುಂದಿನ ದಿನಗಳಲ್ಲಿ ಉತ್ತಮ ಭವಿಷ್ಯವಿದೆ ಎಂದಿದ್ದೇವೆ. ನೋಡೋಣ ಎಂದು ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಮಾತನಾಡಿದರು.
ಕೆಪಿಸಿಸಿ ಕಾರ್ಯದರ್ಶಿ ದೇವೇಂದ್ರಪ್ಪ, ಯುವಕಾಂಗ್ರೆಸ್ ನ ವಿನಯ್ ತಾಂಡ್ಲೆ, ಬಾಲಾಜಿ ಶಂಕರ್ ವಟಾರೆ, ಗಿರೀಶ್ ಮೊದಲಾದವರು ಉಪಸ್ಥಿತರಿದ್ದರು.
ಇದನ್ನೂ ಓದಿ-https://suddilive.in/archives/15050