Girl in a jacket

ಅಕ್ರಮ ಬಡ್ಡಿ ವ್ಯವಹಾರದ ಮೇಲೆ ಮುಂದುವರೆದ ಪೊಲೀಸರ ದಾಳಿ

ಸುದ್ದಿಲೈವ್/ಶಿವಮೊಗ್ಗ

ಅಕ್ರಮ ಬಡ್ಡಿ ವ್ಯವಹಾರ ಮಾಡುತ್ತಿದ್ದವರ ವಿರುದ್ಧ ಕೋಟೆ ಪೊಲೀಸರು ದಾಳಿ ನಡೆಸಿದ್ದಾರೆ. ಇದರಿಂದ ಬಡ್ಡಿ ವ್ಯವಹಾರಗಳ ವಿರುದ್ಧ ಪೊಲೀಸರ ಸಮರ ಮುಂದುವರೆದಿದೆ.

ಶಿವಮೊಗ್ಗ ನಗರದ ಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯ ಟ್ಯಾಂಕ್ ಮೊಹಲ್ಲಾದ ಮಹಿಳೆಯೊಬ್ಬರು 04 ವರ್ಷಗಳ ಹಿಂದೆ ಶಿವಮೊಗ್ಗ ಟೌನ್ ಟ್ಯಾಂಕ್ ಮೊಹಲ್ಲಾದ ವಾಸಿ ಸುಪ್ರಿಯಾರವರ ಹತ್ತಿರ 10% ಬಡ್ಡಿಯಂತೆ ಮತ್ತು ಶಿವಮೊಗ್ಗ ಟೌನ್ ಬಾಪೂಜಿ ನಗರದ ವಾಸಿ ವೆನಿಲಾ ರವರಿಂದ 15% ಬಡ್ಡಿಯಂತೆ ಸಾಲವನ್ನು ಪಡೆದುಕೊಂಡಿದ್ದರು.

ಹಣ ಪಡೆದ ಮಹಿಳೆಗೆ ಹಣವನ್ನು ಹಿಂದಿರುಗಿಸಿದರೂ, ಸಹಾ ಬಡ್ಡಿ ಬಾಕಿಯನ್ನು ಅಸಲಿನ ಮೊತ್ತಕ್ಕೆ ಸೇರಿಸಿ ಸಾಲದ ಮೊತ್ತವನ್ನು ಹೆಚ್ಚಿಸಿ ಪದೇ ಪದೇ ಆಸಲು ಮತ್ತು ಬಡ್ಡಿಯನ್ನು ಕೊಡುವಂತೆ ಪೀಡಿಸುತ್ತಿದ್ದರು. ಮಹಿಳೆಯ ಮನೆಯ ಹತ್ತಿರವೂ ಹೋಗಿ ಸಾರ್ವಜನಿಕವಾಗಿ ಅವಾಚ್ಯ ಶಬ್ದಗಳಿಂದ ಬೈದು ಜಾತಿ ನಿಂದನೆ ಮಾಡಿ, ಆಕೆಯ ಮೇಲೆ ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಲಾಗಿದೆ ಎಂದು ಕೋಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿತ್ತು.

ನೀಡಿದ ದೂರಿನ ಮೇರಗೆ ಕೋಟೆ ಪೊಲೀಸ್ ಠಾಣೆಯಲ್ಲಿ Karnataka Prevention of Charging Exorbitant Interest Act 2004, SC & ST (PA Act) ಐಪಿಸಿ ಕಾಯ್ದೆ ಅಡಿಯಲ್ಲಿ ಪ್ರಕರಣವನ್ನು ದಾಖಲಾಗಿತ್ತು.

ಶ್ರೀ ಮಿಥುನ್ ಕುಮಾರ್ ಜಿ ಕೆ, ಐ.ಪಿ.ಎಸ್, ಮಾನ್ಯ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ, ಶ್ರೀ ಅನಿಲ್ ಕುಮಾರ್ ಭೂಮಾರೆಡ್ಡಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರು- 1 ಶಿವಮೊಗ್ಗ ಜಿಲ್ಲೆ ಮತ್ತು ಶ್ರೀ ಕಾರಿಯಪ್ಪ ಎ.ಜಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು-2 ಶಿವಮೊಗ್ಗ ಜಿಲ್ಲೆ ರವರ ಮಾರ್ಗದರ್ಶದಲ್ಲಿ, ಶ್ರೀ ಬಾಬು ಆಂಜನಪ್ಪ ಪೊಲೀಸ್ ಉಪಾಧೀಕ್ಷಕರು, ಶಿವಮೊಗ್ಗ-ಎ ಉಪವಿಭಾಗ ರವರ ಮೇಲ್ವಿಚಾರಣೆಯಲ್ಲಿ ಶ್ರೀ ಗುರುಬಸವರಾಜ್ ಪಿಐ ಕೋಟೆ ಪೊಲೀಸ್ ಠಾಣೆ ಮತ್ತು ಸಿಬ್ಬಂಧಿಗಳ ತಂಡವು The Karnataka Prevention of Charging Exorbitant Interest Act-2004 ನ ಅಡಿಯಲ್ಲಿ ಆರೋಪಿತರಾದ ಸುಪ್ರಿಯಾ ಮತ್ತು ವೆನಿಲಾ ರವರ ಮನೆಗಳ ಮೇಲೆ ದಾಳಿ ನಡೆಸಿದೆ.

ದಾಳಿಯಲ್ಲಿ 54 ಚೆಕ್ ಗಳು, 25 ಬಾಂಡ್ ಪೇಪರ್ ಗಳನ್ನು ಮತ್ತು 1 ಅಗ್ರಿಮೆಂಟ್ ಪೇಪರ್ ಅನ್ನು ವಶಪಡಿಸಿಕೊಂಡು ವಸಪಡಿಸಿಕೊಳ್ಳಲಾಗಿದೆ.‌ ಅಕ್ರಮ ಬಡ್ಡಿ ವ್ಯವಹಾರ ಮಾಡುವವರ ಬಗ್ಗೆ ಮಾಹಿತಿ ಇದ್ದಲ್ಲಿ ಅಥವಾ ಅಕ್ರಮ ಬಡ್ಡಿ ವ್ಯವಹಾರ ಮಾಡಿ ತೊಂದರೆಕೊಡುತ್ತಿದ್ದಲ್ಲಿ ಸಾರ್ವಜನಿಕರು ಹತ್ತಿರದ ಪೊಲೀಸ್ ಠಾಣೆ/ 112 ಸಹಾಯವಾಣಿಗೆ ಮಾಹಿತಿ ಅಥವಾ ದೂರನ್ನು ನೀಡಲು ಕೋರಿದೆ.

ಇದನ್ನೂ ಓದಿ-https://suddilive.in/archives/15496

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
close